ನಾಯಿಗೆ ಚಿತ್ರಹಿಂಸೆ ; ಕ್ರೌರ್ಯ ಮೆರೆದ ವ್ಯಕ್ತಿಗೆ ಒದ್ದು ಬುದ್ದಿ ಕಲಿಸಿದ ಹಸು, ವಿಡಿಯೋ ವೈರಲ್ ! 

21-12-22 09:25 pm       HK News Desk   ದೇಶ - ವಿದೇಶ

ಮನುಷ್ಯರು ಪ್ರಾಣಿಗಳ ಮೇಲೆ ಎಸಗುವ ದೌರ್ಜನ್ಯದಿಂದ ನೆಟ್ಟಿಗರು ಕಂಗಾಲಾಗಿರುವ ಪ್ರಕರಣಗಳು ಸಾಕಷ್ಟಿವೆ. ಇತ್ತೀಚೆಗಷ್ಟೇ ಇಂತಹದೊಂದು ವಿಡಿಯೋವನ್ನು ಅಂತರ್ಜಾಲದಲ್ಲಿ ಶೇರ್ ಮಾಡಲಾಗಿದೆ.

ಮನುಷ್ಯರು ಪ್ರಾಣಿಗಳ ಮೇಲೆ ಎಸಗುವ ದೌರ್ಜನ್ಯದಿಂದ ನೆಟ್ಟಿಗರು ಕಂಗಾಲಾಗಿರುವ ಪ್ರಕರಣಗಳು ಸಾಕಷ್ಟಿವೆ. ಇತ್ತೀಚೆಗಷ್ಟೇ ಇಂತಹದೊಂದು ವಿಡಿಯೋವನ್ನು ಅಂತರ್ಜಾಲದಲ್ಲಿ ಶೇರ್ ಮಾಡಲಾಗಿದೆ. ಇದು ನೋಡುಗರಿಗೆ ತುಂಬಾ ಆಶ್ಚರ್ಯ ಮತ್ತು ಆಘಾತಕಾರಿಯಾಗಿದೆ. ಆದ್ರೆ, ವಿಡಿಯೋದ ಕೊನೆಯಲ್ಲಿ ಏನಾಯ್ತು ಅನ್ನೋದನ್ನ ತಿಳಿದ್ರೆ ನೀವು ಮೂಕವಿಸ್ಮಿತರಾಗುತ್ತೀರಿ. ವಿಡಿಯೋ ಹಳೆಯದಾದರೂ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಒಬ್ಬ ವ್ಯಕ್ತಿ ತನ್ನ ಮೂರ್ಖತನದ ಮೂಲಕ ಜನರ ಮಾನವೀಯತೆಗೆ ಕಳಂಕ ತಂದಿದ್ದಾನೆ. ಕರುಣೆಯಿಲ್ಲದ ವ್ಯಕ್ತಿಯೊಬ್ಬ ನಾಯಿಯನ್ನ ಅದರ ಎರಡು ಕಿವಿಗಳಿಂದ ಹಿಡಿದು ನಿರ್ದಯವಾಗಿ ಥಳಿಸುತ್ತಿರುವುದನ್ನ ವೀಡಿಯೊದಲ್ಲಿ ನೋಡುತ್ತೇವೆ. ಈ ವಿಡಿಯೋ ನಿಮ್ಮ ರಕ್ತ ಕುದಿಯುವಂತೆ ಮಾಡುತ್ತೆ.

ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ಮುಗ್ಧ ನಾಯಿಯನ್ನ ಅದರ ಕಿವಿಯಿಂದ ಎತ್ತಿ ಹಿಂಸೆ ನೀಡಿತ್ತಿದ್ದು, ನಾಯಿ ನೋವಿನಿಂದ ನರಳುತ್ತಿದೆ. ಇದ್ರಿಂದ ಕೋಪಗೊಂಡು ಹಸು, ನಾಯಿಯ ಸಹಾಯಕ್ಕೆ ಬಂದಿದ್ದು, ವ್ಯಕ್ತಿಗೆ ಗುದ್ದಿ ಪಾಠ ಕಲಿಸಿದೆ.

ಹೌದು, ಸಹಾಯಕ್ಕಾಗಿ ಅಳುತ್ತಿದ್ದ ನಾಯಿಯನ್ನು ರಕ್ಷಿಸಲು ಯಾರೂ ಮುಂದಾಗದಿದ್ದಾಗ ಮತ್ತೊಂದು ಪ್ರಾಣಿ ಸಹಾಯಕ್ಕೆ ಮುಂದಾಯಿತು. ವೀಡಿಯೊದಲ್ಲಿ, ಹಸು ನಾಯಿಗೆ ಸಹಾಯ ಮಾಡುವುದನ್ನ ಕಾಣಬಹುದು. ನಾಯಿಗೆ ಮಾಡಿದ ಕ್ರೌರ್ಯವನ್ನ ನೋಡಿದ ಹಸು ತನ್ನ ಕೊಂಬುಗಳಿಂದ ಹೃದಯಹೀನ ವ್ಯಕ್ತಿಯ ಮೇಲೆ ದಾಳಿ ಮಾಡುತ್ತದೆ.

ವೀಡಿಯೊದಲ್ಲಿ, ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು 'ಹೃದಯಹೀನ ವ್ಯಕ್ತಿ… ಕರ್ಮ ಅದಕ್ಕೆ ಶಿಕ್ಷೆ ನೀಡಿತು' ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಲ್ಲಿಯವರೆಗೆ 6 ಲಕ್ಷ ವೀಕ್ಷಣೆಗಳು ಮತ್ತು ಟನ್ಗಳಷ್ಟು ಲೈಕ್ ಪಡೆದಿದೆ.

Humans are believed to be the most intelligent species on the planet, but sometimes events occur that force us to doubt this. In today's world, humans have the least amount of humanity within them, while animals have the greatest. When a cow stopped a man torturing a dog, the horrific video took an unexpected end. The man repeatedly pulled the dog up by its neck as the animal whimpered and moaned in pain, according to a video that has gone viral on the internet.