ಬ್ರೇಕಿಂಗ್ ನ್ಯೂಸ್
23-12-22 10:21 pm HK News Desk ದೇಶ - ವಿದೇಶ
ನವದೆಹಲಿ, ಡಿ.23: ತಮಿಳುನಾಡಿನ ರಾಮೇಶ್ವರದಿಂದ ಶ್ರೀಲಂಕಾದ ದ್ವೀಪದ ನಡುವೆ ಇರುವ ರಾಮ ಸೇತು ಬಗ್ಗೆ ಕಳೆದ ಯುಪಿಎ ಸರಕಾರ ಇದ್ದಾಗ ಬಹಳಷ್ಟು ವಾದ- ವಿವಾದಗಳು ನಡೆದಿದ್ದವು. ಯುಪಿಎ ಸರಕಾರ ರಾಮ ಸೇತು ಅನ್ನುವುದಿಲ್ಲ. ಅದು ರಾಮ ಕಟ್ಟಿದ ಸೇತುವೆ ಅನ್ನುವುದಕ್ಕೆ ಪುರಾವೆ ಇಲ್ಲ ಎಂದು ಹೇಳಿದ್ದನ್ನು ಬಿಜೆಪಿ ಚುನಾವಣಾ ಅಸ್ತ್ರ ಮಾಡಿಕೊಂಡಿತ್ತು. ರಾಮನ ಬಗ್ಗೆ ನಂಬಿಕೆ ಇಲ್ಲದವರು ಕಾಂಗ್ರೆಸಿಗರು ಎಂದು ದೂಷಿಸಿಯೇ ಚುನಾವಣೆ ಎದುರಿಸಿದ್ದರು. ಆದರೆ ಆನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರವೂ ರಾಮ ಸೇತು ಬಗ್ಗೆ ಸಂಶೋಧನೆಗೆ ಮುಂದಾಗಿರಲಿಲ್ಲ. ಇದೀಗ ಈ ಕುರಿತು ಸ್ವತಂತ್ರ ಸಂಸದರೊಬ್ಬರು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ, ಕೇಂದ್ರ ಸರಕಾರ ಅಡ್ಡಗೋಡೆಗೆ ದೀಪ ಇಟ್ಟ ರೀತಿ ಉತ್ತರ ಕೊಟ್ಟು ನಗೆಪಾಟಲಿಗೀಡಾಗಿದೆ.
ಹರ್ಯಾಣದ ಸ್ವತಂತ್ರ ಸಂಸದ ಕಾರ್ತಿಕೇಯ ಶರ್ಮಾ ರಾಜ್ಯಸಭೆಯಲ್ಲಿ ಈ ಕುರಿತು ಪ್ರಶ್ನೆ ಎತ್ತಿದ್ದರು. ಈ ಹಿಂದಿನ ಸರಕಾರ ರಾಮ ಸೇತು ಬಗ್ಗೆ ಅಸಡ್ಡೆ ವಹಿಸಿತ್ತು. ಈಗಿನ ಸರಕಾರವಾದ್ರೂ ಈ ದೇಶದ ಅದ್ಭುತ ಚರಿತ್ರೆಗೆ ಸಾಕ್ಷಿಯಾಗಿರುವ ರಾಮ ಸೇತು ಬಗ್ಗೆ ವೈಜ್ಞಾನಿಕ ಸಂಶೋಧನೆಗೆ ಮುಂದಾಗಿದೆಯೇ ಎಂಬ ಪ್ರಶ್ನೆಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಅಸಡ್ಡೆಯ ಉತ್ತರ ನೀಡಿದ್ದಾರೆ. ಸರಳವಾಗಿ ಹೇಳುವುದಾದರೆ, ರಾಮ ಸೇತು ಅಲ್ಲಿ ಇದೆಯೇ ಅನ್ನುವುದನ್ನು ಹೇಳಲು ಕಷ್ಟಸಾಧ್ಯ. ಅಲ್ಲಿ ಸಿಕ್ಕಿರುವ ಕೆಲವು ಅಂಶಗಳನ್ನು ನೋಡಿದರೆ, ಅಲ್ಲಿ ಏನೋ ಗಟ್ಟಿ ರಚನೆಗಳು ಇರುವುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ರಾಮ ಸೇತು ಕುರಿತು ಸ್ವತಂತ್ರ ಸಂಸದರೊಬ್ಬರು ಪ್ರಶ್ನೆ ಮಾಡಿದ್ದಕ್ಕೆ ಸಂತಸ ಪಡುತ್ತೇನೆ. ಆದರೆ ಈ ಪ್ರಶ್ನೆಗೆ ಉತ್ತರಿಸಲು ಅಷ್ಟು ಸುಲಭ ಇಲ್ಲ. ಕೆಲವು ಲಿಮಿಟೇಶನ್ ನಮಗೆ ಅಡ್ಡ ಬರುತ್ತವೆ. ಯಾಕಂದ್ರೆ, ಇದು 18 ಸಾವಿರ ವರ್ಷಗಳ ಹಿಂದಿನದ್ದು. ಅಷ್ಟು ಸುದೀರ್ಘ ವರ್ಷಗಳ ಹಿಂದೆ 56 ಕಿಮೀ ಉದ್ದದ ಸೇತುವೆ ಇತ್ತೆನ್ನುವ ಬಗ್ಗೆ ವೈಜ್ಞಾನಿಕ ಆಧಾರಗಳಿಲ್ಲ. ಆದರೆ ಸ್ಪೇಸ್ ಟೆಕ್ನಾಲಜಿ ಪ್ರಕಾರ, ಆ ನಿರ್ದಿಷ್ಟ ಜಾಗದಲ್ಲಿ ಕೆಲವು ನಿರ್ದಿಷ್ಟ ಆಕಾರದ ಕಲ್ಲುಗಳು ದೊರೆತಿವೆ. ಹಿಂದು ಮಹಾಸಾಗರದ ಕೆಲವು ದ್ವೀಪ ಪ್ರದೇಶದಲ್ಲಿ ಅದೇ ಮಾದರಿಯ ಸುಣ್ಣದ ಕಲ್ಲುಗಳು ಪತ್ತೆಯಾಗಿವೆ. ಹಾಗಾಗಿ, ಲಂಕಾ – ರಾಮೇಶ್ವರ ನಡುವಿನ ರಚನೆಗಳು ಶ್ರೀರಾಮನೇ ಕಟ್ಟಿದ ಸೇತುವೆ ಅನ್ನುವುದನ್ನು ಹೇಳುವುದು ಕಷ್ಟ. ಆದರೆ ಅಲ್ಲಿ ಕಂಡುಬಂದಿರುವ ಕೆಲವು ರಚನೆಗಳು ಅಲ್ಲೇನೋ ವಿಶೇಷ ರೀತಿಯ ರಚನೆ ಇದೆ ಅನ್ನುವುದನ್ನು ತೋರಿಸುತ್ತದೆ ಎಂದಿದ್ದಾರೆ. ಹಾಗಿದ್ದರೂ, ದ್ವಾರಕಾ ಮತ್ತಿತರ ಚಾರಿತ್ರಿಕ ಸ್ಥಳಗಳ ಬಗ್ಗೆ ಸಂಶೋಧನೆ ಮುಂದುವರಿಸುವಲ್ಲಿ ಸರಕಾರದ ಪ್ರಯತ್ನ ಇದೆ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಇದರ ಬೆನ್ನಲ್ಲೇ ಕಾಂಗ್ರೆಸ್ ಸಂಸದ ಪವನ್ ಖೇರಾ, ಆಡಳಿತಾರೂಢ ಬಿಜೆಪಿ ಬಗ್ಗೆ ಹೀಗಳೆದಿದ್ದಾರೆ. ಎಲ್ಲ ರಾಮನ ಭಕ್ತರೂ ಈ ಬಗ್ಗೆ ಕಿವಿಯರಳಿಸಿ ಕೇಳಿಕೊಳ್ಳಿ. ಕಣ್ಣು ತೆರೆದು ನೋಡಿಕೊಳ್ಳಿ. ರಾಮ ಸೇತು ಇರುವುದಕ್ಕೆ ಯಾವುದೇ ಸಾಕ್ಷ್ಯ ಇಲ್ಲವೆಂದು ಮೋದಿ ಸರಕಾರ ಸಂಸತ್ತಿನಲ್ಲಿ ಹೇಳ್ತಾ ಇದೆ ಎಂದು ಟ್ವಿಟರ್ ನಲ್ಲಿ ಬರೆದು ವ್ಯಂಗ್ಯವಾಡಿದ್ದಾರೆ.
ರಾಮಾಯಣದ ಮೂಲ ಸಂಸ್ಕೃತ ಗ್ರಂಥದಲ್ಲಿ ಶ್ರೀರಾಮನೇ ಲಂಕಾಕ್ಕೆ ತೆರಳುವುದಕ್ಕಾಗಿ ವಾನರ ಸೇನೆಯ ಜೊತೆ ಸೇರಿ ರಾಮ ಸೇತು ಕಟ್ಟಿದ್ದ ಎಂದು ಉಲ್ಲೇಖ ಆಗಿತ್ತು. ಇದೇ ಹಿನ್ನೆಲೆಯಲ್ಲಿ ರಾಮ ಸೇತು ಬಗ್ಗೆ ದೇಶಾದ್ಯಂತ ಪವಿತ್ರ ಭಾವನೆ ಇದೆ. ಇದೇ ವಿಚಾರದಲ್ಲಿ ಕಳೆದ ಯುಪಿಎ ಸರಕಾರ ಇದ್ದಾಗ, ಕರುಣಾನಿಧಿ ಮತ್ತಿತರ ತಮಿಳು ನಾಯಕರು ರಾಮ ಎನ್ನುವುದೇ ಕಾಲ್ಪನಿಕ ಎಂದಾಗ ಬಿಜೆಪಿ ಸಂಸದರು ಕಿಡಿಕಾರಿದ್ದರು. ಬಿಜೆಪಿ ಸಂಸದ ಸುಬ್ರಹ್ಮಣ್ಯ ಸ್ವಾಮಿ ಇದೇ ವಿಚಾರದಲ್ಲಿ ಸುಪ್ರೀಂ ಕೋರ್ಟಿಗೆ ಅಪೀಲು ಹಾಕಿದ್ದರು. ಆ ಕುರಿತ ಪ್ರಕರಣ ಈಗಲೂ ವಿಚಾರಣೆಯಲ್ಲಿದೆ. ಈ ಬಗ್ಗೆ ಕೇಂದ್ರ ಸರಕಾರದಿಂದ ಅಭಿಪ್ರಾಯವನ್ನೂ ಕೋರ್ಟ್ ಕೇಳಿತ್ತು. ಇಂಥ ಸಂದರ್ಭದಲ್ಲಿಯೇ ಸಂಸತ್ತಿನಲ್ಲಿ ಕೇಂದ್ರದ ಸಚಿವರೊಬ್ಬರು ಈ ರೀತಿ ಹೇಳಿಕೆ ಕೊಟ್ಟು ಭಕ್ತ ಜನರನ್ನು ನಡು ಬೀದಿಯಲ್ಲಿ ಬಿಟ್ಟಿದ್ದಾರೆ.
ರಾಮ ಸೇತು ಒಡೆಯಲು ಮುಂದಾಗಿದ್ದ ಯುಪಿಎ
ಸರಕು ಸಾಗಿಸುವ ಬೃಹತ್ ಹಡಗುಗಳು ರಾಮ ಸೇತು ಇರುವಲ್ಲಿ ಸಾಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಮ ಸೇತು ಇರುವಲ್ಲಿ ಅದನ್ನು ಒಡೆದು ಹಡಗು ಸಾಗಲು ಕಾಲುವೆ ರೀತಿ ಮಾಡಬೇಕು ಅನ್ನುವ ಯೋಜನೆಯನ್ನು ಯುಪಿಎ ಕಾಲದಲ್ಲಿ ಮಾಡಲಾಗಿತ್ತು. ಆದರೆ ರಾಮ ಸೇತು ಒಡೆಯುವುದಕ್ಕೆ ಭಾರೀ ವಿರೋಧ ಎದುರಾಗಿತ್ತು. ದೇಶಾದ್ಯಂತ ಹಿಂದು ಸಂಘಟನೆಗಳು, ವಿಶ್ವ ಹಿಂದು ಪರಿಷತ್, ಸಾಧು ಸಂತರು ವಿರೋಧ ವ್ಯಕ್ತಪಡಿಸಿದ್ದರು. ಅದಕ್ಕೆ ಬಿಜೆಪಿ ನಾಯಕರು ಕೂಡ ಸಾಥ್ ಕೊಟ್ಟಿದ್ದರು. ರಾಮ ಸೇತು ಒಡೆಯುವುದಕ್ಕೆ ಬಿಡುವುದಿಲ್ಲ ಎಂದಿದ್ದರು. ಅದೇ ವಿಚಾರದಲ್ಲಿ ಬಿಜೆಪಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ಸುಪ್ರೀಂ ಕೋರ್ಟಿಗೆ ದೂರು ಸಲ್ಲಿಸಿದ್ದರು. ಸರಕು ಹಡಗುಗಳು ಹಿಂದು ಮಹಾಸಾಗರದಲ್ಲಿ ಶ್ರೀಲಂಕಾವನ್ನು ಸುತ್ತು ಹಾಕಿಕೊಂಡೇ ಸಾಗ ಬೇಕಿರುವುದರಿಂದ ರಾಮ ಸೇತು ಒಡೆದು ಕಾಲುವೆ ಮಾಡಿದಲ್ಲಿ ಅಷ್ಟು ಸುದೀರ್ಘ ಕಾಲದ ಪಯಣ ಮತ್ತು ಇಂಧನ ಉಳಿಯುವುದಲ್ಲವೇ ಎನ್ನುವ ವಾಣಿಜ್ಯ ಚಿಂತನೆಯಡಿ ಯುಪಿಎ ಕಾಲದಲ್ಲಿ ಸೇತು ಸಮುದ್ರಂ ಯೋಜನೆ ಹಾಕಲಾಗಿತ್ತು.
The debate on Ram Setu, also known as Adam's Bridge, has come up yet again. This time, the issue was raised by an Independent MP from Haryana, Kartikeya Sharma, in Rajya Sabha. In a reply to his query of scientific research on the structure, the government said, "If it is said in simple words, it is difficult to say that the real form of Ram Setu is present there. However, there are some indications which suggest that the structure may be present there."
11-01-25 10:53 pm
HK News Desk
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 10:34 pm
Mangalore Correspondent
Mangalore Lit Fest 2025, Hardeep Singh Puri;...
11-01-25 07:19 pm
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm