ನೋಟು ಅಮಾನ್ಯ ; ಕೇಂದ್ರ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಪೀಠದಿಂದ ಸಮ್ಮತಿ, ನಾಲ್ವರು ಜಡ್ಜ್ ಸಹಮತ, ಕಾನೂನು ಬಾಹಿರ ನಡೆಯೆಂದ ಜಸ್ಟಿಸ್ ಬಿವಿ ನಾಗರತ್ನ !  

02-01-23 01:00 pm       HK News Desk   ದೇಶ - ವಿದೇಶ

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರಕಾರ 2016ರಲ್ಲಿ ಕೈಗೊಂಡಿದ್ದ ನೋಟು ಅಮಾನ್ಯೀಕರಣ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ನವದೆಹಲಿ, ಜ.2: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರಕಾರ 2016ರಲ್ಲಿ ಕೈಗೊಂಡಿದ್ದ ನೋಟು ಅಮಾನ್ಯೀಕರಣ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠದಲ್ಲಿ ನಾಲ್ಕು ಮಂದಿ ಕೇಂದ್ರ ಸರಕಾರದ ಪರ ತೀರ್ಪು ನೀಡಿದರೆ, ಜಸ್ಟಿಸ್ ಬಿವಿ ನಾಗರತ್ನ ವಿರುದ್ಧ ತೀರ್ಪು ನೀಡಿದ್ದಾರೆ.

500 ರೂ. ಮತ್ತು ಒಂದು ಸಾವಿರದ ನೋಟುಗಳನ್ನು ಅಮಾನ್ಯಗೊಳಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ 58 ಅರ್ಜಿಗಳು ಸಲ್ಲಿಕೆಯಾಗಿದ್ದವು. ಕಳೆದ 2-3 ವರ್ಷಗಳಲ್ಲಿ ಕೋರ್ಟಿನಲ್ಲಿ ಭಾರೀ ಜಟಾಪಟಿಯೂ ನಡೆದಿತ್ತು. ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅರ್ಜಿದಾರರ ಪರವಾಗಿ ಕೋರ್ಟಿನಲ್ಲಿ ವಾದ ಮಂಡಿಸಿದ್ದರು. ಆರ್ ಬಿಐ 1934ರ ಕಾಯ್ದೆಯ 26(2)ರ ಪ್ರಕಾರ ಅಸಾಂವಿಧಾನಿಕ ಎಂದು ವಕೀಲರು ವಾದಿಸಿದ್ದರು. ಈ ಬಗ್ಗೆ ಕೇಂದ್ರ ಸರಕಾರದ ಪರವಾಗಿಯೂ ವಾದ ಮಂಡನೆಯಾಗಿದ್ದು, ಸರಕಾರದ ನಿರ್ಧಾರವನ್ನು ಕೋರ್ಟಿನಲ್ಲಿ ಪ್ರಶ್ನೆ ಮಾಡಲಾಗದು ಎಂದು ವಾದಿಸಲಾಗಿತ್ತು.

SC upholds demonetisation by 4:1 majority: Understanding the verdict  through 10 points

ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಿದ್ದು, ಐದು ಸದಸ್ಯರ ಪೀಠದಲ್ಲಿ ನಾಲ್ವರು ಒಂದೇ ರೀತಿಯ ತೀರ್ಪು ನೀಡಿದ್ದಾರೆ. ಬಿವಿ ನಾಗರತ್ನ ತಮ್ಮ ತೀರ್ಪಿನಲ್ಲಿ ಕೇಂದ್ರ ಸರಕಾರದ ಪೂರ್ವ ನಿಯೋಜಿತವಾಗಿ ಈ ನಿರ್ಧಾರ ತೆಗೆದುಕೊಂಡಿತ್ತು. ಆದರೆ ದಿಢೀರ್ ಕ್ರಮದಿಂದ ಯಾವ ಸಾಧನೆ ಆಗಿದೆ ಎಂಬುದನ್ನು ನಿರೂಪಿಸಲು ಸೋತಿದೆ. ಕಪ್ಪು ಹಣ, ಟೆರರ್ ಫಂಡಿಂಗ್ ವಿಚಾರದಲ್ಲಿ ಈ ಕ್ರಮ ತೆಗೆದುಕೊಂಡಿದ್ದರೂ, ಕಾನೂನು ರೀತ್ಯ ಈ ರೀತಿಯ ನಡೆ ಅಸಾಂವಿಧಾನಿಕ ಎಂದು ಹೇಳಿದ್ದಾರೆ. ಸಂಸತ್ತಿನಲ್ಲಿ ಚರ್ಚಿಸಿಯೇ ಇಂತಹ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಈ ನಿರ್ಧಾರದಿಂದಾಗಿ ಅಸಂಖ್ಯಾತ ಸಾಮಾನ್ಯ ಜನರು ಕಷ್ಟ ಪಡುವಂತಾಗಿತ್ತು ಎಂದು ಹೇಳಿದ್ದಾರೆ.

PM Modi launches 2 RBI schemes. All about the central bank initiatives -  Hindustan Times

ಇದರೊಂದಿಗೆ ನೋಟು ಅಮಾನ್ಯ ವಿರುದ್ಧ ಸಲ್ಲಿಸಿದ್ದ ಅರ್ಜಿಗಳನ್ನು ಕೋರ್ಟ್ ವಜಾ ಮಾಡಿದೆ. ನೋಟು ಅಮಾನ್ಯದ ಬಗ್ಗೆ ನಿರ್ಧಾರ ಕೈಗೊಳ್ಳಲು ಸಂಸತ್ತಿಗೆ ಅಧಿಕಾರ ಇದೆ ಎಂದು ನಾಲ್ವರು ನ್ಯಾಯಮೂರ್ತಿಗಳು ತೀರ್ಪು ನೀಡಿದ್ದಾರೆ. ಆದರೆ ಆರ್ ಬಿಐ ಕಾಯ್ದೆ ಪ್ರಕಾರ, ನೋಟು ಅಮಾನ್ಯೀಕರಣದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಂಡಳಿಯಿಂದಲೇ ಶಿಫಾರಸು ಆಗಬೇಕು ವಿನಾ ಸಂಸತ್ತು ನಿರ್ಧಾರ ಮಾಡುವುದಲ್ಲ. ಈ ಪ್ರಕರಣದಲ್ಲಿ ನವೆಂಬರ್ 7ರಂದು ಕೇಂದ್ರವು ಆರ್ ಬಿಐಗೆ ಪತ್ರ ಬರೆದು ನೋಟು ಅಮಾನ್ಯದ ಬಗ್ಗೆ ಸಲಹೆಯನ್ನು ಕೇಳಿತ್ತು ಎಂದು ಅರ್ಜಿದಾರರು ವಾದಿಸಿದ್ದರು.

A Constitution Bench of the Supreme Court Monday upheld by a 4:1 majority the decision taken by the central government six years ago in 2016 to demonetise currency notes of Rs 500 and Rs 1,000 denominations. The majority, comprising Justices S Abdul Nazeer, B R Gavai, A S Bopanna, V Ramasubramanian, held that the Centre’s notification dated November 8, 2016, was valid and satisfied the test of proportionality.