18 ಕ್ಯಾರೆಟ್‌ ಚಿನ್ನದಿಂದ ಪ್ರಧಾನಿ ಮೋದಿ ಪ್ರತಿಮೆ ತಯಾರಿಸಿದ ಅಭಿಮಾನಿ !

21-01-23 12:57 pm       HK News Desk   ದೇಶ - ವಿದೇಶ

ಇತ್ತೀಚೆಗೆ ಜರುಗಿದ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ರಾಜ್ಯದ ಸೂರತ್‌ ನಗರದ ಜ್ಯುವೆಲ್ಲರಿ ಅಂಗಡಿಯ ಮಾಲೀಕರೊಬ್ಬರು 156 ಗ್ರಾಂ ತೂಕದ, 18 ಕ್ಯಾರೆಟ್‌ ಚಿನ್ನದಿಂದ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆಯನ್ನು ತಯಾರಿಸಿದ್ದಾರೆ.

ಸೂರತ್‌, ಜ 21: ಇತ್ತೀಚೆಗೆ ಜರುಗಿದ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ರಾಜ್ಯದ ಸೂರತ್‌ ನಗರದ ಜ್ಯುವೆಲ್ಲರಿ ಅಂಗಡಿಯ ಮಾಲೀಕರೊಬ್ಬರು 156 ಗ್ರಾಂ ತೂಕದ, 18 ಕ್ಯಾರೆಟ್‌ ಚಿನ್ನದಿಂದ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಮೆಯನ್ನು ತಯಾರಿಸಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಗುಜರಾತ್‌ನ 182 ಸ್ಥಾನಗಳ ಪೈಕಿ 156ರಲ್ಲಿ ಬಿಜೆಪಿ ಗೆಲುವು ಸಾಧಿಸಿತು. ನಾನು ಮೋದಿ ಅವರ ಅಭಿಮಾನಿಯಾಗಿದ್ದೇನೆ. ಅವರಿಗೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ 156 ಗ್ರಾಂ ತೂಕದ ಅವರ ಪ್ರತಿಮೆಯನ್ನು ತಯಾರಿಸಲಾಗಿದೆ.

ನಮ್ಮ ಕಾರ್ಖಾನೆಯಲ್ಲಿ 20 ಮಂದಿ ಕುಶಲಕರ್ಮಿಗಳು ಸುಮಾರು ಮೂರು ತಿಂಗಳಲ್ಲಿ ಈ ಪ್ರತಿಮೆ ತಯಾರಿಸಿದ್ದಾರೆ,’ ಎಂದು ರಾಧಿಕಾ ಚೈನ್ಸ್‌ ಮಾಲೀಕ ಬಸಂತ್‌ ಬೊಹ್ರಾ ತಿಳಿಸಿದ್ದಾರೆ. ಮೋದಿ ಅವರ ಚಿನ್ನದ ಪ್ರತಿಮೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

A jeweller from Gujarat's Surat city has carved a bust of Prime Minister Narendra Modi, weighing 156 gm in 18-carat gold to commemorate the Bharatiya Janata Party's landslide victory in the recently held State Assembly election. As the BJP won 156 out of 182 seats in the polls held in December last year, the weight of the Prime Minister's gold bust was kept at 156 gram, said Basant Bohra, owner of jewellery making firm, Radhika Chains.