ಅಪರೂಪದ ಸೋಂಕು ಮೆದುಳು ತಿನ್ನುವ ಅಮೀಬಾ ಕೇರಳದಲ್ಲಿ ಪತ್ತೆ ; ಮೂವರು ಮಕ್ಕಳ ಸಾವು ಹಿನ್ನೆಲೆ ಹೈಎಲರ್ಟ್, ರೋಗ ಲಕ್ಷಣ ಏನು ? ನೀರಿನಲ್ಲಿ ಬರುತ್ತಂತೆ ಈ ಸೋಂಕು ? ಮನುಷ್ಯನಿಂದ ಹರಡುತ್ತದೆಯೇ ಇತ್ಯಾದಿ..

08-07-24 07:23 pm       HK News Desk   ದೇಶ - ವಿದೇಶ

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಎನ್ನುವ ಹೊಸ ರೋಗವೊಂದು ಪತ್ತೆಯಾಗಿದೆ. ಉತ್ತರ ಕೇರಳದ ಕೋಜಿಕ್ಕೋಡ್ ಜಿಲ್ಲೆಯ ಪಯ್ಯೋಳಿಯಲ್ಲಿ ಎರಡು ದಿನಗಳ ಹಿಂದೆ 14 ವರ್ಷದ ಬಾಲಕನೊಬ್ಬ ಈ ರೋಗಕ್ಕೆ ತುತ್ತಾಗಿ ಸಾವಿಗೀಡಾಗಿದ್ದಾನೆ. ಎರಡು ತಿಂಗಳಲ್ಲಿ ಈ ರೋಗದಿಂದಾಗಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂಬುದನ್ನು ಕೇರಳ ಸರಕಾರ ದೃಢಪಡಿಸಿದೆ.

ತಿರುವನಂತಪುರ, ಜುಲೈ 8: ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಎನ್ನುವ ಹೊಸ ರೋಗವೊಂದು ಪತ್ತೆಯಾಗಿದೆ. ಉತ್ತರ ಕೇರಳದ ಕೋಜಿಕ್ಕೋಡ್ ಜಿಲ್ಲೆಯ ಪಯ್ಯೋಳಿಯಲ್ಲಿ ಎರಡು ದಿನಗಳ ಹಿಂದೆ 14 ವರ್ಷದ ಬಾಲಕನೊಬ್ಬ ಈ ರೋಗಕ್ಕೆ ತುತ್ತಾಗಿ ಸಾವಿಗೀಡಾಗಿದ್ದಾನೆ. ಎರಡು ತಿಂಗಳಲ್ಲಿ ಈ ರೋಗದಿಂದಾಗಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂಬುದನ್ನು ಕೇರಳ ಸರಕಾರ ದೃಢಪಡಿಸಿದೆ.

ಇದರ ಬೆನ್ನಲ್ಲೇ ಮೆದುಳು ತಿನ್ನುವ ಅಮೀಬಾ ಎಂದರೇನು ಅನ್ನುವ ಬಗ್ಗೆ ದೇಶಾದ್ಯಂತ ಜನರಲ್ಲಿ ಕುತೂಹಲ ಉಂಟಾಗಿದೆ. ಈ ರೋಗದ ಬಗ್ಗೆ ತಿಳಿದುಕೊಳ್ಳಲು ಗೂಗಲ್ ನಲ್ಲಿ ಅತಿ ಹೆಚ್ಚು ಜನ ಸರ್ಚ್ ಮಾಡುತ್ತಿದ್ದಾರೆ. ಪಯ್ಯೋಳಿ ಗ್ರಾಮದ ಹುಡುಗನಿಗೆ ಜೂನ್ 24ರಂದು ತೀವ್ರ ಜ್ವರದ ಕಾರಣಕ್ಕೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜುಲೈ 1ರಂದು ಆತನಿಗೆ ಈ ರೀತಿಯ ಹೊಸ ರೋಗ ಇರುವುದು ದೃಢಪಟ್ಟಿದ್ದು, ಅದಾಗಿ ಎರಡು ದಿನದಲ್ಲಿ ಬಾಲಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದ. ಈ ಹಿಂದೆ ಮೇ ಮತ್ತು ಜೂನ್ ತಿಂಗಳಲ್ಲಿ ಇಬ್ಬರು ಮಕ್ಕಳು ಇದೇ ಕಾಯಿಲೆಗೆ ತುತ್ತಾಗಿ ಕೇರಳದಲ್ಲಿ ಸಾವು ಕಂಡಿದ್ದರು. ಮಲಪ್ಪುರಂ ಜಿಲ್ಲೆಯಲ್ಲಿ 5 ವರ್ಷದ ಹೆಣ್ಣು ಮಗು ಮೇ 21ರಂದು ಹಾಗೂ ಕಣ್ಣೂರಿನಲ್ಲಿ 13 ವರ್ಷದ ಬಾಲಕಿ ಜೂನ್ 25ರಂದು ಸಾವನ್ನಪ್ಪಿದ್ದು ಇದೇ ಕಾರಣದಿಂದ ಎಂಬುದು ಪತ್ತೆಯಾಗಿತ್ತು.

ಮೆದುಳು ತಿನ್ನುವ ಅಮೀಬಾ ಎಂದರೇನು ?

Naegleria Fowleri ಎಂದು ವೈಜ್ಞಾನಿಕ ಹೆಸರನ್ನು ಹೊಂದಿರುವ ಈ ರೋಗವನ್ನು ಮೆದುಳು ತಿನ್ನುವ ಅಮೀಬಾ ಸೋಂಕು ಎಂದೂ ಕರೆಯುತ್ತಾರೆ. ಅತ್ಯಂತ ಅಪರೂಪದ ಸೋಂಕು ಆಗಿರುವ ಇದರ ಪತ್ತೆ ವಿಳಂಬವಾದರೆ ಮಾರಣಾಂತಿಕ. 2ರಿಂದ 15 ದಿನದ ಒಳಗಡೆ ಸೋಂಕಿನ ಲಕ್ಷಣ ಕಂಡುಬರುತ್ತದೆ. ವೈರಲ್ ಜ್ವರದ ರೀತಿಯೇ ಇರುವುದರಿಂದ ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ತೀವ್ರ ಜ್ವರ, ತೀವ್ರ ತಲೆನೋವು, ವಾಂತಿ, ಕುತ್ತಿಗೆ ನೋವು ಇದರ ಲಕ್ಷಣ. ರೋಗ ಸ್ಥಿತಿ ಉಲ್ಬಣಗೊಂಡರೆ, ವ್ಯಕ್ತಿ ಸ್ಥಿಮಿತ ಕಳಕೊಳ್ಳುತ್ತಾನೆ. ಶರೀರದ ಬ್ಯಾಲೆನ್ಸ್ ಕಳಕೊಂಡು ಕೋಮಾಕ್ಕೆ ಜಾರುತ್ತಾನೆ.

ಈ ರೋಗ ಎಲ್ಲಿಂದ ಹರಡುತ್ತದೆ ?

ಅಮೆರಿಕದ ದಕ್ಷಿಣ ಭಾಗದ ಫ್ಲೋರಿಡಾ ಸೇರಿದಂತೆ ಕೆಲವು ಕಡೆ ಅತ್ಯಂತ ಅಪರೂಪದಲ್ಲಿ ಈ ಸೋಂಕು ಕಂಡುಬಂದಿತ್ತು. ವರ್ಷದಲ್ಲಿ ಏಳೆಂಟು ವರದಿ ಮಾತ್ರ ಆಗಿತ್ತು. ಅಮೆರಿಕದ ತಜ್ಞರ ಪ್ರಕಾರ, ಇದು ನಿಂತ ನೀರಿನಲ್ಲಿ ಹರಡುವುದಂತೆ. ನದಿ, ಸರೋವರ, ಸರಿಯಾಗಿ ನಿರ್ವಹಣೆ ಇಲ್ಲದ ಈಜು ಕೊಳಗಳಲ್ಲಿ ಈ ರೀತಿಯ ಸೋಂಕು ಹರಡುತ್ತದೆ. ಕೊಳಚೆ ನೀರಿನಲ್ಲಿ ಆಟವಾಡುವುದು ಅಥವಾ ಅಂತಹ ರೋಗಾಣು ಇರಬಹುದಾದ ನೀರಿನಲ್ಲಿ ಆಟವಾಡಿದರೆ ಮೂಗಿನ ಮೂಲಕ ರೋಗಾಣು ಮೆದುಳಿಗೆ ಸೇರಿದರೆ ರೋಗ ಬರಬಹುದು. ಆದರೆ ಇದು ಮನುಷ್ಯನಿಂದ ಮುನುಷ್ಯನಿಗೆ ಹರಡುವುದಿಲ್ಲ. ರೋಗ ಇದ್ದವರಿಂದ ಅಂಗಾಂಗ ಪಡೆದು ಕಸಿ ಮಾಡಿದರೆ ಮಾತ್ರ ಹರಡಬಹುದು ಎನ್ನುತ್ತಾರೆ. ಆದರೆ ದೂರದ ಅಮೆರಿಕದಲ್ಲಿ ಮಾತ್ರ ಇದ್ದ ರೋಗಾಣು ಕೇರಳಕ್ಕೆ ಹೇಗೆ ಬಂತು ಎನ್ನುವುದಕ್ಕೆ ಉತ್ತರ ಸಿಕ್ಕಿಲ್ಲ.

pinarayi vijayan: Piyush Goyal's remarks on nuns "shameful", says Kerala CM  Pinarayi Vijayan - The Economic Times

ರೋಗ ಪತ್ತೆ ಹಿನ್ನೆಲೆಯಲ್ಲಿ ಕೇರಳದ ಸಿಎಂ ಪಿಣರಾಯಿ ವಿಜಯನ್ ಎಲ್ಲೆಂದರಲ್ಲಿ ಸ್ನಾನ ಮಾಡಬಾರದು, ಈಜುಕೊಳದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು, ನಿಂತ ನೀರಿನ ಬಗ್ಗೆ ಜಾಗ್ರತೆ ಇರುವಂತೆ ಸೂಚನೆ ನೀಡಿದ್ದಾರೆ. ಬೇಸಗೆಯ ಅತಿ ಉಷ್ಣತೆ ಮತ್ತು ತಾಪಮಾನ ಬದಲಾವಣೆಯಿಂದ ಈ ರೀತಿಯ ರೋಗ ಕಾಣಿಸಿಕೊಂಡಿರುವ ಸಾಧ್ಯತೆ ಬಗ್ಗೆಯೂ ಕೆಲವು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಕೇರಳದಲ್ಲಿ ಈ ಬಾರಿ ಅತಿ ಉಷ್ಣಾಂಶ ದಾಖಲಾಗಿದ್ದಲ್ಲದೆ, ನೀರಿನ ಅಭಾವವೂ ಉಂಟಾಗಿತ್ತು. ಈ ವೇಳೆ, ರೋಗಾಣು ಸೃಷ್ಟಿಯಾಗಿದೆಯೇ ಎನ್ನುವ ಬಗ್ಗೆ ತಜ್ಞರ ಸಂಶೋಧನೆ ಆಗಬೇಕಾಗಿದೆ. ಬೇಸಗೆಯಲ್ಲಿ ನದಿ, ಹೊಳೆಗಳ ನೀರಿನ ಉಷ್ಣತೆ ಹೆಚ್ಚಿರುತ್ತದೆ. ನಿಧಾನಕ್ಕೆ ಹರಿಯುವ ನೀರಿನಲ್ಲಿ ಇಂತಹ ಅಮೀಬಾ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ ಎಂದು ಇಕನಾಮಿಕ್ ಟೈಮ್ಸ್ ಬರೆದುಕೊಂಡಿದೆ.

Kerala has reported another case of amoebic meningoencephalitis, a rare and often fatal brain infection caused by the free-living amoeba Naegleria fowleri. A 14-year-old boy from Payyoli, in the northern part of the state, is currently receiving treatment at a private hospital. This is the fourth such case in Kerala since May, with three previous cases resulting in the deaths of young children.