ಬ್ರೇಕಿಂಗ್ ನ್ಯೂಸ್
15-07-24 04:59 pm HK News Desk ದೇಶ - ವಿದೇಶ
ಅಹ್ಮದಾಬಾದ್, ಜುಲೈ.15: ಗುಜರಾತ್ ರಾಜ್ಯದ ಭಾವನಗರ ಜಿಲ್ಲೆಯ ಪಾಲಿತಾನಾ ಎಂಬ ಜೈನರ ಬಾಹುಳ್ಯದ ನಗರವು ಮಾಂಸಾಹಾರದ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿದ ವಿಶ್ವದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜೈನ ಧರ್ಮಕ್ಕೆ ಹೆಸರಾಗಿರುವ ಈ ನಗರದಲ್ಲಿ ಸುಮಾರು 200 ಜೈನ ಸನ್ಯಾಸಿಗಳು ಮಾಂಸಾಹಾರ ನಿಷೇಧಕ್ಕಾಗಿ ಈ ಹಿಂದೆ ಪ್ರತಿಭಟನೆ ನಡೆಸಿದ್ದರು. ಇದೀಗ ಗುಜರಾತ್ ಸರ್ಕಾರ ಪಾಲಿತಾನಾ ನಗರದಲ್ಲಿ ಮಾಂಸಾಹಾರದ ಮಾರಾಟವನ್ನು ಸಂಪೂರ್ಣ ನಿಷೇಧಿಸಿ ಆದೇಶ ಮಾಡಿದೆ.
ಮಾಂಸದ ಮಾರಾಟದ ಜೊತೆಗೆ ಮಾಂಸಕ್ಕಾಗಿ ಪ್ರಾಣಿಗಳನ್ನು ಕಡಿಯುವುದು ಇನ್ನು ಈ ನಗರದಲ್ಲಿ ಕಾನೂನುಬಾಹಿರ ಮತ್ತು ಶಿಕ್ಷಾರ್ಹವಾಗಿದೆ. ಈ ಹಿಂದೆ ಪಾಲಿತಾನಾದಲ್ಲಿ 250 ಮಾಂಸದ ಅಂಗಡಿಗಳಿದ್ದವು. ಅಂಗಡಿಗಳನ್ನು ಮುಚ್ಚುವಂತೆ ಸುಮಾರು 200 ಜೈನ ಸನ್ಯಾಸಿಗಳು ಧರಣಿ ನಡೆಸಿದ್ದರು.
ಪಾಲಿತಾನ ಕೇವಲ ಒಂದು ನಗರವಲ್ಲ; ಇದು ಜೈನರ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದೆನಿಸಿದೆ. ಇದು “ಜೈನ್ ಟೆಂಪಲ್ ಟೌನ್” ಎಂಬ ಅಡ್ಡ ಹೆಸರನ್ನೂ ಗಳಿಸಿದೆ. ಶತ್ರುಂಜಯ ಬೆಟ್ಟಗಳ ಸುತ್ತಲೂ ನೆಲೆಸಿರುವ ನಗರವು 800 ಕ್ಕೂ ಹೆಚ್ಚು ದೇವಾಲಯಗಳಿಗೆ ನೆಲೆಯಾಗಿದೆ. ಅತ್ಯಂತ ಪ್ರಸಿದ್ಧವಾದ ಆದಿನಾಥ ದೇವಾಲಯ ಇಲ್ಲಿದೆ. ಸಾವಿರಾರು ಪ್ರವಾಸಿಗರು ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುತ್ತಾರೆ. ಜೈನರು ಅಹಿಂಸೆಯನ್ನು ಪ್ರತಿಪಾದಿಸುವುದರಿಂದ ಅವರ ಬೇಡಿಕೆಯಂತೆ ಮಾಂಸಾಹಾರ ನಿಷೇಧ ಮಾಡಲಾಗಿದೆ. ಮಾಂಸಾಹಾರ ನಿಷೇಧ ಮಾಡಿರುವ ಸರ್ಕಾರದ ಕ್ರಮಕ್ಕೆ ಇತರೇ ಧರ್ಮೀಯರು ವಿರೋಧಿಸಿದ್ದಾರೆ.
Palitana, situated in Gujarat’s Bhavnagar district, has been declared the world’s first city where non-vegetarian food is banned. This landmark decision criminalizes the killing of animals for meat, as well as the sale and consumption of meat, making these actions illegal and punishable by law in the city, which is a well-known pilgrimage destination for Jains. This move came in response to a protest by around 200 Jain monks who called for the closure of about 250 butcher shops in the area.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am