ಟ್ರಂಪ್ ಸುಂಕ ಬರೆಗೆ ನಲುಗಿದ ಷೇರುಪೇಟೆ ; NIFTY ಇತಿಹಾಸದಲ್ಲೇ ಭಾರೀ ಕುಸಿತ, ಒಂದೇ ದಿನ 90 ಲಕ್ಷ ಕೋಟಿ ನಷ್ಟ, ನಾಸಿಕ್ ನಲ್ಲಿ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ ! 

28-02-25 08:11 pm       HK News Desk   ದೇಶ - ವಿದೇಶ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಅತೀದೊಡ್ಡ ಕುಸಿತ ಸಂಭವಿಸಿದ್ದು, ನಿಫ್ಟಿ ಇತಿಹಾಸದಲ್ಲೇ ದಿಢೀರ್ ಆಗಿ ಭಾರಿ ಪ್ರಮಾಣದ ಕುಸಿತ ಉಂಟಾಗಿದೆ. ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ಸೂಚ್ಯಂಕದಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 29 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದೆ. 

ಮುಂಬೈ, ಫೆ.28 : ಭಾರತೀಯ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಅತೀದೊಡ್ಡ ಕುಸಿತ ಸಂಭವಿಸಿದ್ದು, ನಿಫ್ಟಿ ಇತಿಹಾಸದಲ್ಲೇ ದಿಢೀರ್ ಆಗಿ ಭಾರಿ ಪ್ರಮಾಣದ ಕುಸಿತ ಉಂಟಾಗಿದೆ. ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ಸೂಚ್ಯಂಕದಲ್ಲಿ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 29 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದೆ. 

ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.1.90ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಕೂಡ ಶೇ. 1.86ರಷ್ಟು ಇಳಿಕೆ ದಾಖಲಿಸಿದೆ. ಸೆನ್ಸೆಕ್ಸ್ ಬರೋಬ್ಬರಿ 1,414.33 ಅಂಕಗಳ ಕುಸಿತದೊಂದಿಗೆ 73,198.10 ಅಂಕಗಳಿಗೆ ಕುಸಿತವಾಗಿದೆ. ಭಾರತೀಯ ಷೇರು ಮಾರುಕಟ್ಟೆಗೆ ನಿಫ್ಟಿ ಸೇರ್ಪಡೆಯಾದ ದಿನದಿಂದ ಈ ವರೆಗೂ ಸೂಚ್ಯಂಕದಲ್ಲಿ ಇಷ್ಟೊಂದು ಕುಸಿತವಾಗಿರಲಿಲ್ಲ. ಈ ಮೂಲಕ ನಿಫ್ಟಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ತಿಂಗಳ ವರೆಗೆ 6 ಬಾರಿ ದೀರ್ಘ ಕಾಲದ ಕುಸಿತ ಅನುಭವಿಸಿದ್ದು ಇದೇ ಮೊದಲಾಗಿದೆ. ಮಹಾರಾಷ್ಟ್ರದ ನಾಸಿಕ್ ನಲ್ಲಿ 28 ವರ್ಷದ ಬ್ಯಾಂಕ್ ಉದ್ಯೋಗಿಯೊಬ್ಬರು ಒಂದೇ ದಿನ 16 ಲಕ್ಷ ನಷ್ಟಕ್ಕೀಡಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

93.65 ಲಕ್ಷ ಕೋಟಿ ನಷ್ಟ ; 

ಇಂದಿನ ವಹಿವಾಟಿನಿಂದ ಷೇರು ಮಾರುಕಟ್ಟೆಯ ಹೂಡಿಕೆದಾರರಿಗೆ ಬರೋಬ್ಬರಿ 93.65 ಲಕ್ಷ ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 27 ರಂದು ದಾಖಲಾಗಿದ್ದ 85,978.25 ಪಾಯಿಂಟ್ ದಾಖಲೆಯ ಗರಿಷ್ಠ ಮಟ್ಟದಿಂದ, ಬಿಎಸ್ಇ ಸೂಚ್ಯಂಕ ಬರೋಬ್ಬರಿ 12,780.15 ಪಾಯಿಂಟ್ ಗಳು ಅಥವಾ ಶೇ.14.86 ಪ್ರತಿಶತ ಕುಸಿದಿದೆ.

ಟೆಕ್ ಮಹೀಂದ್ರ ಸಂಸ್ಛೆಯ ಷೇರುಮೌಲ್ಯ ಶೇಕಡಾ 6.19 ರಷ್ಟು ಕುಸಿದಿದ್ದು, ಇಂಡಸ್ ಇಂಡ್, ಎಂ ಅಂಡ್ ಎಂ, ಭಾರ್ತಿ ಏರ್ಟೆಲ್, ಇನ್ಫೋಸಿಸ್, ಟಾಟಾ ಮೋಟರ್ಸ್, ಟೈಟಾನ್, ನೆಸ್ಲೆ ಇಂಡಿಯಾ, ಟಿಸಿಎಸ್ ಮತ್ತು ಮಾರುತಿ ಸುಜುಕಿ ಸಂಸ್ಥೆಗಳ ಷೇರು ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿದಿದೆ. 

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆನಡಾ, ಮೆಕ್ಸಿಕೋ ಮತ್ತು ಚೀನಾ ಉತ್ಪನ್ನಗಳ ಮೇಲೆ ಆಮದು ಸುಂಕ ದಿಢೀರ್ ಏರಿಕೆ ಮಾಡಿದ್ದರಿಂದ ಅಮೆರಿಕಾದ ಷೇರು ಮಾರುಕಟ್ಟೆ ತಲ್ಲಣಿಸಿದೆ. ಒಂದು ದಿನ ಹಿಂದೆಯೇ ಅಮೆರಿಕದಲ್ಲಿ ಮಾರುಕಟ್ಟೆ ಕುಸಿತ ಕಂಡಿದ್ದು ಇದರ ಪರಿಣಾಮ ಭಾರತಕ್ಕೂ ತಟ್ಟಿದೆ ಎನ್ನಲಾಗುತ್ತಿದೆ.

A wave of selling across the board in today's session, February 28, has sent both Nifty 50 and Sensex to record their worst intraday performance in the current calendar year so far.