ಬ್ರೇಕಿಂಗ್ ನ್ಯೂಸ್
31-07-25 09:51 am HK News Desk ದೇಶ - ವಿದೇಶ
ನವದೆಹಲಿ, ಜುಲೈ 31 : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಸರಕುಗಳ ಮೇಲೆ ಭಾರೀ ಸುಂಕಾಸ್ತ್ರ ಪ್ರಯೋಗಿಸಿದ್ದಾರೆ. ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದು ಭಾರತೀಯ ಉತ್ಪಾದನೆ ಕ್ಷೇತ್ರದ ಮೇಲೆ ಪೆಟ್ಟು ಬೀಳಲಿದೆ.
ಟ್ರಂಪ್ ತಮ್ಮ 'ಟ್ರುತ್' ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಆ.1ರಿಂದ ಹೊಸ ಸುಂಕ ನೀತಿ ಜಾರಿಗೆ ಬರಲಿದೆ ಎಂದು ಪ್ರಕಟಿಸಿದ್ದಾರೆ. 25% ಸುಂಕ ಘೋಷಣೆಯಿಂದ ಭಾರತದ ರಫ್ತು ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಭಾರತದಿಂದ ರಫ್ತಾಗುವ ಉತ್ಪನ್ನಗಳಿಗೆ ಅಮೆರಿಕದಲ್ಲಿ ಬೆಲೆ ಹೆಚ್ಚಾಗಲಿದ್ದು, ಬೇಡಿಕೆ ಕುಸಿಯುವ ಸಾಧ್ಯತೆಯಿದೆ. ಇದರಿಂದ ಭಾರತದಲ್ಲಿ ಆ ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆಗಳಿಗೆ ಭಾರೀ ನಷ್ಟವಾಗಲಿದೆ.
ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಭಾರತವನ್ನು 'ಸ್ನೇಹಿತ' ಎಂದು ಕರೆದಿದ್ದು ಅದರ ಜೊತೆಗೆ ಸುಂಕದ ವಿಚಾರದಲ್ಲಿ ತಿವಿದಿದ್ದಾರೆ. ''ನೆನಪಿಡಿ, ಭಾರತ ನಮ್ಮ ಸ್ನೇಹಿತ. ಆದರೆ ಕಳೆದ ಹಲವಾರು ವರ್ಷಗಳಿಂದ ನಾವು ಭಾರತದೊಂದಿಗೆ ವ್ಯವಹಾರ ಮಾಡಿದ್ದು ಕಡಿಮೆ. ಏಕೆಂದರೆ ಭಾರತದ ಸುಂಕಗಳು ತುಂಬಾ ಹೆಚ್ಚಿವೆ. ಅದು ವಿಶ್ವದಲ್ಲೇ ಅತ್ಯಧಿಕ,'' ಎಂದು ಹೇಳಿದ್ದಾರೆ.
''ಇದಲ್ಲದೆ, ಭಾರತ ಹೆಚ್ಚಿನ ಮಿಲಿಟರಿ ಉಪಕರಣಗಳನ್ನು ರಷ್ಯಾದಿಂದ ಖರೀದಿಸುತ್ತದೆ. ರಷ್ಯಾದ ಅತಿದೊಡ್ಡ ಇಂಧನ ಖರೀದಿದಾರ ದೇಶವಾಗಿದೆ. ಉಕ್ರೇನ್ ಮೇಲೆ ರಷ್ಯಾ ಯುದ್ಧವನ್ನು ನಿಲ್ಲಿಸಬೇಕೆಂದು ಎಲ್ಲರೂ ಬಯಸುವ ಸಮಯದಲ್ಲಿ ಇದೆಲ್ಲ ಒಳ್ಳೆಯದಲ್ಲ! ಆದ್ದರಿಂದ, ಆ.1ರಿಂದ ಭಾರತವು ತನ್ನ ರಫ್ತು ಉತ್ಪನ್ನಗಳಿಗೆ ಶೇ. 25 ರಷ್ಟು ಸುಂಕವನ್ನು ಪಾವತಿಸಬೇಕಾಗುತ್ತದೆ. ಜತೆಗೆ ರಷ್ಯಾ ಜತೆಗಿನ ವ್ಯಾಪಾರಕ್ಕಾಗಿ ಸುಂಕದ ಜತೆಗೆ ದಂಡವನ್ನೂ ಪಾವತಿಸಬೇಕಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಇದಕ್ಕೂ ಮುನ್ನ ಕಳೆದ ಏಪ್ರಿಲ್‌ನಲ್ಲಿ ಟ್ರಂಪ್ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. 26 ರಷ್ಟು ಹೆಚ್ಚುವರಿ ಸುಂಕ ಘೋಷಿಸಿದ್ದರು. ಆದರೆ ಅದನ್ನು ಜು.9ರ ವರೆಗೆ ಅಮಾನತುಗೊಳಿಸಿತ್ತು. ನಂತರ ಈ ಅಮಾನತನ್ನು ಆ.1ರ ವರೆಗೆ ವಿಸ್ತರಿಸಲಾಯಿತು. ಆದಾಗ್ಯೂ, ಈ ಅವಧಿಯಲ್ಲಿ ಶೇ. 10ರ ಮೂಲ ಸುಂಕ ಅನ್ವಯಿಸುತ್ತಿತ್ತು.
ಅಮೆರಿಕದ ಹೆಚ್ಚುವರಿ ಸುಂಕದಿಂದಾಗಿ ಮುಖ್ಯವಾಗಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡಿನ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಹಾಗೂ ಎಕ್ಸ್‌ಪೋರ್ಟ್ ಹಬ್ ಗಳಿಗೆ ಹೊಡೆತ ಬೀಳುವ ಸಾಧ್ಯತೆಯಿದೆ. ಈ ಉದ್ಯಮಗಳು ತಮ್ಮ ಉತ್ಪನ್ನಗಳಿಗೆ ಪರ್ಯಾಯ ಮಾರುಕಟ್ಟೆಯನ್ನು ಹುಡುಕಿಕೊಳ್ಳುವುದು ಅನಿವಾರ್ಯವಾಗಬಹುದು. ಆ ಮೂಲಕ ಹೊಸ ಪೂರೈಕೆ ಸರಪಳಿ ಶೋಧಕ್ಕೂ ಈ ನಡೆ ಕಾರಣವಾಗಬಹುದು.
ಯಾವೆಲ್ಲಾ ವಲಯಕ್ಕೆ ಬಿಸಿ?
ವಾಹನ ಮತ್ತು ವಾಹನ ಬಿಡಿಭಾಗಗಳು, ಸ್ಟೀಲ್ ಮತ್ತು ಅಲ್ಯೂಮಿನಿಯಂ, ಸ್ಮಾರ್ಟ್ ಫೋನ್, ಸೋಲಾರ್ ಮಾಡ್ಯೂಲ್, ಸಮುದ್ರ ಉತ್ಪನ್ನಗಳು, ಕೃಷಿ ಉತ್ಪನ್ನಗಳು, ಮುತ್ತು ಮತ್ತು ಇತರ ಆಭರಣಗಳು, ಆಯ್ದ ಸಂಸ್ಕರಿತ ಆಹಾರಗಳಿಗೆ ಅಮೆರಿಕದಲ್ಲಿ ತೆರಿಗೆ ಬರೆ ಬೀಳಲಿದೆ.
In a move that could significantly impact India’s export sector, former U.S. President Donald Trump has announced a 25% tariff on Indian goods exported to the United States, effective August 1. The decision, shared by Trump on his social media platform ‘Truth Social’, comes despite him referring to India as a “friend,” adding a sharp twist to the diplomatic tone.
30-08-25 04:51 pm
Bangalore Correspondent
Kalaburagi ACP, Arrest: ರಿಯಲ್ ಎಸ್ಟೇಟ್ ಉದ್ಯಮಿಗ...
29-08-25 10:51 pm
ನಮ್ಮದು ನೆಲ ಜಲ, ಕಲ್ಲು ಮಣ್ಣನ್ನು ದೇವರಂತೆ ಕಾಣೋದು...
29-08-25 10:20 pm
ಚಿಂತಾಮಣಿಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; 100...
29-08-25 05:59 pm
Chikkamagaluru, Police, Fine: ಸಾರ್ವಜನಿಕರಿಗೆ ಮ...
28-08-25 06:23 pm
29-08-25 05:20 pm
HK News Desk
PM Modi Japan: ಪ್ರಧಾನಿ ಮೋದಿಗೆ ಜಪಾನ್ನಲ್ಲಿ ಗಾಯ...
29-08-25 01:47 pm
ಮೋದಿ 75 ವರ್ಷಕ್ಕೆ ನಿವೃತ್ತರಾಗಬೇಕು ಎಂದು ಹೇಳಿಲ್ಲ...
29-08-25 12:50 pm
ಪ್ರತಿ ಭಾರತೀಯ ಕುಟುಂಬಗಳು ಮೂರಕ್ಕಿಂತ ಹೆಚ್ಚು ಮಕ್ಕಳ...
29-08-25 10:56 am
Kanhangad Suicide: ಕಾಞಂಗಾಡ್ ; ಬೆಳೆದು ನಿಂತ ಇಬ್...
28-08-25 12:19 pm
30-08-25 04:23 pm
Mangalore Correspondent
Golden Era of AI Business: YatiCorp Offers As...
30-08-25 04:11 pm
ಕೊಲ್ಲೂರಿಗೆ ಬಂದು ನದಿಗೆ ಸ್ನಾನಕ್ಕಿಳಿದಿದ್ದ ಬೆಂಗಳೂ...
30-08-25 12:55 pm
Mangalore Talapady, Speaker Khader Orders Pro...
30-08-25 11:55 am
Mangalore NSUI, FIR: ಗಣೇಶೋತ್ಸವಕ್ಕೆ ಕಾಂಗ್ರೆಸ್...
29-08-25 10:54 pm
30-08-25 03:22 pm
Mangalore Correspondent
Santosh Shetty Murder, Karkala, Pune: ಹಣಕ್ಕಾಗ...
27-08-25 10:23 pm
Karkala Murder, Arrest, Crime: ಹೆಂಡ್ತಿ ಮಕ್ಕಳನ...
26-08-25 10:39 pm
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm