ಬ್ರೇಕಿಂಗ್ ನ್ಯೂಸ್
29-06-26 03:35 pm HK News Staffer ದೇಶ - ವಿದೇಶ
ಮುಂಬೈ, ಜೂನ್ 29: ಧಾರ್ಮಿಕ ಸಂವೇದನೆಯಿಂದ ತುಂಬಿರುವ ಮೊಹರಂ ಮೆರವಣಿಗೆಯ ಸಂದರ್ಭದಲ್ಲೇ ಭಾರೀ ಆತಂಕ ಹುಟ್ಟಿಸುವ ಸಂಚು ಮುಂಬೈ ಪೊಲೀಸರು ಭೇದಿಸಿದ್ದು, ಸಾವಿರಾರು ಜನರನ್ನು ಗುರಿಯಾಗಿಸಿಕೊಂಡಿದ್ದ ಸಾಮೂಹಿಕ ವಿಷಪ್ರಾಶನ ಯತ್ನವನ್ನು ಸಮಯೋಚಿತ ಕಾರ್ಯಾಚರಣೆಯಿಂದ ತಪ್ಪಿಸಿದ್ದಾರೆ.
ಪೊಲೀಸರ ಪ್ರಕಾರ, ಮೊಹರಂ ಮೆರವಣಿಗೆಯ ವೇಳೆ ಜನರಿಗೆ ವಿತರಿಸಲು ವಿಷಭರಿತ ಕ್ಯಾಪ್ಸೂಲ್‌ಗಳನ್ನು ಹಂಚಲು ಯತ್ನಿಸುತ್ತಿದ್ದ ಪುಣೆ ನಿವಾಸಿ ಫಯಾಜ್ ಪ್ರೇಮ್‌ಜಿ ಎಂಬಾತನನ್ನು ಬಂಧಿಸಲಾಗಿದೆ. ಈತನ ಬಳಿ ಸುಮಾರು 14,900 ವಿಷಭರಿತ ಕ್ಯಾಪ್ಸೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಯ ವೇಳೆ ಆರೋಪಿಯು ಅತ್ಯಂತ ಯೋಜಿತ ರೀತಿಯಲ್ಲಿ ಈ ಸಂಚು ರೂಪಿಸಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. “ರ‍್ಯಾಟ್ ಪಾಯಿಸನ್” ಎಂದು ಕರೆಯಲಾಗುವ ಜಿಂಕ್ ಫಾಸ್ಫೈಡ್ ಎಂಬ ಅತ್ಯಂತ ವಿಷಕಾರಿ ಪದಾರ್ಥವನ್ನು ಬಳಸಿಕೊಂಡು ಕ್ಯಾಪ್ಸೂಲ್‌ಗಳನ್ನು ತಯಾರಿಸಲಾಗಿತ್ತು. ಪ್ರತಿ ಕ್ಯಾಪ್ಸೂಲ್‌ನಲ್ಲಿ ಸುಮಾರು 1 ಗ್ರಾಂ ವಿಷ ತುಂಬಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಮೊಹರಂ ಮೆರವಣಿಗೆಯಲ್ಲಿ ಭಾಗವಹಿಸುವ ಸಾವಿರಾರು ಜನರನ್ನು ಗುರಿಯಾಗಿಸಿಕೊಂಡು, ಈ ಕ್ಯಾಪ್ಸೂಲ್‌ಗಳನ್ನು ಆಹಾರ ಅಥವಾ ಔಷಧಿಯಂತೆ ವಿತರಿಸುವ ಯೋಜನೆ ರೂಪಿಸಲಾಗಿತ್ತು. ಯೋಜನೆ ಯಶಸ್ವಿಯಾಗಿದ್ದರೆ ದೊಡ್ಡ ಪ್ರಮಾಣದ ಜೀವಹಾನಿ ಸಂಭವಿಸುವ ಭೀತಿ ಇತ್ತು ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣವು ಬೆಳಕಿಗೆ ಬಂದದ್ದು ಸಲ್ಮಾನ್ ಸಯ್ಯದ್ ಎಂಬ ವ್ಯಕ್ತಿ ಒಂದು ಅನುಮಾನಾಸ್ಪದ ಕ್ಯಾಪ್ಸೂಲ್ ಸೇವಿಸಿದ ನಂತರ ಅಸ್ವಸ್ಥರಾದ ಹಿನ್ನೆಲೆಯಲ್ಲಿ. ಸಲ್ಮಾನ್ ಸಯ್ಯದ್ ತೀವ್ರ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಆರಂಭವಾದ ತನಿಖೆ, ಬಳಿಕ ದೊಡ್ಡ ಪಿತೂರಿಯ ದಾರಿಯನ್ನು ತೆರೆಯಿತು.
ಮುಂಬೈ ಡಿಸಿಪಿ ಜಯಂತ್ ಮೀನಾ ನೀಡಿರುವ ಮಾಹಿತಿಯಂತೆ, ಅನುಮಾನಾಸ್ಪದ ವ್ಯಕ್ತಿ ಮೊಹರಂ ಮೆರವಣಿಗೆಯ ಬಳಿ ಕ್ಯಾಪ್ಸೂಲ್‌ಗಳನ್ನು ವಿತರಿಸುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾದ ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಸ್ಥಳದಿಂದಲೇ ದೊಡ್ಡ ಪ್ರಮಾಣದ ವಿಷಭರಿತ ಕ್ಯಾಪ್ಸೂಲ್‌ಗಳನ್ನು ಜಪ್ತಿ ಮಾಡಲಾಗಿದೆ.
ತನಿಖೆಯಲ್ಲಿ ಇನ್ನಷ್ಟು ಸ್ಫೋಟಕ ಮಾಹಿತಿಗಳು ಹೊರಬಂದಿದ್ದು, ಫಯಾಜ್ ಒಟ್ಟು 50 ಕೆಜಿ ಜಿಂಕ್ ಫಾಸ್ಫೈಡ್ ಆರ್ಡರ್ ಮಾಡಿ, ತನ್ನ ಮನೆಯಲ್ಲೇ ಕ್ಯಾಪ್ಸೂಲ್‌ಗಳನ್ನು ತಯಾರಿಸಿದ್ದಾನೆ ಎಂಬುದು ಗೊತ್ತಾಗಿದೆ. ಒಟ್ಟು 30,000 ಕ್ಯಾಪ್ಸೂಲ್ ತಯಾರಿಸುವ ಯೋಜನೆ ಹೊಂದಿದ್ದ ಈತ, ಮೊದಲ ಹಂತದಲ್ಲಿ 14,900 ಕ್ಯಾಪ್ಸೂಲ್‌ಗಳನ್ನು ವಿತರಿಸಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಫಯಾಜ್ ಪುಣೆಯ ವಿಮಾನ್ ನಗರ ನಿವಾಸಿಯಾಗಿದ್ದು, ಬಿಬಿಎ ಪದವೀಧರನಾಗಿದ್ದಾನೆ. ಬಣ್ಣ ವ್ಯಾಪಾರ ನಡೆಸುತ್ತಿದ್ದ ಈತ, ಇತ್ತೀಚೆಗೆ ಮುಂಬೈನ ಡೋಂಗ್ರಿಯಲ್ಲಿ ಬಾಡಿಗೆ ಮನೆ ಪಡೆದು ಸಂಚು ರೂಪಿಸಿದ್ದಾನೆ ಎಂಬ ಮಾಹಿತಿ ದೊರೆತಿದೆ. ಇನ್ನು 2025ರಲ್ಲಿ ಈತ ಇರಾನ್ ಮತ್ತು ಇರಾಕ್‌ಗೆ ಪ್ರಯಾಣಿಸಿದ್ದ ವಿಷಯವೂ ತನಿಖೆಯಲ್ಲಿದೆ.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
23-08-26 06:17 pm
HK News Staffer
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
ತಾಂತ್ರಿಕ ದೋಷದಿಂದ ದಾಖಲೆ ಸುಟ್ಟ ಆರೋಪ ; ಪುತ್ತೂರಿನ...
23-08-26 05:18 pm
ರಾಜ್ಯದಲ್ಲಿ ಕೃತಕ ಪನೀರ್ ಬ್ಯಾನ್, ನಕಲಿ ಔಷಧ ಜಾಲ ಹಿ...
22-08-26 01:37 pm
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
24-08-26 11:05 am
HK News Staffer
ಹೊಳೆನರಸೀಪುರ ; ಟ್ರ್ಯಾಕ್ಟರ್ ಕೀಯನ್ನು ತಿರುಗಿಸಿದ ಮ...
23-08-26 05:20 pm
ಹೆತ್ತವರನ್ನು ಕೊಲ್ತೇನೆಂದು ಹೇಳಿ ಒಂಬತ್ತನೇ ಕ್ಲಾಸ್...
22-08-26 12:43 pm
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am