ಬ್ರೇಕಿಂಗ್ ನ್ಯೂಸ್
03-07-26 09:40 pm HK News Staffer ದೇಶ - ವಿದೇಶ
ನವದೆಹಲಿ, ಜುಲೈ 3: ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಭಾರತದ ರಿಫೈನರಿಗಳು, ಅವನ್ನು ಸಂಸ್ಕರಿಸಿ ಮತ್ತೆ ರಷ್ಯಾಕ್ಕೆ ಪೆಟ್ರೋಲ್ ರಫ್ತು ಮಾಡುತ್ತಿರುವ ವಿಚಾರ ಈಗ ಚರ್ಚೆಗೆ ಗ್ರಾಸವಾಗಿವೆ. ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, "ರಷ್ಯಾದಿಂದ ತೈಲ ತಂದು ಮತ್ತೆ ರಷ್ಯಾಕ್ಕೇ ಪೆಟ್ರೋಲ್ ಮಾರಾಟ ಮಾಡಲಾಗುತ್ತಿದೆಯೇ?" ಎಂಬ ಕುತೂಹಲ ಮೂಡಿಸಿದೆ.
ಆದರೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಭಾರತದ ಯಾವುದೇ ಸರ್ಕಾರಿ ಅಥವಾ ಖಾಸಗಿ ತೈಲ ಸಂಸ್ಕರಣಾ ಕಂಪನಿಗಳು (ರಿಫೈನರಿಗಳು) ನೇರವಾಗಿ ರಷ್ಯಾಕ್ಕೆ ಪೆಟ್ರೋಲ್ ಮಾರಾಟ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಕೆಲವು ಅಂತರಾಷ್ಟ್ರೀಯ ಮಾಧ್ಯಮ ವರದಿಗಳಲ್ಲಿ, ಉಕ್ರೇನ್ ದಾಳಿಯಿಂದಾಗಿ ರಷ್ಯಾದ ತೈಲ ಸಂಸ್ಕರಣಾ ಘಟಕಗಳಿಗೆ ಹಾನಿಯಾಗಿದ್ದು ಅಲ್ಲಿನ ದೇಶೀಯ ಬೇಡಿಕೆ ಪೂರೈಸಲು ಭಾರತದಿಂದ ಸಮುದ್ರ ಮಾರ್ಗದ ಮೂಲಕ ಪೆಟ್ರೋಲ್ ಖರೀದಿಸಲಾಗಿದೆ ಎಂದು ಹೇಳಲಾಗಿದೆ. ಸುಮಾರು 60,000 ಮೆಟ್ರಿಕ್ ಟನ್ ಪೆಟ್ರೋಲ್ ರವಾನೆಯಾಗಿದ್ದು, ಇನ್ನೂ ಎರಡು ಟ್ಯಾಂಕರ್‌ಗಳಲ್ಲಿ ತಲಾ 30ರಿಂದ 40 ಸಾವಿರ ಟನ್ ಪೆಟ್ರೋಲ್ ಕಳುಹಿಸಲಾಗಿದೆ ಎಂಬ ಮಾಹಿತಿಗಳಿವೆ.
ಈ ಕುರಿತು ಪ್ರತಿಕ್ರಿಯಿಸಿದ ಹರ್ದೀಪ್ ಸಿಂಗ್ ಪುರಿ, "ಭಾರತದ ಯಾವುದೇ ರಿಫೈನರಿ ರಷ್ಯಾಕ್ಕೆ ನೇರವಾಗಿ ಪೆಟ್ರೋಲ್ ರಫ್ತು ಮಾಡುತ್ತಿಲ್ಲ. ಭಾರತೀಯ ಮೂಲದ ಇಂಧನ ರಷ್ಯಾಕ್ಕೆ ತಲುಪಿದ್ದರೆ, ಅದು ಮಧ್ಯವರ್ತಿಗಳ ಮೂಲಕ ಕೈ ಬದಲಾಗಿ ಅಂತಿಮವಾಗಿ ತಲುಪಿರಬಹುದು" ಎಂದು ಹೇಳಿದ್ದಾರೆ. ಕಚ್ಚಾ ತೈಲ ಮತ್ತು ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಒಂದು ರಾಷ್ಟ್ರದಿಂದ ಪಡೆದು ಇನ್ನೊಂದು ಕಡೆಗೆ ಮಾರಾಟ ಮಾಡುವುದು ಸಹಜ ಪ್ರಕ್ರಿಯೆ. ಉತ್ಪನ್ನದ ಮೂಲ ದೇಶ ಮತ್ತು ಖರೀದಿಸುವ ದೇಶದ ನಡುವೆ ನೇರ ವ್ಯವಹಾರ ಇರಲೇಬೇಕೆಂದಿಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ಭಾರತದಲ್ಲಿ ತೈಲ ದರ ಕಡಿಮೆಗೊಳಿಸುವ ಕುರಿತಾಗಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಇದೇ ಮಟ್ಟದಲ್ಲಿ ಕೆಲವು ತಿಂಗಳ ವರೆಗೆ ಸ್ಥಿರವಾಗಿದ್ದರೆ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡುವ ಬಗ್ಗೆ ಸರ್ಕಾರ ಹಾಗೂ ತೈಲ ಕಂಪನಿಗಳು ಪರಿಶೀಲನೆ ನಡೆಸಬಹುದು ಎಂದು ಹೇಳಿದ್ದಾರೆ.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
23-08-26 06:17 pm
HK News Staffer
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
ತಾಂತ್ರಿಕ ದೋಷದಿಂದ ದಾಖಲೆ ಸುಟ್ಟ ಆರೋಪ ; ಪುತ್ತೂರಿನ...
23-08-26 05:18 pm
ರಾಜ್ಯದಲ್ಲಿ ಕೃತಕ ಪನೀರ್ ಬ್ಯಾನ್, ನಕಲಿ ಔಷಧ ಜಾಲ ಹಿ...
22-08-26 01:37 pm
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
24-08-26 11:05 am
HK News Staffer
ಹೊಳೆನರಸೀಪುರ ; ಟ್ರ್ಯಾಕ್ಟರ್ ಕೀಯನ್ನು ತಿರುಗಿಸಿದ ಮ...
23-08-26 05:20 pm
ಹೆತ್ತವರನ್ನು ಕೊಲ್ತೇನೆಂದು ಹೇಳಿ ಒಂಬತ್ತನೇ ಕ್ಲಾಸ್...
22-08-26 12:43 pm
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am