ಬ್ರೇಕಿಂಗ್ ನ್ಯೂಸ್
31-03-21 02:35 pm Headline Karnataka News Network ದೇಶ - ವಿದೇಶ
ನವದೆಹಲಿ, ಮಾ.31: ಆಧಾರ್ ಮತ್ತು ಪಾನ್ ಕಾರ್ಡ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿಲ್ಲವೇ ? ಲಿಂಕ್ ಮಾಡಲು ನೀಡಿದ್ದ ಗಡುವು ಇಂದಿಗೆ ಕೊನೆಗೊಂಡಿದ್ದು, ಎಪ್ರಿಲ್ 1ರಿಂದ ಭಾರೀ ದಂಡ ತೆರಬೇಕಾಗುತ್ತದೆ.
ಮಾರ್ಚ್ 31ರ ಮಧ್ಯರಾತ್ರಿ ಒಳಗೆ ಲಿಂಕ್ ಆಗಿಲ್ಲದಿದ್ದರೆ ಎಪ್ರಿಲ್ ಒಂದರಿಂದಲೇ ದಂಡ ವಿಧಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಪಾನ್ ಕಾರ್ಡ್ ಹೊಂದಿರುವ ಪ್ರತಿ ವ್ಯಕ್ತಿಯೂ ತನ್ನ ಆಧಾರ್ ಜೊತೆಗೆ ಲಿಂಕ್ ಮಾಡಿಸಿರಬೇಕು. ಇಲ್ಲದೇ ಇದ್ದರೆ, ಈ ಬಾರಿ ಲೋಕಸಭೆ ಜಾರಿಗೆ ತಂದಿರುವ ಫೈನಾನ್ಸ್ ಬಿಲ್ ಪ್ರಕಾರ ಪ್ರತಿ ವ್ಯಕ್ತಿಯ ಮೇಲೆ ದಂಡ ವಿಧಿಸಲು ಅಧಿಕಾರಿಗಳಿಗೆ ಅವಕಾಶ ನೀಡುತ್ತದೆ. ಇದಲ್ಲದೆ, ಯಾವುದೇ ಪಾನ್ ಕಾರ್ಡ್ ಆಧಾರ್ ಜೊತೆಗೆ ಲಿಂಕ್ ಆಗದೇ ಇದ್ದರೆ ತನ್ನಿಂತಾನೇ ಅಸ್ತಿತ್ವ ಕಳಕೊಳ್ಳಲಿದೆ.

ಯಾವುದೇ ಬ್ಯಾಂಕ್ ವಹಿವಾಟಿಗೆ ಪಾನ್ ಕಾರ್ಡ್ ಅಗತ್ಯವಾಗಿರುವುದರಿಂದ ಪಾನ್ ನಂಬರ್ ಇಲ್ಲದೆ ವಹಿವಾಟು ಸಾಧ್ಯವಿಲ್ಲ. 50 ಸಾವಿರಕ್ಕಿಂತ ಮೇಲಿನ ಹಣದ ವಹಿವಾಟು ನಡೆಸಲು ಪಾನ್ ಕಾರ್ಡ್ ಅಗತ್ಯವಾಗಿರುತ್ತದೆ. ಹೀಗಾಗಿ ಪಾನ್ ಕಾರ್ಡ್ ಎಲ್ಲ ರೀತಿಯ ವಹಿವಾಟುಗಳಿಗೆ ಈಗ ಕಡ್ಡಾಯ ಮಾಡಲಾಗಿದೆ. ಕಳೆದ 2017ರ ಜುಲೈನಲ್ಲಿ ಪಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿತ್ತು. ಆಬಳಿಕ ಸರಣಿಯಂತೆ ಹಲವು ಬಾರಿ ಗಡುವು ನೀಡಲಾಗಿದ್ದು, 2021ರ ಮಾರ್ಚ್ 31 ಕೊನೆಯ ದಿನವಾಗಿರುತ್ತದೆ.

ಆದರೆ, ಪಾನ್ ಲಿಂಕ್ ಮಾಡಿಲ್ಲದ ಸಾಮಾನ್ಯ ನಾಗರಿಕರಿಗೆ ದಂಡದ ಮೊತ್ತ ಒಂದು ಸಾವಿರ ಮೀರದ ಹಾಗೆ ವಿಧಿಸಲು ಸೂಚನೆ ನೀಡಲಾಗಿದೆ. ಅದೇ ಸಂದರ್ಭದಲ್ಲಿ ಯಾವ ವ್ಯಕ್ತಿ ಆದಾಯ ತೆರಿಗೆ ಕಟ್ಟಬಲ್ಲವನಾಗಿದ್ದು, ಪಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳದೆ ತನ್ನ ಬ್ಯಾಂಕ್ ಅಕೌಂಟನ್ನು ಪ್ರತ್ಯೇಕವಾಗಿ ಇರಿಸಿದ್ದು ಕಂಡುಬಂದರೆ ಆತನಿಗೆ ಹತ್ತು ಸಾವಿರದ ವರೆಗೂ ದಂಡ ವಿಧಿಸಬಹುದು. ಇದಲ್ಲದೆ, ಇದೇ ವೇಳೆ ಪಾನ್ ಕಾರ್ಡ್ ಲಿಂಕ್ ಆಗದೆ ಅಸ್ತಿತ್ವ ಕಳಕೊಂಡಲ್ಲಿ ಅದನ್ನು ಮತ್ತೆ ಪಡೆಯಬೇಕಿದ್ದಲ್ಲಿ ದುಪ್ಪಟ್ಟು ದಂಡ ವಿಧಿಸುವ ಪ್ರಸ್ತಾಪವೂ ಕಾನೂನಿನಲ್ಲಿದೆ.
ಆದಾಯ ತೆರಿಗೆ ವಿಚಾರದಲ್ಲಿ ಪಾರದರ್ಶಕ ತರುವ ನಿಟ್ಟಿನಲ್ಲಿ ಇದೇ ಮಾರ್ಚ್ 23ರಂದು ನೂತನ ಹಣಕಾಸು ಮಸೂದೆಯನ್ನು ಕೇಂದ್ರ ಸರಕಾರ ದೇಶದಲ್ಲಿ ಜಾರಿಗೆ ತಂದಿದೆ.
The last date for linking the Permanent Account Number (PAN) to Aadhaar is tomorrow - March 31, 2021, otherwise the PAN card is likely to become invalid. If not linked, one may also be liable to pay a penalty of Rs 1,000 as per the Finance Bill 2021.
05-03-26 11:42 pm
HK News Desk
ಸಂಘರ್ಷದಿಂದ ಸಮಸ್ಯೆ ಪರಿಹರಿಸಲಾಗದು, ಪಶ್ಚಿಮ ಏಷ್ಯಾ,...
05-03-26 09:40 pm
Lokayukta Raid: 8 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳ...
05-03-26 08:41 pm
ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ ; ಮಕ್ಕಳೆದುರೇ ಹಾಸ...
04-03-26 06:47 pm
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
05-03-26 08:51 pm
HK News Staffer
ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಇರಾನ್...
05-03-26 05:02 pm
ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ; 'ಸುದೀರ್ಘ...
04-03-26 11:13 pm
ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿ...
04-03-26 10:09 pm
ಇರಾನ್ ಹಡಗು ಸ್ಫೋಟ ಬೆನ್ನಲ್ಲೇ ಅಮೆರಿಕದ ಯುದ್ಧ ನೌಕೆ...
04-03-26 10:03 pm
05-03-26 07:38 pm
HK News Staffer
Dr Nagalakshmi Choudhary, Mangalore: ಸಾಕ್ಷಿಗಳ...
05-03-26 04:36 pm
ಅರಣ್ಯಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು ; ಹೊರಗೆ...
05-03-26 02:34 pm
Aadhaar Card Found, Mangalore: ಫರಂಗಿಪೇಟೆ ನದಿ...
05-03-26 12:42 pm
ತುಳು ಎರಡನೇ ಅಧಿಕೃತ ಭಾಷೆ; ಆಂಧ್ರಪ್ರದೇಶದಲ್ಲಿ ಕೈಗೊ...
04-03-26 09:31 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm