ಬ್ರೇಕಿಂಗ್ ನ್ಯೂಸ್
24-06-26 01:51 pm HK News Staffer ದೇಶ - ವಿದೇಶ
ಪ್ಯಾರಿಸ್, ಜೂ.23: ಕೂಲ್ ಕೂಲ್ ಪ್ರದೇಶಗಳೆಂದು ಹೆಸರಾಗಿದ್ದ ಯುರೋಪ್‌ನಲ್ಲೀಗ ಬಿಸಿ ಗಾಳಿಯ ತೀವ್ರತೆ ಎದುರಾಗಿದ್ದು, ತೀವ್ರ ಬಿಸಿಲಿನಿಂದಾಗಿ ಫ್ರಾನ್ಸ್‌ನಲ್ಲಿ ಕನಿಷ್ಠ 20 ಜನರು ಮೃತಪಟ್ಟಿದ್ದಾರೆ. ಸ್ಪೇನ್, ಬ್ರಿಟನ್, ಇಟಲಿ, ಬೆಲ್ಜಿಯಂನಲ್ಲೂ ಬಿಸಿ ಗಾಳಿ ಹೊಡೆತ ಹೆಚ್ಚಿದ್ದು, ಜನರು ತತ್ತರಿಸಿದ್ದಾರೆ.
ಫ್ರಾನ್ಸ್‌ನಲ್ಲಿ ಮೃತರ ಪೈಕಿ ಮೂವರು ವೃದ್ಧರು ಸೇರಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕಾರಿನ ಒಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ 2 ಮತ್ತು 4 ವರ್ಷದ ಇಬ್ಬರು ಚಿಕ್ಕ ಮಕ್ಕಳು ಮೃತಪಟ್ಟಿದ್ದಾರೆ. ಇದರ ಜತೆಗೆ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಜನರು ನದಿ, ಕೊಳ್ಳಗಳಿಗೆ ತೆರಳುತ್ತಿದ್ದು ಆಳ ತಿಳಿಯದೆ ಮುಳುಗಿ ಸಾಯುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಫ್ರಾನ್ಸಿನಲ್ಲಿ ಇದುವರೆಗೆ ಒಟ್ಟು 40 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.. ಫ್ರಾನ್ಸ್‌ನ ಹಲವು ನಗರಗಳು ಸೋಮವಾರ ಐತಿಹಾಸಿಕ ಗರಿಷ್ಠ ತಾಪಮಾನ ದಾಖಲಿಸಿವೆ. ಇದೇ ವೇಳೆ, ಬೋರ್ಡೋ ನಗರದಲ್ಲಿ 41.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಕಳೆದ ವರ್ಷ ಆಗಸ್ಟ್‌ನಲ್ಲಿ ದಾಖಲಾಗಿದ್ದಕ್ಕಿಂತ ಹೆಚ್ಚಿದೆ.
ವಿಶ್ವದಲ್ಲಿ ಸೆಕೆಯ ಬೇಗೆ ಹೆಚ್ಚಳ
1970ರ ದಶಕಕ್ಕೆ ಹೋಲಿಸಿದರೆ ಮೆಕ್ಸಿಕೋ, ಕೀನ್ಯಾ, ಇಟಲಿ ಮತ್ತು ಇತರ ರಾಷ್ಟ್ರಗಳು 1-2 ತಿಂಗಳಿಗೂ ಹೆಚ್ಚು ಕಾಲ ಸೆಕೆಯ ತೀವ್ರ ಬೇಗೆಯನ್ನು ಎದುರಿಸುತ್ತಿವೆ ಎಂದು ಹೊಸ ಸಂಶೋಧನೆ ತಿಳಿಸಿದೆ. ಹಿಂದೆಂದೂ ಇಂತಹ ಪರಿಸ್ಥಿತಿ ಕಾಣದ ಸ್ಥಳಗಳಲ್ಲೂ ಈಗ ಬೇಗೆಗೆ ತುತ್ತಾಗಿವೆ. 2024ರಲ್ಲಿ ಜಾಗತಿಕವಾಗಿ ಸರಾಸರಿ 41 ದಿನಗಳ ಕಾಲ ಹೆಚ್ಚುವರಿ ಅಪಾಯಕಾರಿ ಶಾಖವನ್ನು ಜನರು ಅನುಭವಿಸಿದ್ದಾರೆ.
ಫ್ರಾನ್ಸ್ ಪಾಯಿಟಿಯರ್ಸ್‌ನಲ್ಲಿ 41.2 ಡಿ.ಸೆ. ಉಷ್ಣತೆ ದಾಖಲಾಗಿದ್ದು, ಇದು 1947ರ ಅನಂತರದ ಗರಿಷ್ಠ ತಾಪಮಾನ ಎಂದು ಹೇಳಲಾಗಿದೆ. ಸ್ಪೇನ್, ಬ್ರಿಟನ್, ಇಟಲಿ, ಬೆಳ್ಳಿಯಂ ಸಹಿತ ಯುರೋಪ್ ಖಂಡದ ಹಲವಾರು ದೇಶಗಳಲ್ಲಿ ಬಿಸಿಗಾಳಿ ತೀವ್ರತೆ ಹೆಚ್ಚಾಗಿದೆ. ಉತ್ತರ ಆಫ್ರಿಕಾದ ಸಹಾರಾ ಮರುಭೂಮಿಯ ಬಿಸಿ ಗಾಳಿಯನ್ನು 'ಒಮೆಗಾ ಬ್ಲಾಕ್' ಎಂಬ ನೈಸರ್ಗಿಕ ವಿದ್ಯಮಾನವು ಯುರೋಪ್‌ನತ್ತ ಪಸರಿಸುತ್ತಿದ್ದು, ಈ ಗಾಳಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ ತಾಪ ತೀವ್ರತೆ ಹೆಚ್ಚುತ್ತಿದೆ.
ಮನೆಗಳ ಛಾವಣಿಯ ಇಳಿಜಾರುಗಳಲ್ಲಿ ಗೂಡು ಕಟ್ಟುವ ಗುಬ್ಬಚ್ಚಿ ಮತ್ತಿತರ ಪಕ್ಷಿಗಳು ತಾಪಮಾನ 50 ರಿಂದ 60 ಡಿಗ್ರಿ ತಲುಪುತ್ತಿದ್ದಂತೆ ಸಹಿಸಿಕೊಳ್ಳಲಾಗದೆ ಗೂಡಿನಿಂದ ಹೊರಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿವೆ. ಮೂರು ದಿನಗಳಲ್ಲಿ ಈ ರೀತಿ ತೊಂದರೆಗೆ ಸಿಲುಕಿದ 150ಕ್ಕೂ ಹೆಚ್ಚು ಪಕ್ಷಿಗಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುರೋಪ್‌ನಲ್ಲಿ ಹೆಚ್ಚುತ್ತಿರುವ ತಾಪಮಾನವು ರೈಲ್ವೇ ವಲಯಕ್ಕೆ ಹೊಡೆತಗಳನ್ನು ಕೊಟ್ಟಿದೆ. ಓವರ್ ಹೆಡ್ ವಿದ್ಯುತ್ ತಂತಿಗಳು ಶಾಖದ ತೀವ್ರತೆಯಿಂದಾಗಿ ಜೋತು ಬೀಳುತ್ತಿದ್ದು ಕೆಳಗೆ ಸಾಗುವ ರೈಲುಗಳಿಗೆ ತಗಲುವ ಅಪಾಯ ಉಂಟಾಗಿದೆ. ಬಿಸಿಲಿಗೆ ರೈಲಿನ ಹಳಿಗಳ ಗಾತ್ರ ವಿಸ್ತಾರವಾಗುತ್ತಿದ್ದು ರೈಲು ನಿಖರ ವೇಗ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ರೈಲುಗಳ ಹವಾನಿಯಂತ್ರಣ ವ್ಯವಸ್ಥೆ ಮೇಲೂ ಒತ್ತಡ ಬೀಳುತ್ತಿದ್ದು ಇದು ಹೆಚ್ಚಿನ ರೈಲುಗಳ ರದ್ದತಿಗೆ ಕಾರಣವಾಗುತ್ತಿದೆ.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
23-08-26 06:17 pm
HK News Staffer
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
ತಾಂತ್ರಿಕ ದೋಷದಿಂದ ದಾಖಲೆ ಸುಟ್ಟ ಆರೋಪ ; ಪುತ್ತೂರಿನ...
23-08-26 05:18 pm
ರಾಜ್ಯದಲ್ಲಿ ಕೃತಕ ಪನೀರ್ ಬ್ಯಾನ್, ನಕಲಿ ಔಷಧ ಜಾಲ ಹಿ...
22-08-26 01:37 pm
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
24-08-26 11:05 am
HK News Staffer
ಹೊಳೆನರಸೀಪುರ ; ಟ್ರ್ಯಾಕ್ಟರ್ ಕೀಯನ್ನು ತಿರುಗಿಸಿದ ಮ...
23-08-26 05:20 pm
ಹೆತ್ತವರನ್ನು ಕೊಲ್ತೇನೆಂದು ಹೇಳಿ ಒಂಬತ್ತನೇ ಕ್ಲಾಸ್...
22-08-26 12:43 pm
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am