ಮಹಾರಾಷ್ಟ್ರದಲ್ಲಿ ಇಂದಿನಿಂದ ನೈಟ್​ ಕರ್ಫ್ಯೂ ಜಾರಿ ; ಹೊಸ ಗೈಡ್​ಲೈನ್ಸ್​ ಬಿಡುಗಡೆ

05-04-21 06:29 pm       Headline Karnataka News Network   ದೇಶ - ವಿದೇಶ

ಮಹಾರಾಷ್ಟ್ರದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗ್ತಿದೆ.

ಮುಂಬೈ,ಎ.5 : ಮಹಾರಾಷ್ಟ್ರದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗ್ತಿದೆ. ಈ ಹಿನ್ನೆಲೆ ಸೋಂಕನ್ನ ನಿಯಂತ್ರಣಕ್ಕೆ ತರಲು ನಿನ್ನೆ ಉದ್ಧವ್ ಠಾಕ್ರೆ ಸರ್ಕಾರ, ಏಪ್ರಿಲ್ 30ರವರೆಗೆ ಪ್ರತಿದಿನ ನೈಟ್​ ಕರ್ಫ್ಯೂ ಹಾಗೂ ವೀಕೆಂಡ್​ ಲಾಕ್​ಡೌನ್​ ಘೋಷಿಸಿದೆ. ಇದರ ಬೆನ್ನಲ್ಲೇ ಹೊಸ ಕೊರೊನಾ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಲಾಗಿದೆ. ಇಂದು ರಾತ್ರಿ 8 ಗಂಟೆಯಿಂದ ಈ ನಿಯಮಗಳು ಜಾರಿಗೆ ಬರಲಿವೆ.

ಹೊಸ ಮಾರ್ಗಸೂಚಿಗಳು :

  • ವಾರಾಂತ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ – ಶುಕ್ರವಾರ ರಾತ್ರಿ 8 ರಿಂದ ಸೋಮವಾರ ಬೆಳಗ್ಗೆ 7 ರವರೆಗೆ
  • ಪ್ರತಿದಿನ ರಾತ್ರಿ ಕರ್ಫ್ಯೂ (ರಾತ್ರಿ 8 ರಿಂದ ಬೆಳಗ್ಗೆ 7 ರವರೆಗೆ)
  • ತುರ್ತು ಸಂದರ್ಭ ಹಾಗೂ ಅಗತ್ಯ ವಸ್ತುಗಳಿಗಾಗಿ ಮಾತ್ರ ಮನೆಯಿಂದ ಹೊರಬರಲು ಅವಕಾಶ
  • ಹಗಲಿನಲ್ಲಿ ನಿಷೇಧಾಜ್ಞೆ ಜಾರಿ. 5 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಜನರು ಒಂದೆಡೆ ಸೇರುವಂತಿಲ್ಲ
  • ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಇಲ್ಲ. ಕೃಷಿ ಉತ್ಪನ್ನಗಳು ಮತ್ತು ಆಹಾರಧಾನ್ಯಗಳ ಸಾಗಾಟಕ್ಕೆ ಅವಕಾಶವಿದೆ
  • ಬೀಚ್,​ ಪಾರ್ಕ್ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳು ರಾತ್ರಿ 8ರಿಂದ ಬೆಳಗ್ಗೆ 7ರವರೆಗೆ ಬಂದ್
  • ದೇವಾಲಯಗಳು, ಅಂಗಡಿ, ಮಾಲ್‌ ಮತ್ತು ಮಾರುಕಟ್ಟೆಗಳು, ಚಿತ್ರಮಂದಿರ, ಬಾರ್‌, ರೆಸ್ಟೊರೆಂಟ್​, ಜಿಮ್, ಸಲೂನ್, ಸ್ಪಾ, ಸ್ವಿಮ್ಮಿಂಗ್ ಪೂಲ್, ವಾಟರ್​ ಪಾರ್ಕ್, ವಿಡಿಯೋ ಕ್ಲಬ್​ ಹಾಗೂ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ ಸಂಪೂರ್ಣ ಬಂದ್
  • ಖಾಸಗಿ ಸಂಸ್ಥೆಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ (ವರ್ಕ್​ ಫ್ರಮ್ ಹೋಂ) ಮಾಡಿಸಬೇಕು
  • ಶಾಲೆ-ಕಾಲೇಜುಗಳು ಮತ್ತು ಟ್ಯೂಷನ್​ ಕ್ಲಾಸ್​​ಗಳು ಬಂದ್​
  • ಸರ್ಕಾರಿ ಕಚೇರಿಗಳು ಶೇಕಡ 50ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬೇಕು
  • ಬ್ಯಾಂಕುಗಳು, ಷೇರು ಮಾರುಕಟ್ಟೆಗಳು, ವಿದ್ಯುತ್ ಸಂಸ್ಥೆಗಳು, ಟೆಲಿಕಾಂ, ವಿಮೆ, ಫಾರ್ಮಾ ಕಚೇರಿ ಹಾಗೂ ವಿಪತ್ತು ನಿರ್ವಹಣಾ ಕಚೇರಿಗಳು ಕಾರ್ಯನಿರ್ವಹಿಸಲು ಅವಕಾಶ
  • ಆಟೋಗಳಲ್ಲಿ ಡ್ರೈವರ್​+2, ಟ್ಯಾಕ್ಸಿಗಳಲ್ಲಿ ಡ್ರೈವರ್​+ಶೇ 50ರ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬೇಕು
  • 10, 12ನೇ ತರಗತಿ ಪರೀಕ್ಷೆಗಾಗಿ ಶಾಲೆಗಳು ಕಾರ್ಯನಿರ್ವಹಿಸಬಹುದು
  • ಬಸ್​ನಲ್ಲಿ ಸೀಟ್​ಗಳಿರುವಷ್ಟು ಮಾತ್ರ ಪ್ರಯಾಣಿಕರನ್ನ ಹತ್ತಿಸಿಕೊಳ್ಳಬೇಕು
  • ಏಪ್ರಿಲ್​ 10ರಿಂದ ಸಿನಿಮಾ ಮತ್ತು ಸೀರಿಯಲ್ ಚಿತ್ರೀಕರಣಕ್ಕೆ ಅವಕಾಶ, ಕೋವಿಡ್ ನಿಯಮಗಳನ್ನ ಪಾಲಿಸಬೇಕು, ಆರ್​ಟಿಪಿಸಿಆರ್ ಪರೀಕ್ಷೆಗಳನ್ನ ನಡೆಸಬೇಕು
  •  ಏಪ್ರಿಲ್ 30ರವರೆಗೆ ಈ ನಿಯಮಗಳು ಅನ್ವಯ

 

In view of the surge in Covid-19 cases, chief minister Uddhav Thackeray on Sunday announced new guidelines for the state. The new norms will be implemented from 8pm on Monday. Also, a complete lockdown will be imposed on weekends.