ಕೊರೊನಾಗೆ ಬ್ರೆಜಿಲ್​ ತತ್ತರ ; ಒಂದೇ ದಿನ 4 ಸಾವಿರಕ್ಕೂ ಹೆಚ್ಚು ಮಂದಿ ಸಾವು

07-04-21 05:48 pm       Headline Karnataka News Network   ದೇಶ - ವಿದೇಶ

ಬ್ರೆಜಿಲ್​ನಲ್ಲಿ ಕಳೆದ 24 ಗಂಟೆಗಳಲ್ಲಿ 4 ಸಾವಿರಕ್ಕೂ ಹೆಚ್ಚು ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಬ್ರೆಜಿಲ್​,ಎ.7:  ಜಗತ್ತಿನಾದ್ಯಂತ ಕೊರೊನಾ ಸೋಂಕು ಮತ್ತೊಮ್ಮೆ ತನ್ನ ಉಗ್ರ ಸ್ವರೂಪವನ್ನ ಪ್ರದರ್ಶಿಸುತ್ತಿದೆ. ಕೆಲವು ದೇಶಗಳಲ್ಲಿ ಕೊರೊನಾದ ಎರಡನೇ ಅಲೆ ಪ್ರಾರಂಭವಾಗಿದ್ದರೆ ಇನ್ನೂ ಕೆಲವು ದೇಶಗಳಲ್ಲಿ ಈಗಾಗಲೇ ಮೂರು ಮತ್ತು ನಾಲ್ಕನೇ ಕೊರೊನಾ ಅಲೆಗೆ ತತ್ತರಿಸುತ್ತಿವೆ. ಈ ಪೈಕಿ ಬ್ರೆಜಿಲ್ ಕೂಡ ಒಂದು.

ಬ್ರೆಜಿಲ್​ನಲ್ಲಿ ಕಳೆದ 24 ಗಂಟೆಗಳಲ್ಲಿ 4 ಸಾವಿರಕ್ಕೂ ಹೆಚ್ಚು ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬ್ರೆಜಿಲ್​ನಲ್ಲಿ ಇಷ್ಟು ಮಂದಿ ಸೋಂಕಿನಿಂದ ಒಂದೇ ದಿನಕ್ಕೆ ಸಾವನ್ನಪ್ಪಿರುವುದು ಇದೇ ಮೊದಲು. ಈ ಮೂಲಕ ಈವರೆಗೆ ಬ್ರೆಜಿಲ್​ನಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 3,37,364ಕ್ಕೆ ಏರಿಕೆಯಾಗಿದೆ. ಕೊರೊನಾದಿಂದ ಹೆಚ್ಚು ಜನರು ಬಲಿಯಾದ ದೇಶಗಳ ಪೈಕಿ ಬ್ರೆಜಿಲ್ ಈಗ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಯುನೈಟೆಡ್ ಸ್ಟೇಟ್ಸ್ ಇದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬ್ರೆಜಿಲ್​ನ ಎಪಿಡೆಮಿಯೊಲೊಜಿಸ್ಟ್ ಎಥೆಲ್ ಮೆಸಿಯೆಲ್.. ನಮ್ಮಿಂದ ದೇಶದ 10 ಪರ್ಸೆಂಟ್ ಜನರಿಗಷ್ಟೇ ಈವರೆಗೆ ವ್ಯಾಕ್ಸಿನ್ ನೀಡಲಾಗಿದೆ. ಇಷ್ಟು ವೇಗವಾಗಿ ಹರಡುತ್ತಿರುವ ಸೋಂಕನ್ನು ತಡೆಹಿಡಿಯಲು ಇರುವ ಏಕೈಕ ಮಾರ್ಗ ಕನಿಷ್ಟ 20 ದಿನಗಳ ಕಾಲ ಲಾಕ್​ಡೌನ್ ಮಾಡುವುದು ಎಂದು ಹೇಳಿದ್ದಾರೆ.

ಅಲ್ಲದೇ ದುರಾದೃಷ್ಟಕರ ವಿಚಾರ ಎಂದರೆ ಇಲ್ಲಿನ ರಾಜಕೀಯ ನಮ್ಮನ್ನು ಇಂದು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಇಷ್ಟೊಂದು ಮಂದಿ ಸಾವನ್ನಪ್ಪಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಮರುಗಿದ್ದಾರೆ. ವರ್ಲ್ಡ್ಡೋಮೀಟರ್ ಪ್ರಕಾರ ಜಗತ್ತಿನಾದ್ಯಂತ ಅತಿಹೆಚ್ಚು ಸೋಂಕಿತರನ್ನ ಹೊಂದಿದ ದೇಶಗಳ ಪಟ್ಟಿಯಲ್ಲೂ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಇಲ್ಲಿವರೆಗೆ ಬ್ರೆಜಿಲ್​ನಲ್ಲಿ 1,31,06,058 ಜನರು ಸೋಂಕಿಗೊಳಗಾಗಿದ್ದಾರೆ.  ಸೋಂಕಿನಿಂದ 3,37,364 ಮಂದಿ ಸಾವನ್ನಪ್ಪಿದ್ದಾರೆ. ಇನ್ನು 1,15,58,784 ಮಂದಿ ಸೋಂಕಿನಿಂದ ಗುಣಮುಖರಾಗಿದ್ದರೆ ಸಕ್ರಿಯ ಸೋಂಕಿತರ ಸಂಖ್ಯೆ 12,09,910 ಕ್ಕೆ ಏರಿದೆ.

For the first time since the start of the COVID-19 pandemic, Brazil has recorded more than 4,000 coronavirus deaths in a single day, a new grim milestone for the country as President Jair Bolsonaro continues to reject public health restrictions