ಮಹಾರಾಷ್ಟ್ರದಲ್ಲಿ ಹದಿನೈದು ದಿನ ಶಿಸ್ತಿನ ಕರ್ಫ್ಯೂ ; ಸಿಎಂ ಉದ್ಧವ್ ಠಾಕ್ರೆ ಘೋಷಣೆ

13-04-21 10:14 pm       Headline Karnataka News Network   ದೇಶ - ವಿದೇಶ

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಮುಂಬೈ, ಏಪ್ರಿಲ್ 13: ಮುಂಬೈ, ಏಪ್ರಿಲ್ 13: ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಆಗಲಿದೆ ಎಂಬ ಗಾಳಿಸುದ್ದಿಗಳಿಗೆ ತೆರೆ ಎಳೆದಿದ್ದಾರೆ ಸಿಎಂ ಉದ್ಧವ್ ಠಾಕ್ರೆ. ಇಂದು ರಾಜ್ಯವನ್ನುದ್ದೇಶಿಸಿ ವಿಡಿಯೋ ಸಂದೇಶ ನೀಡಿದ ಅವರು, 'ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಮಾಡುವುದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ. 

Night curfew in Maharashtra from March 28: Here's all you need to know -  cnbctv18.com

Maharashtra Chief Minister Uddhav Thackeray loses cool over question on  Shiv Sena's 'secularism' - watch video - The Financial Express

ಉದ್ಧವ್ ಠಾಕ್ರೆ ಅವರ ವಿಡಿಯೋ ಸಂದೇಶದ ಪ್ರಮುಖ ಅಂಶಗಳು ಇಂತಿವೆ.

  • ನಾಳೆ (ಏಪ್ರಿಲ್14) ರ ರಾತ್ರಿ 8 ಗಂಟೆಯಿಂದ ಮೇ 1 ರ ಬೆಳಿಗ್ಗೆ 7 ಗಂಟೆವರೆಗೆ ಹದಿನೈದು ದಿನಗಳ ಕಾಲ ಶಿಸ್ತಿನ ಕರ್ಫ್ಯೂ ಅನ್ನು ರಾಜ್ಯದಾದ್ಯಂತ ವಿಧಿಸಲಾಗಿದೆ. ಹೆಚ್ಚು ಮಂದಿ ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ. ತುರ್ತು ಸೇವೆಗಳು ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ಕಾರ್ಯ ನಿರ್ವಹಿಸಲಿವೆ.  
  • ರಾಜ್ಯದ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಇದೆ, ಆಸ್ಪತ್ರೆಗಳು ಬೆಡ್‌ಗಳು ಹಾಗೂ ರೆಮ್‌ಡೇಸ್ವೇರ್‌ ಲಸಿಕೆಗೆ ಬೇಡಿಕೆಯೂ ಹೆಚ್ಚಾಗಿದೆ ಎಂದರು ಸಿಎಂ.
  • ಬೇರೆ ರಾಜ್ಯಗಳಿಂದ ಆಮ್ಲಜನಕ ತರಿಸಿಕೊಳ್ಳಲು ಭಾರತೀಯ ವಾಯುಸೇನೆಯ ನೆರವು ಒದಗಿಸಿಕೊಡುವಂತೆ ಪ್ರಧಾನಿ ಮೋದಿ ಅವರ ಬಳಿ ಮಾತನಾಡುವುದಾಗಿ ಭರವಸೆ ನೀಡಿದರು ಠಾಕ್ರೆ.
  • ಮಹಾರಾಷ್ಟ್ರದಲ್ಲಿ ಇಂದು60,212 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.
  • ಕಳೆದ ನವೆಂಬರ್ ಡಿಸೆಂಬರ್ ವರೆಗೂ ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿತ್ತು. ರಾಜ್ಯದಲ್ಲಿ 1200 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದಿಸಲಾಗುತ್ತಿದೆ. ಅದಲ್ಲದೇ ಸಾವಿರ ಮೆಟ್ರಿಕ್ ಟನ್ ಕೋವಿಡ್ ರೋಗಿಗಳಿಗೆ ಖರ್ಚಾಗುತ್ತಿದೆ.
  • ಆಮ್ಲಜನಕದ ಕೊರತೆ ಜತೆಗೆ ಅಗತ್ಯ ಪ್ರದೇಶಗಳಿಗೆ ಸಾಗಾಣಿಕೆ ಕೂಡ ತಲೆನೋವಾಗಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಬಳಿ ವಾಯು ಸೇನೆ ನೆರವನ್ನು ಕೇಳಿದ್ದೇನೆ ಎಂದರು ಠಾಕ್ರೆ.
  • ಮುಂಬೈ, ಪುಣೆ, ವಿದರ್ಭಾ ಪ್ರದೇಶಗಳಲ್ಲಿ ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚಿಸಲಾಗುತ್ತಿದೆ. ಲಸಿಕೆಯನ್ನು ಹೆಚ್ಚೆಚ್ಚು ಕೊಡುವುದೇ, ಕೊರೊನಾ ನಿಯಂತ್ರಿಸಲು ಪ್ರಭಾವಿ ಮಾರ್ಗವಾಗಿದೆ.
  • ಸಂಘಟಿತವಾಗಿ ರೋಗದ ವಿರುದ್ಧ ಎಲ್ಲರೂ ಹೋರಾಡಬೇಕು, ರಾಜ್ಯದಲ್ಲಿ ನಿತ್ಯ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.

Ruling out a complete lockdown amid the extreme Covid situation in Maharashtra, Chief Minister Uddhav Thackeray Tuesday said the state government will impose Section 144 for starting 8 pm on April 14 till 7 am on May 1. Emergency services will remain open between 7 am and 8 pm daily, he said.