ಸಂಸತ್ ಸಭೆಯಲ್ಲಿ ಬೆತ್ತಲೆಯಾಗಿ ಕಾಣಿಸಿದ ಸಂಸದ ; ವರ್ಚುವಲ್ ಮೀಟಿಂಗ್ ಕರಾಮತ್ತು !

15-04-21 02:06 pm       Headline Karnataka News Network   ದೇಶ - ವಿದೇಶ

ಸಂಸತ್ ಸದಸ್ಯರೊಬ್ಬರು ಹೌಸ್‌ ಆಫ್‌ ಕಾಮನ್ಸ್‌ ವರ್ಚುವಲ್ ಸಭೆಯಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. 

ಕೆನಡಾ,ಎ.15: ಕೆನಡಾದ ಸಂಸತ್ ಸದಸ್ಯರೊಬ್ಬರು ಹೌಸ್‌ ಆಫ್‌ ಕಾಮನ್ಸ್‌ ವರ್ಚುವಲ್ ಸಭೆಯಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. 

ಕೆನಡಾದ ಪಾಂಟಿಯಾಕ್‌ನ ಕ್ಯುಬೆಕ್ ಜಿಲ್ಲೆಯನ್ನು 2015ರಿಂದ ಪ್ರತಿನಿಧಿಸುತ್ತಿರುವ ಸಂಸದ ವಿಲಿಯಮ್ ಅಮೋಸ್ ಬುಧವಾರ ನಡೆದ ವರ್ಚುವಲ್ ಸಭೆಯಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದು, ಆ ದೃಶ್ಯ ಸಭೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳ ಎದುರಿನ ಸ್ಕ್ರೀನ್‌ ಮೇಲೆ ಮೂಡಿದೆ.

ಕೋವಿಡ್‌ ಕಾರಣದಿಂದಾಗಿ ಹೌಸ್‌ ಆಫ್ ಕಾಮನ್ಸ್‌ ಸಭೆಯಲ್ಲಿ ಭೌತಿಕವಾಗಿ ಭಾಗವಹಿಸದ ಅನೇಕ ಜನಪ್ರತಿನಿಧಿಗಳು ವಿಡಿಯೊ ಕಾನ್ಫರೆನ್ಸ್‌ ಮೂಲಕ ವರ್ಚುವಲ್ ಮೀಟಿಂಗಲ್ಲಿ ಪಾಲ್ಗೊಂಡಿದ್ದರು.

ದಿ ಕೆನಡಿಯನ್ ಪ್ರೆಸ್ ಸಂಗ್ರಹಿಸಿರುವ ವರ್ಚುವಲ್ ಸಭೆಯ ‘ಸ್ಕ್ರೀನ್‌ಶಾಟ್‘ನಲ್ಲಿ, ಅಮೋಸ್ ಅವರು ಕ್ವಿಬೆಕ್ ಮತ್ತು ಕೆನಡಿಯನ್ ಧ್ವಜಗಳ ನಡುವೆ ಮೇಜಿನ ಹಿಂದೆ ನಿಂತಿರುವುದು ಕಾಣುತ್ತದೆ. ಆ ಚಿತ್ರದಲ್ಲಿ ಅವರ ದೇಹದ ಗುಪ್ತಾಂಗಗಳನ್ನು ಮೊಬೈಲ್ ಫೋನ್‌ನಿಂದ ಮರೆ ಮಾಡಿರುವಂತೆ ಕಾಣುತ್ತದೆ.

ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಸಂಸದ ಅಮೋಸ್, ‘ಇದೊಂದು ದುರದೃಷ್ಟಕರ ದೋಷ‘ ಎಂದು ಇಮೇಲ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ‘ನಾನು ಜಾಗಿಂಗ್‌ ಧಿರಿಸನ್ನು ಬದಲಿಸಲು ಕೋಣೆಗೆ ತೆರಳಿದ್ದಾಗ ಆಕಸ್ಮಿಕವಾಗಿ ವಿಡಿಯೊ ಆನ್‌ ಆಗಿದೆ. ಇದು ಉದ್ದೇಶಪೂರ್ವಕವಾಗಿ ಆಗಿರುವುದಲ್ಲ. ಇದಕ್ಕಾಗಿ ನಾನು ಹೌಸ್‌ ಆಫ್‌ ಕಾಮನ್ಸ್‌ ಸಭೆಯ ಸಹೋದ್ಯೋಗಿಗಳ ಕ್ಷಮೆಯಾಚಿಸುತ್ತೇನೆ. ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇನೆ‘ ಎಂದು ಹೇಳಿದ್ದಾರೆ.

Canadian Parliament member was caught stark naked in a virtual meeting of the House of Commons William Amos, who has represented the Quebec district of Pontiac since 2015, appeared on the screens of his fellow lawmakers completely naked on Wednesday.