ಬ್ರೇಕಿಂಗ್ ನ್ಯೂಸ್
04-02-26 02:02 pm HK News Desk ದೇಶ - ವಿದೇಶ
ಗಾಜಿಯಾಬಾದ್, ಫೆ.4 : ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಆನ್ಲೈನ್ ಗೇಮ್ ವ್ಯಸನಕ್ಕೆ ಒಳಗಾಗಿದ್ದ ಮೂವರು ಅಪ್ರಾಪ್ತ ಸೋದರಿಯರು 9ನೇ ಮಹಡಿ ಕಟ್ಟಡದಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರಂತ ನಡೆದಿದೆ. ಪಾಖಿ (12), ಪ್ರಾಚಿ (14), ಮತ್ತು ವಿಶಿಕಾ (16) ಎಂಬ ಒಂದೇ ಕುಟುಂಬದ ಮೂವರು ಸೋದರಿಯರು ಜೀವ ಕಳಕೊಂಡವರು.
ಭಾರತ್ ಸೊಸೈಟಿಯ ಕಾಲನಿಯಲ್ಲಿ ಘಟನೆ ನಡೆದಿದ್ದು ಇತ್ತೀಚೆಗೆ ಮಕ್ಕಳ ಗೇಮ್ ವ್ಯಸನದಿಂದ ಬೇಸತ್ತು ತಂದೆ, ತಾಯಿ ಇವರಿಂದ ಮೊಬೈಲ್ ಕಸಿದು ಬೇರೆ ಇಟ್ಟಿದ್ದರು. ಇದರಿಂದ ಬೇಸತ್ತ ಯುವತಿಯರು ತಾವೇ ಕೊರಿಯನ್ ರಾಜಕುಮಾರಿಯರೆಂದು ಭ್ರಮೆಯಲ್ಲಿ ಎಂಟು ಪುಟಗಳ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ತಕ್ಷಣವೇ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದು ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪ್ರಾಪ್ತ ಸೋದರಿಯರು ಕೋವಿಡ್ ಬಳಿಕ ಜನಪ್ರಿಯ ಕೊರಿಯನ್ ಆನ್ಲೈನ್ ಗೇಮ್ಗಳಲ್ಲಿ ವ್ಯಸನ ಆಗಿದ್ದರು. ಲವ್ ಗೇಮ್ ಎನ್ನುವ ವಿಡಿಯೋ ಗೇಮ್ ಚಟಕ್ಕೆ ಬಿದ್ದಿದ್ದ ಅವರು ತಮ್ಮನ್ನು ಭಾರತೀಯರಲ್ಲ, ಕೊರಿಯಾದ ರಾಜಕುಮಾರಿಗಳೆಂದು ಭ್ರಮೆಯಲ್ಲಿದ್ದರು. ತಂದೆ ಚೇತನ್ ಕುಮಾರ್ ಇಬ್ಬರು ಪತ್ನಿಯರನ್ನು ಹೊಂದಿದ್ದು ಮೂವರು ಹೆಣ್ಮಕ್ಕಳಿದ್ದರು. ಎರಡು ವರ್ಷಗಳಿಂದ ಶಾಲೆ ಬಿಟ್ಟು ಮೊಬೈಲ್ ಗೇಮ್ ವ್ಯಸನ ಹತ್ತಿಸಿಕೊಂಡಿದ್ದರು.
"ನಾವು ಕೊರಿಯಾ ಬಿಡಲು ಸಾಧ್ಯವಿಲ್ಲ. ಕೊರಿಯಾ ನಮ್ಮ ಜೀವನ. ನೀವು ನಮ್ಮನ್ನು ಮುಕ್ತಗೊಳಿಸಲು ಸಾಧ್ಯವಿಲ್ಲ. ನಾವು ನಮ್ಮ ಜೀವನವನ್ನು ಕೊನೆಗೊಳಿಸುತ್ತಿದ್ದೇವೆ ಎಂದು ಸೋದರಿಯರು ಡೈರಿಯಲ್ಲಿ ಬರೆದುಕೊಂಡಿದ್ದಾರೆ.
ಡೈರಿ ಆರಂಭದಲ್ಲಿ ನಾವೇನು ಬರೆದಿದ್ದೇವೋ ಅದೆಲ್ಲವೂ ಸತ್ಯ. ನಾವು ಹೊರಗಡೆ ಸಂಪರ್ಕ ಇಲ್ಲದೆ ಒಬ್ಬಂಟಿಯಾಗಿ ಇರಲು ಸಾಧ್ಯವಿಲ್ಲ. ನಾವು ತಪ್ಪು ದಾರಿ ಹಿಡಿಯುತ್ತಿದ್ದೇವೆ ಅಂತ ಗೊತ್ತು. ಇಲ್ಲಿ ಎಲ್ಲವನ್ನೂ ಬರೆದಿಟ್ಟಿದ್ದೇವೆ. ನೀವು ಓದಿ. ಸಾರಿ ಪಪ್ಪಾ.. ಎಂದು ಬರೆದಿದ್ದಾರೆ. ಅಲ್ಲದೆ, ಸಾರಿ ಅಂತ ಬರೆದು ಇಮೋಜಿ ಸಿಂಬಲನ್ನೂ ಹಾಕಿದ್ದಾರೆ. ಕೊರಿಯನ್ ಭಾಷೆಯ ಸಿಂಬಲನ್ನು ತಮ್ಮ ಕೋಣೆಯ ಗೋಡೆಯಲ್ಲು ಬರೆದಿದ್ದಾರೆ. ಬುಧವಾರ ನಸುಕಿನ 2.15ರ ಗಂಟೆ ವೇಳೆಗೆ ಇವರು ಬಾಲ್ಕನಿ ಮೂಲಕ ಟೆರೇಸ್ ಹೋಗಿದ್ದು ಒಬ್ಬರ ನಂತರ ಇನ್ನೊಬ್ಬರಂತೆ ಕೆಳಕ್ಕೆ ಹಾರಿದ್ದಾರೆ.
ತಂದೆಗೆ ಮಕ್ಕಳ ಮೊಬೈಲ್ ಗೀಳು ಇಷ್ಟೊಂದು ಅತಿರೇಕಕ್ಕೆ ಹೋಗಿರುವ ಬಗ್ಗೆ ಅರಿವಿಲ್ಲ. ಸ್ಥಳೀಯ ಪೊಲೀಸರು ಇದು ಯಾವ ಗೇಮ್, ಟಾಸ್ಕ್ ಏನಿತ್ತು ಎಂದು ಪತ್ತೆ ಮಾಡುತ್ತಿದ್ದಾರೆ.
In a tragic incident in Ghaziabad, three minor sisters aged 12, 14, and 16 allegedly died by suicide after jumping from the 9th floor of their apartment. The girls, reportedly addicted to a Korean online game, believed they were Korean princesses and left behind an eight-page note expressing emotional distress. Police are investigating the nature of the game and the circumstances that led to the incident.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm