ಬ್ರೇಕಿಂಗ್ ನ್ಯೂಸ್
17-04-21 09:53 pm Headline Karnataka News Network ದೇಶ - ವಿದೇಶ
ಕಾಸರಗೋಡು, ಎ.17: ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಡಳಿತ ನಗರ ಪ್ರದೇಶಗಳಲ್ಲಿ ಹೊಸ ರೀತಿಯ ನಿಯಂತ್ರಣ ಕ್ರಮಗಳನ್ನು ಜಾರಿಗೆ ತಂದಿದೆ. ನಗರ ಪ್ರದೇಶಗಳಿಗೆ ಬರುವ ಮಂದಿ ಕಡ್ಡಾಯ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಹೊಂದಿರಬೇಕು ಅಥವಾ ಕೋವಿಡ್ ಲಸಿಕೆಯನ್ನು ಹಾಕಿಸಿರಬೇಕು ಎಂಬ ನಿಯಮ ಜಾರಿಗೆ ತರುತ್ತಿದೆ.
ಕಾಸರಗೋಡು ಜಿಲ್ಲೆಯ ಕಾಸರಗೋಡು ನಗರ, ಕುಂಬಳೆ, ಉಪ್ಪಳ, ಕಾಞಂಗಾಡ್, ಚೆರುವತ್ತೂರು, ನೀಲೇಶ್ವರ ನಗರಗಳಲ್ಲಿ ಈ ಹೊಸ ನಿಯಮ ಎ.24ರಿಂದ ಜಾರಿಗೆ ಬರಲಿದೆ. ಜನರು ಮಾರ್ಕೆಟ್, ಶಾಪಿಂಗ್ ಇನ್ನಿತರ ಕಾರಣಕ್ಕೆ ಎಲ್ಲೆಂದರಲ್ಲಿ ಸಂಚರಿಸುವುದು, ಸೇರುವುದನ್ನು ತಪ್ಪಿಸಲು ಜಿಲ್ಲಾಡಳಿತ ಈ ರೀತಿಯ ಕಾನೂನು ಜಾರಿಗೆ ತರಲು ನಿರ್ಧರಿಸಿದೆ.
ಕಾಸರಗೋಡು ಜಿಲ್ಲಾಧಿಕಾರಿ ಡಾ. ಸಜಿತ್ ಬಾಬು ನೇತೃತ್ವದಲ್ಲಿ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಜನರಿಗೆ ಅರಿವು ಮೂಡಿಸುವುದಕ್ಕಾಗಿ ಹೊಸ ನಿಯಮವನ್ನು ತಕ್ಷಣಕ್ಕೆ ಜಾರಿಗೆ ತರದೆ ಒಂದು ವಾರ ಕಾಲ ಸಮಯ ಕೊಡಲಾಗಿದೆ. ಅಷ್ಟರಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು ಅಥವಾ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಹೊಂದಬೇಕು ಎಂದು ಸೂಚನೆ ನೀಡಲಾಗಿದೆ.
ಎ.24 ರ ಬೆಳಗ್ಗೆ 8ರಿಂದ ಹೊಸ ನೀತಿ ಜಾರಿಗೆ ಬರಲಿದ್ದು ಅಲ್ಲಲ್ಲಿ ಪೊಲೀಸರು ಪೆಟ್ರೋಲಿಂಗ್ ನಡೆಸಲಿದ್ದಾರೆ. ತಪಾಸಣೆ ನಡೆಸಲಿದ್ದು, ಲಸಿಕೆ ಹಾಕಿಸಿಕೊಂಡಿದ್ದಕ್ಕೆ ದೃಢಪತ್ರ ಇಲ್ಲದಿದ್ದಲ್ಲಿ ಹಿಂದಕ್ಕೆ ಕಳುಹಿಸಲಿದ್ದಾರೆ.
ಇದೇ ಸೋಮವಾರದಿಂದಲೇ ಹೊಸ ನೀತಿ ಜಾರಿಗೆ ತರುವ ಬಗ್ಗೆ ಜಿಲ್ಲಾಡಳಿತ ನಿರ್ಧರಿಸಿತ್ತು. ಆದರೆ, ಜನರಿಗೆ ಹೊಸ ನೀತಿಯ ಬಗ್ಗೆ ಅರಿವು ಮೂಡಿಸದೆ ಅದನ್ನು ಹೇರಬಾರದು ಎಂಬ ನೆಲೆಯಲ್ಲಿ ಆಡಳಿತಾತ್ಮಕ ಕಾರಣಕ್ಕೆ ಮುಂದಿನ ಶನಿವಾರದಿಂದ ಹೊಸ ನಿಯಮ ಜಾರಿಗೆ ತರಲು ನಿರ್ಧರಿಸಲಾಗಿದೆ. ಈಗ ನಿಷೇಧ ಜಾರಿಗೆ ತಂದಿರುವ ಪ್ರದೇಶಗಳಲ್ಲಿ ಪೊಲೀಸರು ತಪಾಸಣೆ ನಡೆಸಲಿದ್ದಾರೆ. ಜೊತೆಗೆ ಕೋವಿಡ್ ಲಸಿಕೆ ನೀಡಲು ಕ್ರಮ ಮತ್ತು ಸ್ಥಳದಲ್ಲೇ ಪರೀಕ್ಷೆ ನಡೆಸುವುದಕ್ಕೂ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ.
The Kasaragod district administration has imposed restrictions on people entering the town in the wake of surging Covid cases in the state. A Covid negative certificate or full vaccination certificate is needed for people to enter Kasaragod, Kanhangad, Neeleshwaram, Cheruvathur, Uppala and Kumbala towns. District collector Dr D Sajithbabu informed that the restriction will come into effect from Saturday.
21-10-25 11:01 pm
Bangalore Correspondent
Dharmasthala Case, CM Siddaramaiah: ಧರ್ಮಸ್ಥಳ...
21-10-25 09:45 pm
ನೆಲ್ಲಿಕಾರು ; ಟ್ರ್ಯಾಕ್ಟರ್ ಜೊತೆಗೆ ಬಾವಿಗೆ ಬಿದ್ದ...
21-10-25 03:40 pm
DK Shivakumar, R. Manjunath, Chief Minister S...
20-10-25 06:58 pm
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
21-10-25 03:11 pm
HK News Desk
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
21-10-25 09:49 pm
Mangalore Correspondent
Ashok Rai Puttur: 10 ಸಾವಿರ ಕುರ್ಚಿ ಹಾಕಿ ಒಂದು ಲ...
21-10-25 07:32 pm
ನಮ್ಮ ಸರ್ಕಾರ ಆರ್ಎಸ್ಎಸ್ ನಿಷೇಧ ಮಾಡಿಲ್ಲ, ಬಿಜೆಪಿ...
21-10-25 03:07 pm
ದಕ್ಷ ಅಧಿಕಾರಿಗಳಿಂದಾಗಿ ಕೊಲೆ, ಸುಲಿಗೆ ನಿಂತಿದೆ, ಕರ...
20-10-25 10:28 pm
Ashoka Janamana in Puttur, CM Siddaramaiah: ಪ...
20-10-25 07:25 pm
21-10-25 10:51 pm
Mangalore Correspondent
ಅಭಿಷೇಕ್ ಹನಿಟ್ರ್ಯಾಪ್ ಕೇಸ್ ; ನ್ಯಾಯಕ್ಕಾಗಿ ಜಾಲತಾಣ...
21-10-25 08:24 pm
ಮನೆಮಂದಿ ಮಲಗಿದ್ದಾಗಲೇ ಅಪಾರ್ಟ್ಮೆಂಟಿನ ಮೂರು ಮನೆಗಳಿ...
21-10-25 05:12 pm
MSME Fraud, Mangalore Bank, SBI Mallikatte: ಸ...
20-10-25 10:51 pm
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm