ಬ್ರೇಕಿಂಗ್ ನ್ಯೂಸ್
19-04-21 08:36 pm Headline Karnataka News Network ದೇಶ - ವಿದೇಶ
ದೆಹಲಿ, ಎ 19: ಕೊರೊನಾವೈರಸ್ ಎರಡನೇ ಅಲೆಯಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ಹೊತ್ತಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಧರಿಸಿದೆ.
ಮೇ 1ರಿಂದ ಎಲ್ಲರಿಗೂ ಕೊವಿಡ್ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಹೆಚ್ಚುವರಿ ಲಸಿಕೆ ಪ್ರಮಾಣವನ್ನು ನೇರವಾಗಿ ಉತ್ಪಾದಕರಿಂದ ಸಂಗ್ರಹಿಸಲು ರಾಜ್ಯಗಳಿಗೆ ಅಧಿಕಾರವಿದೆ, ಜೊತೆಗೆ 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವರ್ಗದ ಜನರಿಗೆ ಲಸಿಕೆ ನೀಡಬಹುದು. ಲಸಿಕೆ ತಯಾರಕರು ತಮ್ಮ ಪೂರೈಕೆಯ ಶೇ 50ರಷ್ಟು ಲಸಿಕೆಯನ್ನು ರಾಜ್ಯ ಸರ್ಕಾರಗಳಿಗೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಪೂರ್ವ ಘೋಷಿತ ಬೆಲೆಗೆ ಬಿಡುಗಡೆ ಮಾಡಬಹುದಾಗಿದೆ ಎಂದು ಸರ್ಕಾರ ಹೇಳಿದೆ.
ಭಾರತ ಸರ್ಕಾರವು ತನ್ನ ಪಾಲಿನಿಂದ, ಸೋಂಕಿನ ವ್ಯಾಪ್ತಿ (ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ) ಮತ್ತು ಕಾರ್ಯಕ್ಷಮತೆ (ಆಡಳಿತದ ವೇಗ) ದ ಆಧಾರದ ಮೇಲೆ ಲಸಿಕೆಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಿದೆ. ಆರೋಗ್ಯ ಮತ್ತು ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರು, 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಆದ್ಯತೆ ಮೇರೆಗೆ ಎರಡನೇ ಡೋಸ್ ನೀಡಲಾಗುವುದು.
ವಿಶ್ವದ ಅತಿದೊಡ್ಡ ಲಸಿಕೆ ವಿತರಣೆ ಅಭಿಯಾನದ 3 ನೇ ಹಂತದಲ್ಲಿ ಖರೀದಿ, ಅರ್ಹತೆ, ಲಸಿಕೆಗಳ ನಿರ್ವಹಣೆಯನ್ನು ಸುಲಭವಾಗಿ ಮಾಡಲಾಗುತ್ತಿದೆ. ಲಸಿಕೆ ಬೆಲೆಯ ಆಧಾರದ ಮೇಲೆ, ರಾಜ್ಯ ಸರ್ಕಾರಗಳು, ಖಾಸಗಿ ಆಸ್ಪತ್ರೆಗಳು, ಕೈಗಾರಿಕಾ ಸಂಸ್ಥೆಗಳು ಇತ್ಯಾದಿ ಉತ್ಪಾದಕರಿಂದ ಲಸಿಕೆ ಪ್ರಮಾಣವನ್ನು ಸಂಗ್ರಹಿಸಬಹುದು. ಖಾಸಗಿ ವ್ಯಾಕ್ಸಿನೇಷನ್ ಪೂರೈಕೆದಾರರು ತಮ್ಮ ಲಸಿಕೆಯ ಬೆಲೆಯನ್ನು ಪಾರದರ್ಶಕವಾಗಿ ಘೋಷಿಸಬೇಕು ಎಂದು ಸರ್ಕಾರ ಹೇಳಿದೆ.
ದೇಶದಲ್ಲಿ ಕಳೆದ 24ಗಂಟೆಯಲ್ಲಿ 2,73,810ಹೊಸ ಕೊರೊನಾ ಕೇಸ್ಗಳು ದಾಖಲಾಗಿದ್ದು, 1,619 ಜನರು ಮೃತಪಟ್ಟಿದ್ದಾರೆ. ಹಾಗೇ 1,44,178 ಜನರು ಕೊರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದೆ. ಅಲ್ಲಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆ 1,47,88,109ಕ್ಕೆ ಏರಿಕೆಯಾಗಿದೆ. ಅದರಲ್ಲಿ ಸಕ್ರಿಯ ಪ್ರಕರಣಗಳು 19,29,329. ಒಟ್ಟು ಚೇತರಿಕೆ ಕಂಡವರ ಸಂಖ್ಯೆ 1,29,53,821 ಮತ್ತು ಕೊರೊನಾದಿಂದ ಜೀವ ಕಳೆದುಕೊಂಡವರು 1,78,769 ಜನರು.
ಕೊರೊನಾ ಎರಡನೇ ಅಲೆಯಲ್ಲಿ ಹಿರಿಯ ನಾಗರಿಕರಿಗೆ ಹೋಲಿಸಿದರೆ ಯುವಜನರೇ ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತಿದ್ದಾರೆ. ಲಕ್ಷಣಗಳೂ ಸ್ವಲ್ಪ ವಿಭಿನ್ನವಾಗಿದ್ದು, ಬಾಯಿ ಒಣಗುವುದು, ಗ್ಯಾಸ್ಟ್ರಿಕ್, ಲೂಸ್ ಮೋಶನ್, ಕೆಂಪು ಕಣ್ಣು, ತಲೆನೋವುಗಳು ಕಾಣಿಸಿಕೊಳ್ಳುತ್ತಿವೆ. ಈ ಬಾರಿ ಕೊರೊನಾ ಪಾಸಿಟಿವ್ ಬಂದವರಿಗೆ ಎಲ್ಲರಿಗೂ ಜ್ವರ ಕಾಣಿಸಿಕೊಳ್ಳುತ್ತಿಲ್ಲ ಎಂದು ಜಿನೆಸ್ಟ್ರಿಂಗ್ಸ್ ಡಯಾಗ್ನೋಸ್ಟಿಕ್ ಸೆಂಟರ್ ಮುಖ್ಯಸ್ಥರಾದ ಗೌರಿ ಅಗರ್ವಾಲ್ ತಿಳಿಸಿದ್ದಾರೆ.
ದೇಶದಲ್ಲಿ ಕೊರೊನಾ ಚೇತರಿಕೆಯ ಪ್ರಮಾಣ 86.62ಕ್ಕೆ ಕುಸಿದಿದೆ. ಭಾರತದಲ್ಲಿ ಸಕ್ರಿಯ ಪ್ರಕರಣಗಳು 18,01,316 ಇದ್ದು, ಒಟ್ಟು ಸೋಂಕಿತರ ಸಂಖ್ಯೆಯ ಶೇ.12.18ರಷ್ಟಿದೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20 ಲಕ್ಷ ದಾಟಿದ್ದು ಆಗಸ್ಟ್ 7ರಂದು. 30 ಲಕ್ಷ ದಾಟಿದ್ದು ಆಗಸ್ಟ್ 23ರಂದು, 40 ಲಕ್ಷ ದಾಟಿದ್ದು ಸೆಪ್ಟೆಂಬರ್ 5 ಮತ್ತು 50 ಲಕ್ಷ ದಾಟಿದ್ದು ಸೆಪ್ಟೆಂಬ್ 16ರಂದು. ಕಳೆದ ಬಾರಿಗೆ ಹೋಲಿಸಿದರೆ ಸೋಂಕಿನ ಪ್ರಸರಣ ತುಂಬ ವೇಗವಾಗಿರುವುದು ಇನ್ನಷ್ಟು ಆತಂಕ ಮೂಡಿಸಿದೆ.
Vaccinations will be opened to all above 18 from May 1, the government announced today after Prime Minister Narendra Modi held a series of meetings over India's response to record daily surges in Covid cases.
21-10-25 03:40 pm
HK News Desk
DK Shivakumar, R. Manjunath, Chief Minister S...
20-10-25 06:58 pm
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
ಕಲಬುರಗಿಯಲ್ಲಿ ಭೂಕಂಪನ ; ಮನೆಯಿಂದ ಹೊರಬಂದ ಜನರು, ನಿ...
20-10-25 02:56 pm
ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನ ; ನೂರಾರು ಕಾರ್ಯಕರ್...
19-10-25 07:00 pm
21-10-25 03:11 pm
HK News Desk
INS Vikrant in Goa, PM Narendra Modi: ಗೋವಾದಲ್...
20-10-25 08:34 pm
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
21-10-25 03:07 pm
Mangalore Correspondent
ದಕ್ಷ ಅಧಿಕಾರಿಗಳಿಂದಾಗಿ ಕೊಲೆ, ಸುಲಿಗೆ ನಿಂತಿದೆ, ಕರ...
20-10-25 10:28 pm
Ashoka Janamana in Puttur, CM Siddaramaiah: ಪ...
20-10-25 07:25 pm
ಉಳ್ಳಾಲ ಟೀಮ್ ಹನುಮಾನ್ ತಂಡದಿಂದ ನವರಾತ್ರಿ ಯಕ್ಷವೇಷ...
19-10-25 10:32 pm
Karkala Abhishek Suicide Case, Arrest: ಅಭಿಷೇಕ...
19-10-25 07:58 pm
21-10-25 05:12 pm
Mangalore Correspondent
MSME Fraud, Mangalore Bank, SBI Mallikatte: ಸ...
20-10-25 10:51 pm
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm
ಚಿನ್ನದಂಗಡಿಗೆ ತೆರಳಿ ಬಣ್ಣನೆಯ ಮಾತುಗಳಿಂದ ಮರುಳು ;...
19-10-25 11:09 pm
Bangalore engineering College rape, Crime: ಬೆ...
19-10-25 01:26 pm