ರೈಲ್ವೇ ಹಳಿಗೆ ಬಿದ್ದ ಮಗು ಸೆಕೆಂಡಿನ ಅಂತರದಲ್ಲಿ ಪಾರು ! ಸಿಬ್ಬಂದಿಗೆ ರೈಲ್ವೇ ಇಲಾಖೆ ಟ್ವೀಟ್ ಪ್ರಶಂಸೆ

20-04-21 10:28 am       Headline Karnataka News Network   ದೇಶ - ವಿದೇಶ

ಮುಂಬೈ ರೈಲ್ವೇ ನಿಲ್ದಾಣದಲ್ಲಿ ಮನಕಲಕುವ ಘಟನೆ ನಡೆದಿದೆ. ರೈಲು ಬರುತ್ತಿದ್ದಾಗ ಹಳಿಗೆ ಬಿದ್ದ ಮಗುವೊಂದನ್ನು ರೈಲ್ವೇ ಸಿಬ್ಬಂದಿ ದೂರದಿಂದ ಓಡಿ ಬಂದು ಕೂದಲೆಳೆಯ ಅಂತರದಲ್ಲಿ ಬದುಕಿಸಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

ಮುಂಬೈ, ಎ.19: ಮುಂಬೈ ರೈಲ್ವೇ ನಿಲ್ದಾಣದಲ್ಲಿ ಮನಕಲಕುವ ಘಟನೆ ನಡೆದಿದೆ. ರೈಲು ಬರುತ್ತಿದ್ದಾಗ ಹಳಿಗೆ ಬಿದ್ದ ಮಗುವೊಂದನ್ನು ರೈಲ್ವೇ ಸಿಬ್ಬಂದಿ ದೂರದಿಂದ ಓಡಿ ಬಂದು ಕೂದಲೆಳೆಯ ಅಂತರದಲ್ಲಿ ಬದುಕಿಸಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಮಗುವನ್ನು ಕಾಪಾಡಿದ ವ್ಯಕ್ತಿಯನ್ನು ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ. 

ಓರ್ವ ಮಹಿಳೆ ಮತ್ತು ಮಗು ರೈಲ್ವೇ ನಿಲ್ದಾಣದ ಅಂಚಿನಲ್ಲಿ ನಡೆದು ಸಾಗುತ್ತಿದ್ದರು. ಅಚಾನಕ್ ಆಗಿ ಮಗು ನಿಲ್ದಾಣದಿಂದ ಹಳಿಗೆ ಬಿದ್ದು ಬಿಡುತ್ತದೆ. ಮಹಿಳೆ ನಿಲ್ದಾಣದ ಅಂಚಿನಲ್ಲಿ ಕೈ ಜೋಡಿಸಿ ಮಗುವನ್ನೇ ಕರೆಯುತ್ತಿರುತ್ತಾಳೆ. ಅಲ್ಲೆಲ್ಲೋ ದೂರದಿಂದ ಗಮನಿಸಿದ ಆ ವ್ಯಕ್ತಿ ಓಡೋಡಿ ಬಂದು ಮಗುವನ್ನು ಮೇಲೆತ್ತಿ ಹಾಕಿ ತಾನೂ ಹಳಿಯಿಂದ ಮೇಲೇರುತ್ತಾನೆ. ಸೆಕೆಂಡಿನ ಅಂತರದಲ್ಲಿ ಅದೇ ರೈಲು ಹಳಿಯಲ್ಲಿ ಸಾಗುತ್ತದೆ. ವಿಡಿಯೋ ಇಲ್ಲಿದೆ ನೋಡಿ.

ವಿಡಿಯೋ ರೈಲ್ವೇ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರೈಲ್ವೇ ಸಚಿವಾಲಯವು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಗುವನ್ನು ಕಾಪಾಡಿದ ಪಾಯಿಂಟ್ಸ್​ ಮನ್ ಮಯೂರ ಶೆಲ್ಕೆ ಅವರ ಕರ್ತವ್ಯ ಪಾಲನೆಗೆ ಗೌರವ ಸೂಚಿಸಿದೆ. ಪುಟ್ಟ ಮಗುವನ್ನು ಕಾಪಾಡಿದ ಮಯೂರ ಶೆಲ್ಕೆ ಧೈರ್ಯ ಮತ್ತು ಆತನ ಕರ್ತವ್ಯವನ್ನು ಮೆಚ್ಚಲೇಬೇಕು ಎಂದು ಸಿಸಿಟಿವಿಯ ವಿಡಿಯೋವನ್ನು ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದೆ.

A railway official in Maharashtra risked his life to save a child who fell on the tracks as a train was approaching the platform. The incident took place in Vangani railway station on Saturday.