ಮತ್ತೆ ಲಾಕ್​ಡೌನ್​ ಇಲ್ಲ; ಪ್ರಧಾನಿ ಮೋದಿ ಸ್ಪಷ್ಟನೆ

20-04-21 09:31 pm       Headline Karnataka News Network   ದೇಶ - ವಿದೇಶ

ದೇಶದಲ್ಲಿ ಕೊರೋನಾ ವೈರಸ್ ಸೋಂಕಿತ ಪ್ರಕರಣಗಳು ವ್ಯಾಪಕವಾಗಿ ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇಂದು ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು.

ನವದೆಹಲಿ, ಎ 20: ದೇಶದಲ್ಲಿ ಕೊರೋನಾ ವೈರಸ್ ಸೋಂಕಿತ ಪ್ರಕರಣಗಳು ವ್ಯಾಪಕವಾಗಿ ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇಂದು ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. ಕೊರೋನಾ ಎರಡನೇ ಅಲೆ ಸುನಾಮಿ ತರ ದೇಶವನ್ನು ಆವರಿಸಿದೆ. ದೇಶದಲ್ಲಿ ಮತ್ತೆ ಕೊರೋನಾ ಯುದ್ಧಭೀತಿ ತಲೆದೋರಿದೆ. ನಿಮ್ಮೆಲ್ಲರ ಸಂಕಷ್ಟಗಳೂ ನನಗೆ ಅರ್ಥವಾಗಿದೆ ಎಂದು ಹೇಳಿದರು.

ಜನವರಿ, ಫೆಬ್ರವರಿಯಲ್ಲಿ ಲಸಿಕೆ ಉತ್ಪಾದನೆ ಹೆಚ್ಚಳ ಮಾಡಲಾಗಿದೆ. ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಪಾವಧಿಯಲ್ಲಿ ವಿಜ್ಞಾನಿಗಳು ಲಸಿಕೆ ಕಂಡು ಹಿಡಿದಿದ್ದಾರೆ. ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ನಾನು ಎಲ್ಲಾ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಸ್ವಚ್ಛತಾ ಕಾರ್ಮಿಕರು, ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. COVID-19 ವಿರುದ್ಧ ಹೋರಾಡಲು ನೀವು ನಿಮ್ಮ ಜೀವನವನ್ನು ಮುಡುಪಾಗಿ ಇಟ್ಟಿದ್ದಿರಿ. ನೀವು ನಮ್ಮ ಸುರಕ್ಷತೆಗಾಗಿ ನಿಮ್ಮ ಕುಟುಂಬಗಳನ್ನು ತ್ಯಾಗ ಮಾಡಿದ್ದೀರಿ ಎಂದು ಪ್ರಧಾನಿ ಮೋದಿ ಹೇಳಿದರು.

India Working On 7 More COVID-19 Vaccines, Says Health Minister

ಜನವರಿ, ಫೆಬ್ರವರಿಯಲ್ಲಿ ಲಸಿಕೆ ಉತ್ಪಾದನೆ ಹೆಚ್ಚಳ ಮಾಡಲಾಗಿದೆ. ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಪಾವಧಿಯಲ್ಲಿ ವಿಜ್ಞಾನಿಗಳು ಲಸಿಕೆ ಕಂಡು ಹಿಡಿದಿದ್ದಾರೆ. ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ನಾನು ಎಲ್ಲಾ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಸ್ವಚ್ಛತಾ ಕಾರ್ಮಿಕರು, ಪೊಲೀಸರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. COVID-19 ವಿರುದ್ಧ ಹೋರಾಡಲು ನೀವು ನಿಮ್ಮ ಜೀವನವನ್ನು ಮುಡುಪಾಗಿ ಇಟ್ಟಿದ್ದಿರಿ. ನೀವು ನಮ್ಮ ಸುರಕ್ಷತೆಗಾಗಿ ನಿಮ್ಮ ಕುಟುಂಬಗಳನ್ನು ತ್ಯಾಗ ಮಾಡಿದ್ದೀರಿ ಎಂದು ಪ್ರಧಾನಿ ಮೋದಿ ಹೇಳಿದರು.

India first country to vaccinate over 70 lakh people in 26 days; Bihar,  Tripura top performers

ದೇಶವನ್ನು ಲಾಕ್​ಡೌನ್​ನಿಂದ ಬಚಾವ್​ ಮಾಡಬೇಕು. ಲಾಕ್​ಡೌನ್​ ಕಡೆಯ ಅಸ್ತ್ರ. ಈ ಅಸ್ತ್ರ ಪ್ರಯೋಗಕ್ಕೆ ಅವಕಾಶ ಮಾಡಿಕೊಡಬೇಡಿ. ಜನರಲ್ಲಿ ಕೊರೋನಾ ಬಗ್ಗೆ ಜಾಗೃತಿ ಮುಖ್ಯ. ಮೈಕ್ರೋ ಕಂಟೋನ್ಮೆಂಟ್ ವಲಯದ ಮೇಲೆ ನಿಗಾ ವಹಿಸಬೇಕಿದೆ ಎಂದರು.

ಕೊರೋನಾ ಪ್ರಕರಣಗಳು ಹೆಚ್ಚಾದ ತಕ್ಷಣ, ಫಾರ್ಮಾ ಕಂಪನಿಗಳು ಔಷಧಿಗಳ ಉತ್ಪಾದನೆಯನ್ನು ಹೆಚ್ಚಿಸಿದವು. ಈಗ ನಮ್ಮ ಔಷಧಿ ಉತ್ಪಾದನೆ ಹೆಚ್ಚಾಗಿದೆ ಮತ್ತು ಅದನ್ನು ಮತ್ತಷ್ಟು ಹೆಚ್ಚಿಸಲಾಗುವುದು. ನಾನು ನಿನ್ನೆ ಫಾರ್ಮಾ ಕಂಪನಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ಅವರೆಲ್ಲರೂ ಲಸಿಕೆ ಹೆಚ್ಚು ತಯಾರಿಸಲು ಬದ್ಧರಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

Prime Minister Narendra Modi addresses the nation on the current situation of Covid-19 in the country. “We are fighting another war against COVID-19. Things were better over the last few weeks but now we are experiencing the second wave,” he says.