ಬ್ರೇಕಿಂಗ್ ನ್ಯೂಸ್
26-04-21 04:06 pm Headline Karnataka News Network ದೇಶ - ವಿದೇಶ
ದೆಹಲಿ, ಏ. 26: ರಾಜ್ಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊವಿಡ್ ಲಸಿಕೆ ನೀಡಲಾಗುವುದು. ಲಸಿಕೆ ವಿತರಣೆ ಶನಿವಾರದಿಂದ ಆರಂಭವಾಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೂ ಕೊವಿಡ್ ಲಸಿಕೆ ಉಚಿತವಾಗಿ ನೀಡಲು ದೆಹಲಿ ಸರ್ಕಾರ ತೀರ್ಮಾನಿಸಿದೆ. ನಾವು ಇವತ್ತು 1.34 ಕೋಟಿ ಲಸಿಕೆ ಖರೀದಿಸಲು ಅನುಮತಿ ನೀಡಿದ್ದೇವೆ. ಖರೀದಿಸಿದ ಲಸಿಕೆಗಳು ಶೀಘ್ರದಲ್ಲಿಯೇ ಜನರಿಗೆ ವಿತರಣೆಯಾಗುವಂತೆ ನಾವು ಪ್ರಯತ್ನಿಸುತ್ತೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಸರ್ಕಾರದ ಅಧೀನದಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಉಚಿತ ಲಸಿಕೆ ಲಭ್ಯ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯ ಬಯಸುವವರು ಲಸಿಕೆಗೆ ಹಣ ಪಾವತಿ ಮಾಡಬೇಕಾಗುತ್ತದೆ. ರಾಜ್ಯ ಸರ್ಕಾರಗಳಿಗೆ ನೀಡುವ ಲಸಿಕೆ ಬೆಲೆಯನ್ನು ಕಡಿಮೆ ಮಾಡಿ ಎಂದು ಕೇಜ್ರಿವಾಲ್ ಲಸಿಕೆ ಉತ್ಪಾದಕರಲ್ಲಿ ಮನವಿ ಮಾಡಿದ್ದಾರೆ.
ಒಂದು ಡೋಸ್ ಲಸಿಕೆಯ ಬೆಲೆಯನ್ನು ರೂ 150ಕ್ಕೆ ಇಳಿಸಿ ಎಂದು ನಾನು ಲಸಿಕೆ ಉತ್ಪಾದಕರಲ್ಲಿ ಮನವಿ ಮಾಡುತ್ತಿದ್ದೇನೆ. ಲಾಭಗಳಿಸಲು ನಿಮಗೆ ಇಡೀ ಜೀವಮಾನವೇ ಉಳಿದಿದೆ. ಜನರು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವಾಗ ಲಾಭ ಮಾಡುವ ಕೆಲಸ ಸರಿಯಲ್ಲ. ಕೇಂದ್ರ ಸರ್ಕಾರವು ಈ ಲಸಿಕೆ ದರವನ್ನು ಇಳಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.
ಒಂದು ಲಸಿಕೆ ಉತ್ಪಾದಕರು ಅವರು ರಾಜ್ಯ ಸರ್ಕಾರಗಳಿಗೆ ಡೋಸ್ ಗೆ ₹ 400 ನೀಡುತ್ತಾರೆ ಎಂದು ಹೇಳಿದರು. ಎರಡನೇ ಉತ್ಪಾದಕರು ಡೋಸ್ಗೆ ₹ 600ನಂತೆ ನೀಡುವುದಾಗಿ ಹೇಳಿದರು. ಇಬ್ಬರೂ ಬೆಲೆಯನ್ನು ಕೇಂದ್ರ ಸರ್ಕಾರಕ್ಕಾಗಿ ಡೋಸ್ಗೆ ₹ 150ರಂತೆ ಇಡುತ್ತಾರೆ.ಈ ಬೆಲೆಗಳು ಎಲ್ಲರಿಗೂ ಒಂದೇ ಆಗಿರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಕೇಜ್ರಿವಾಲ್.
ಮೇ 1ರಂದು ಲಸಿಕೆ ವಿತರಣೆ ಆರಂಭವಾಗಲಿದ್ದು, ರಾಜ್ಯ ಮತ್ತು ಖಾಸಗಿ ಆಸ್ಪತ್ರೆಗಳು ನೇರವಾಗಿ ಲಸಿಕೆ ಉತ್ಪಾದಕರಿಂದಲೇ ಖರೀದಿಸಲಿ ಎಂದು ಕೇಂದ್ರ ಸರ್ಕಾರ ಹೇಳಿದೆ.
दुनिया के कई देशों के अनुभवों से पता चलता है कि कोरोना से छुटकारा पाने में वैक्सीन एक प्रभावी हथियार है। दिल्ली में 18 साल से ज़्यादा उम्र के सभी लोगों को आने वाले दिनों में सरकार मुफ़्त वैक्सीन लगाएगी। pic.twitter.com/5kEVddPOQ5
— Arvind Kejriwal (@ArvindKejriwal) April 26, 2021
Delhi will vaccinate all above 18 free of cost, Chief Minister Arvind Kejriwal said today. Vaccinations will be open to all adults from Saturday.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
09-09-25 11:48 am
Mangalore Correspondent
Gopadi Beach Drowning, Kundapura: ಕುಂದಾಪುರ ;...
08-09-25 12:08 pm
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm