ಬ್ರೇಕಿಂಗ್ ನ್ಯೂಸ್
27-04-21 08:42 pm Headline Karnataka News Network ದೇಶ - ವಿದೇಶ
Photo credits : enANI
ಮಧ್ಯಪ್ರದೇಶ: ಮೊನ್ನೆಯಷ್ಟೇ ಕೇರಳದಲ್ಲಿ ಆಸ್ಪತ್ರೆಯೊಂದರ ಕೊವಿಡ್ 19 ವಾರ್ಡ್ನಲ್ಲಿ ಮದುವೆಯೊಂದು ನಡೆದಿತ್ತು. ಕೊವಿಡ್ ಸೋಂಕು ಪಾಸಿಟಿವ್ ಬಂದು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದ ವರನನ್ನು ವಧು ಪಿಪಿಇ ಕಿಟ್ ಧರಿಸಿ ಬಂದು ವರಿಸಿದ್ದಳು.
ಈಗ ಅಂಥದ್ದೇ ಒಂದು ಮದುವೆ ಮಧ್ಯಪ್ರದೇಶದ ರತ್ಲಮ್ನಲ್ಲಿ ನಡೆದಿದೆ. ಇಲ್ಲೂ ಸಹ ವರನಿಗೆ ಕೊವಿಡ್ 19 ಸೋಂಕು ತಗುಲಿದ್ದರಿಂದ ಇಬ್ಬರೂ ಪಿಪಿಇ ಕಿಟ್ ಧರಿಸಿ ಮದುವೆಯಾಗಿದ್ದಾರೆ.
ವಧು -ವರರು ಪಿಪಿಇ ಕಿಟ್ ಧರಿಸಿ ವಿವಾಹವಾದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಮದುವೆಯಲ್ಲಿ ವಧು-ವರರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸುವುದು ಪದ್ಧತಿ. ಆದರೆ ಕೊರೊನಾ ಸಂಕಷ್ಟದಿಂದಾಗಿ ಈ ಜೋಡಿ ಪಿಪಿಇ ಕಿಟ್ ಧರಿಸಿ ವಿವಾಹವಾಗಬೇಕಾಯಿತು. ಇವರಿಬ್ಬರೂ ಅಗ್ನಿಕುಂಡದ ಸುತ್ತ ತಿರುಗುವಾಗ ಹಿನ್ನೆಲೆಯಲ್ಲಿ ಮಂತ್ರಗಳ ಪಠಣೆಯನ್ನೂ ಕೇಳಬಹುದು.

ಮದುವೆಗೆ ಮುಹೂರ್ತ ನಿಗದಿಯಾಗಿಹೋಗಿತ್ತು. ಆದರೆ ಏಪ್ರಿಲ್ 19ರಂದು ವರನಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಮದುವೆಯನ್ನು ಮುಂದೂಡುವಂತೆಯೂ ಇರಲಿಲ್ಲ. ಹೀಗಾಗಿ ಸ್ಥಳೀಯ ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಈ ಜೋಡಿ ವಿವಾಹವಾಗಿದೆ. ನಾವು ಒಪ್ಪಿಗೆ ಕೊಡಲೇಬೇಕಾಯಿತು. ಆದರೆ ಪಿಪಿಇ ಕಿಟ್ ಧರಿಸಿ, ಕೊವಿಡ್ 19 ಮುನ್ನೆಚ್ಚರಿಕಾ ಕ್ರಮದೊಂದಿಗೆ ಮದುವೆಯಾಗಬೇಕು ಎಂದು ಷರತ್ತು ವಿಧಿಸಲಾಗಿತ್ತು. ಈ ಷರತ್ತಿನಂತೆ ಜೋಡಿ ಮದುವೆಯಾಗಿದ್ದಾರೆ ಎಂದು ರತ್ಲಮ್ನ ತಹಸೀಲ್ದಾರ್ ತಿಳಿಸಿದ್ದಾರೆ.

ದೇಶದ ಎಲ್ಲ ರಾಜ್ಯಗಳಲ್ಲೂ ಕೊವಿಡ್ ಸೋಂಕು ಹೆಚ್ಚುತ್ತಿರುವ ಕಾರಣಕ್ಕೆ ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಜನರು ಗುಂಪುಗೂಡುವಂತಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ಮದುವೆ ಕಾರ್ಯಕ್ರಮಕ್ಕೆ ಕೇವಲ 50 ಜನರು ಮಾತ್ರ ಸೇರಬಹುದು ಎಂದು ಸೂಚನೆ ಇದೆ. ಇನ್ನು ಇಲ್ಲಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮತ್ತೊಂದು ಐಡಿಯಾ ಮಾಡಿದ್ದಾರೆ. ಯಾವ ಜೋಡಿ ಕೇವಲ 10 ಜನ ಅತಿಥಿಗಳ ಸಮ್ಮುಖದಲ್ಲಿ ಮದುವೆಯಾಗುತ್ತಾರೋ, ಅವರಿಗೆ ನಮ್ಮ ಮನೆಯಲ್ಲೇ ಆತಿಥ್ಯ, ಔತಣಕೂಟ ವಹಿಸುವುದಾಗಿಯೂ ಹೇಳಿಕೊಂಡಿದ್ದಾರೆ. ಈ ಮೂಲಕ ಜನರು ಗುಂಪುಗೂಡುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ.
#WATCH | Madhya Pradesh: A couple in Ratlam tied the knot wearing PPE kits as the groom is #COVID19 positive, yesterday. pic.twitter.com/mXlUK2baUh
— ANI (@ANI) April 26, 2021
Acouple in Madhya Pradesh's Ratlam got married in PPE kits after the groom tested positive for Covid-19. Both the bride as well as the groom took the pheras as mantras were chanted by a pandit in the backdrop.
20-03-26 12:02 pm
HK News Staffer
ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪ...
20-03-26 12:00 pm
ಶಿವಮೊಗ್ಗದ ಹುಲಿ ಸಿಂಹ ಧಾಮದಲ್ಲಿ ನೀರಾನೆ ದಾಳಿ ; 26...
20-03-26 10:03 am
ಗ್ಯಾಸ್ ಸಿಲಿಂಡರ್ ಅಭಾವ; ಬಹುತೇಕ ಹೋಟೆಲ್ ಗಳು ಬಂದ್...
19-03-26 05:01 pm
DG Ramachandra Rao, Sandesh PG: ರಕ್ಷಕರೇ ಭಕ್ಷಕ...
18-03-26 11:00 pm
19-03-26 04:51 pm
HK News Staffer
ಹೊರ್ಮುಜ್ ಜಲಸಂಧಿಯತ್ತ ಭಾರತ ನೌಕಾಪಡೆ ; ಗಲ್ಫ್ ನಲ್ಲ...
19-03-26 04:35 pm
ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲ ಎನ್ನುವುದೇ ಅಪ...
18-03-26 07:11 pm
ಎಲ್ಲರನ್ನೂ ಕ್ಷಮಿಸಿ ಬಿಡು..! ದಯಾಮರಣಕ್ಕೆ ಅನುಮತಿ ಪ...
16-03-26 11:05 pm
ಆರೆಸ್ಸೆಸ್ ಮತ್ತು ಗುಪ್ತಚರ ಸಂಸ್ಥೆ 'ರಾ' ಬ್ಯಾನ್ ಮಾ...
16-03-26 09:30 pm
20-03-26 03:39 pm
HK News Staffer
ದ.ಕ. ಜಿಲ್ಲೆಯಲ್ಲಿ ಮಾರ್ಚ್ 20ರಂದೇ ಈದುಲ್ ಫಿತರ್ ಹಬ...
19-03-26 11:30 pm
ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣಕ್ಕೆ ಟ್ವಿಸ್ಟ್!...
19-03-26 05:27 pm
ಗ್ಯಾಸ್ ಬಿಲ್ ನಲ್ಲಿ 20 ರು. ಬಾಕಿ ಇದೆಯೆಂದು ಸೈಬರ್...
19-03-26 02:51 pm
ಮೂಡುಬಿದ್ರೆ ; ಕೋಳಿ ಅಂಕಕ್ಕೆ ಪೊಲೀಸ್ ದಾಳಿ, ಆರು ಮಂ...
19-03-26 01:05 pm
20-03-26 04:09 pm
HK News Desk
Mannagudda Petrol Pump Fight: ಮಣ್ಣಗುಡ್ಡ ಪೆಟ್ರ...
19-03-26 10:38 pm
ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ...
19-03-26 12:16 pm
Mangalore Crime: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡ...
18-03-26 11:01 pm
Indian American Family Robbery: ಒಂದೇ ನಿಮಿಷದಲ್...
15-03-26 12:49 pm