ಭಾರತದಲ್ಲಿ ಬರೋಬ್ಬರಿ 3.80 ಲಕ್ಷ ಕೊರೊನಾ ಸೋಂಕಿತರು ಪತ್ತೆ ; 3498 ಮಂದಿ ಸಾವು

30-04-21 11:31 am       Headline Karnataka News Network   ದೇಶ - ವಿದೇಶ

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3.80 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ನವದೆಹಲಿ, ಏಪ್ರಿಲ್ 30: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3.80 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಇದು ದೇಶವನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಬಹುದು ಎನ್ನುವ ಆತಂಕ ಎದುರಾಗಿದೆ, ನಿತ್ಯ ಸಾವಿರಾರು ಮಂದಿ ಪ್ರಾಣ ಬಿಡುತ್ತಿದ್ದಾರೆ. ಆಸ್ಪತ್ರೆ, ಆಕ್ಸಿಜನ್ ಇಲ್ಲದೆ ಜನರು ಪರದಾಡುತ್ತಿದ್ದಾರೆ.

COVID-19: India's Remarkable Story of Ramping-Up and Becoming Self-Reliant  in Testing | The Weather Channel - Articles from The Weather Channel |  weather.com

ದೇಶದಲ್ಲಿ ಇಂದು 3,86,452 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, 3498 ಮಂದಿ ಸಾವನ್ನಪ್ಪಿದ್ದಾರೆ, 2,87,540 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಒಟ್ಟು 1,87,62,976 ಕೊರೊನಾ ಸೋಂಕಿತರಿದ್ದಾರೆ, ಇದುವರೆಗೂ 1,53,84,418 ಮಂದಿ ಗುಣಮುಖರಾಗಿದ್ದಾರೆ.

2,08,330 ಮಂದಿ ಮೃತಪಟ್ಟಿದ್ದಾರೆ, 31,70,228 ಸಕ್ರಿಯ ಪ್ರಕರಣಗಳಿವೆ, ಇದುವರೆಗೂ ಒಟ್ಟು 15,22,45,179 ಲಸಿಕೆ ವಿತರಿಸಲಾಗಿದೆ. ಒಟ್ಟು 28,63,92,086 ಮಾದರಿಗಳನ್ನು ಏಪ್ರಿಲ್ 29ರವರೆಗೆ ಪರೀಕ್ಷಿಸಲಾಗಿದೆ. ಏಪ್ರಿಲ್ 29ರಂದು ಒಂದೇ ದಿನ, 19,20,107 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.

India on Friday posted a record daily rise of over 3.86 lakh new Covid-19 cases and continued to post over 3,000 deaths for the third consecutive day, as per Union health ministry data updated at 8 am.