ಪಾಕಿಸ್ಧಾನದಲ್ಲಿ ಆಡಳಿತ ಸೇವೆಗೆ ಮೊದಲ ಹಿಂದು ಮಹಿಳೆ ಆಯ್ಕೆ

08-05-21 03:41 pm       Headline Karnataka News Network   ದೇಶ - ವಿದೇಶ

ಪಾಕಿಸ್ಥಾನದಲ್ಲಿ ಇದೇ ಮೊದಲ ಬಾರಿಗೆ ಹಿಂದು ಮಹಿಳೆಯೊಬ್ಬರು ಅಲ್ಲಿನ ಪ್ರತಿಷ್ಠಿತ ಆಡಳಿತ ಸೇವೆಯ ಸಿಎಸ್ಎಸ್ ಪರೀಕ್ಷೆಯನ್ನು ತೇರ್ಗಡೆಯಾಗಿದ್ದಾರೆ.

Photo credits : Dr Sana Ramchand on Twitter.

ಇಸ್ಲಮಾಬಾದ್, ಮೇ 8: ಪಾಕಿಸ್ಥಾನದಲ್ಲಿ ಇದೇ ಮೊದಲ ಬಾರಿಗೆ ಹಿಂದು ಮಹಿಳೆಯೊಬ್ಬರು ಅಲ್ಲಿನ ಪ್ರತಿಷ್ಠಿತ ಆಡಳಿತ ಸೇವೆಯ ಸಿಎಸ್ಎಸ್ (ಸೆಂಟ್ರಲ್ ಸುಪೀರಿಯರ್ ಸರ್ವಿಸಸ್) ಪರೀಕ್ಷೆಯನ್ನು ತೇರ್ಗಡೆಯಾಗಿದ್ದಾರೆ. ಈ ಮೂಲಕ ಆಡಳಿತ ಸೇವೆಗಳಿಗೆ ಆಯ್ಕೆಯಾದ ಪಾಕಿಸ್ಥಾನದ ಮೊದಲ ಹಿಂದು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವೃತ್ತಿಯಲ್ಲಿ ವೈದ್ಯೆಯಾಗಿರುವ ಸನಾ ರಾಮಚಂದ್ ಎಂಬವರು ಈ ಸಾಧನೆ ಮಾಡಿದ ದಿಟ್ಟ ಮಹಿಳೆ. ಈಕೆ ಪಾಕಿಸ್ಥಾನದಲ್ಲಿ ಅತಿ ಹೆಚ್ಚು ಹಿಂದು ಜನಸಂಖ್ಯೆ ಇರುವ ಸಿಂಧ್ ಪ್ರಾಂತ್ಯದ ಶಿಕಾರ್ಪುರ್ ಜಿಲ್ಲೆಯ ಗ್ರಾಮೀಣ ಪ್ರದೇಶದ ಮಹಿಳೆ.

ಲಿಖಿತ ಪರೀಕ್ಷೆಗೆ 18553 ಮಂದಿ ಹಾಜರಾಗಿದ್ದು, ಆ ಪೈಕಿ 221 ಮಂದಿ ತೇರ್ಗಡೆಯಾಗಿದ್ದಾರೆ. ಅದರಲ್ಲಿ ಸನಾ ಕೂಡ ಒಬ್ಬರಾಗಿದ್ದಾರೆ. ತೇರ್ಗಡೆಯ ಬಳಿಕ ವಹೇಗುರು ಗುರು ಜೀ ಕಾ ಖಲ್ಸಾ ವಹೇಗುರು ಜಿ ಕಿ ಫತೇಹ್ ಎಂದು ಟ್ವೀಟ್ ಮಾಡಿದ್ದಾರೆ. ಸರ್ವಶಕ್ತ ಅಲ್ಲಾನ ಕೃಪೆಯಿಂದ ನಾನು ಈ ಸಾಧನೆ ಮಾಡಿದ್ದೇನೆ. ಪಿಎಎಸ್ ಹುದ್ದೆಗೆ ನೇಮಕವಾಗಿರುವ ಬಗ್ಗೆ ಹೇಳಿಕೊಳ್ಳಲು ಸಂತೋಷ ಪಡುತ್ತಿದ್ದೇನೆ. ಇದರೆಲ್ಲಾ ಕ್ರೆಡಿಟ್ ನನ್ನ ಹೆತ್ತವರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ. 

In a first, a Hindu woman in Pakistan has cleared the country’s prestigious Central Superior Services (CSS) examination and has been selected for the elite Pakistan Administrative Services (PAS). Sana Ramachandra is an MBBS doctor, hailing from a rural area of the Shikarpur district in Sindh province, which has the largest Hindu population in Pakistan.