Twitter ಸಂಸ್ಥೆಯಿಂದ ಭಾರತಕ್ಕೆ 110 ಕೋಟಿ ಕೋವಿಡ್‌ ನೆರವು

11-05-21 11:40 am       Headline Karnataka News Network   ದೇಶ - ವಿದೇಶ

ಕೋವಿಡ್‌ ಎರಡನೇ ಅಲೆಗೆ ತತ್ತರಿಸಿರುವ ಭಾರತಕ್ಕೆ ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್‌ ಇಂಕ್‌ ಸುಮಾರು ₹110 ಕೋಟಿ ರೂಪಾಯಿ ಆರ್ಥಿಕ ನೆರವು ಪ್ರಕಟಿಸಿದೆ.

Photo credits : wired

ನವದೆಹಲಿ,ಮೇ 11: ಕೋವಿಡ್‌ ಎರಡನೇ ಅಲೆಗೆ ತತ್ತರಿಸಿರುವ ಭಾರತಕ್ಕೆ ಸಾಮಾಜಿಕ ಮಾಧ್ಯಮ ಕಂಪನಿ ಟ್ವಿಟರ್‌ ಇಂಕ್‌ ಸುಮಾರು ₹110 (15 ಮಿಲಿಯನ್‌ ಡಾಲರ್‌) ಕೋಟಿ ರೂಪಾಯಿ ಆರ್ಥಿಕ ನೆರವು ಪ್ರಕಟಿಸಿದೆ.

ಭಾರತದಲ್ಲಿ ವೈದ್ಯಕೀಯ ನೆರವು ನೀಡಲು ಮೂರು ಸರ್ಕಾರೇತರ ಸಂಸ್ಥೆಗಳಿಗೆ ಈ ದೇಣಿಗೆ ನೀಡಿಲಾಗಿದೆ ಎಂದು ಟ್ವಿಟರ್‌ ಇಂಕ್‌ನ ಸಿಇಒ ಜಾಕ್‌ ಪ್ಯಾಟ್ರಿಕ್‌ ಟ್ವೀಟ್‌ ಮಾಡಿದ್ದಾರೆ.

ಭಾರತದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಕೇರ್, ಏಡ್‌ ಇಂಡಿಯಾ ಹಾಗೂ ಸೇವಾ ಸರ್ಕಾರೇತರ ಸಂಸ್ಥೆಗಳಿಗೆ ಈ ನೆರವು ಸಿಗಲಿದೆ.

ಕೇರ್‌ ಸಂಸ್ಥೆಗೆ ಸುಮಾರು ₹73 ಕೋಟಿ, ಏಡ್‌ ಇಂಡಿಯಾ ಹಾಗೂ ಸೇವಾ ಸಂಸ್ಥೆಗಳಿಗೆ ತಲಾ ₹17 ಕೋಟಿ ದೊರೆಯಲಿದೆ. ಮೂರು ಸಂಸ್ಥೆಗಳು ಲಸಿಕೆ, ಆಮ್ಲಜನಕ ಸೇರಿದಂತೆ ತುರ್ತು ವೈದ್ಯಕೀಯ ನೆರವಿಗೆ ಈ ದೇಣಿಗೆಯನ್ನು ಬಳಕೆ ಮಾಡಲಿವೆ.

Microblogging giant Twitter has donated USD 15 million to help address the COVID-19 crisis in India which is battling the unprecedented second wave of the deadly pandemic. Twitter CEO Jack Patrick Dorsey on Monday tweeted that the amount has been donated to three non-governmental organizations Care, Aid India, and Sewa International USA.