ಗಾಜಾ ಉಗ್ರರ ಮೇಲೆ ಮತ್ತೆ ಇಸ್ರೇಲ್ ದಾಳಿ ; ತ್ರಿವಳಿ ಕಟ್ಟಡ ಪುಡಿಗಟ್ಟಿದ ಮಿಲಿಟರಿ, 42 ಸಾವು

16-05-21 09:27 pm       Headline Karnataka News Network   ದೇಶ - ವಿದೇಶ

ಪ್ಯಾಲೆಸ್ತೀನ್ ದೇಶದ ಗಾಜಾ ಪಟ್ಟಿಯ ಹಮಾಸ್ ಉಗ್ರರ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದ್ದು , ಇಂದು ಕೆಲವೇ ನಿಮಿಷಗಳ ಅಂತರದಲ್ಲಿ ಬಾಂಬೆಸೆದು ಗಾಜಾದಲ್ಲಿದ್ದ ತ್ರಿವಳಿ ಕಟ್ಟಡಗಳನ್ನು ಧ್ವಂಸ ಮಾಡಿದೆ. ಘಟನೆಯಲ್ಲಿ ಕನಿಷ್ಠ 42 ಮಂದಿ ಸಾವಿಗೀಡಾಗಿದ್ದಾರೆ.

ಗಾಜಾ, ಮೇ 16: ಪ್ಯಾಲೆಸ್ತೀನ್ ದೇಶದ ಗಾಜಾ ಪಟ್ಟಿಯ ಹಮಾಸ್ ಉಗ್ರರ ಮೇಲೆ ಇಸ್ರೇಲ್ ದಾಳಿ ಮುಂದುವರಿಸಿದ್ದು , ಇಂದು ಕೆಲವೇ ನಿಮಿಷಗಳ ಅಂತರದಲ್ಲಿ ಬಾಂಬೆಸೆದು ಗಾಜಾದಲ್ಲಿದ್ದ ತ್ರಿವಳಿ ಕಟ್ಟಡಗಳನ್ನು ಧ್ವಂಸ ಮಾಡಿದೆ. ಘಟನೆಯಲ್ಲಿ ಕನಿಷ್ಠ 42 ಮಂದಿ ಸಾವಿಗೀಡಾಗಿದ್ದಾರೆ.

ಇದೇ ವೇಳೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಪ್ಯಾಲೆಸ್ತೀನ್ ಮೇಲಿನ ದಾಳಿ ಮುಂದುವರಿಯಲಿದೆ. ಗಾಜಾ ಉಗ್ರರು ಭಾರೀ ಬೆಲೆ ತೆರಲಿದ್ದಾರೆ ಎಂದು ಸುಳಿವು ನೀಡಿದ್ದಾರೆ.

ಗಾಜಾ ನಗರದಲ್ಲಿದ್ದ ಮೂರು ಕಟ್ಟಡಗಳ ಮೇಲೆ ಬಾಂಬ್ ದಾಳಿ ನಡೆದಿದ್ದು , ಕೆಲವೇ ನಿಮಿಷಗಳ ಅಂತರದಲ್ಲಿ ನೋಡ ನೋಡುತ್ತಲೇ 50 ಮೀಟರ್ ಎತ್ತರದ ಕಟ್ಟಡಗಳು ಕುಸಿದು ಬಿದ್ದ ವಿಡಿಯೋ ವೈರಲ್ ಆಗಿದೆ.

ಇಸ್ರೇಲ್ ಮಿಲಿಟರಿ ಮಾಹಿತಿ ಪ್ರಕಾರ, ಗಾಜಾದ ಹಮಾಸ್ ಉಗ್ರರ ನಾಯಕ ಯಾಹಿಯೇ ಸಿನ್ವರ್ ಮನೆ ಇದ್ದ ಕಟ್ಟಡಕ್ಕೆ ದಾಳಿ ನಡೆಸಲಾಗಿದೆ. ದಕ್ಷಿಣ ಗಾಜಾದ ಖಾನ್ ಯೂನಿಸ್ ನಗರದ ಕಟ್ಟಡಕ್ಕೆ ದಾಳಿ ನಡೆದಿತ್ತು. ಉಗ್ರ ಸಂಘಟನೆಯ ನಾಯಕರು ತಲೆಮರೆಸಿಕೊಂಡಿದ್ದು, ಎರಡು ದಿನಗಳಲ್ಲಿ ನಾಯಕರನ್ನು ಗುರಿಯಾಗಿಸಿ ಮೂರನೇ ಬಾರಿಗೆ ಇಸ್ರೇಲ್ ದಾಳಿ ನಡೆಸಿದೆ. 

Israeli airstrikes on Gaza City flattened three buildings and killed at least 42 people Sunday, medics said, as Israeli Prime Minister Benjamin Netanyahu signalled the fighting between Israel and Palestinians in Gaza would continue despite international efforts to broker a cease-fire.