ಮುಂಬೈನಲ್ಲಿ ಭಾರೀ ಮಳೆಗೆ ಏರ್ಪೋರ್ಟ್ ಸ್ಥಗಿತ ; ಗುಜರಾತಿನತ್ತ ಚಂಡಮಾರುತ, 1.5 ಲಕ್ಷ ಜನರ ಸ್ಥಳಾಂತರ

17-05-21 02:03 pm       Headline Karnataka News Network   ದೇಶ - ವಿದೇಶ

ಉತ್ತರ ಭಾಗದತ್ತ ಹೊರಳುತ್ತಿರುವ ತೌಕ್ತೆ ಚಂಡಮಾರುತ ಇಂದು ಬೆಳಗ್ಗೆ ಮುಂಬೈ ಹಾದು ಹೋಗಿದೆ. ನಿನ್ನೆ ಸಂಜೆಯಿಂದ ಮುಂಬೈನಲ್ಲಿ ಬಿರುಗಾಳಿಯೊಂದಿಗೆ ಮಳೆಯಾಗುತ್ತಿದ್ದು ಹೆದ್ದಾರಿ ಮತ್ತು ವಿಮಾನ ಸಂಚಾರಕ್ಕೆ ಬ್ರೇಕ್ ಬಿದ್ದಿದೆ.

Photo credits : skymetweather

ಮುಂಬೈ, ಮೇ 17: ಉತ್ತರ ಭಾಗದತ್ತ ಹೊರಳುತ್ತಿರುವ ತೌಕ್ತೆ ಚಂಡಮಾರುತ ಇಂದು ಬೆಳಗ್ಗೆ ಮುಂಬೈ ಹಾದು ಹೋಗಿದೆ. ನಿನ್ನೆ ಸಂಜೆಯಿಂದ ಮುಂಬೈನಲ್ಲಿ ಬಿರುಗಾಳಿಯೊಂದಿಗೆ ಮಳೆಯಾಗುತ್ತಿದ್ದು ಹೆದ್ದಾರಿ ಮತ್ತು ವಿಮಾನ ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ಮಹಾರಾಷ್ಟ್ರ ಕರಾವಳಿಯಲ್ಲಿ ನಿನ್ನೆ ರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದೆ. ಮುಂಬೈನಲ್ಲಿ ಮೇ 17ರ (ಇಂದು) ಸಂಜೆಯ ವರೆಗೆ ವಿಮಾನ ನಿಲ್ದಾಣ ಚಟುವಟಿಕೆ ಸ್ಥಗಿತಗೊಳಿಸಲಾಗಿದೆ. ಬಾಂದ್ರಾ- ವೂರ್ಲಿ ನಡುವಿನ ಸಮುದ್ರ ಮಾರ್ಗವನ್ನೂ ಸ್ಥಗಿತ ಮಾಡಲಾಗಿದೆ.

ಹವಾಮಾನ ಇಲಾಖೆ ಪ್ರಕಾರ, ಸೋಮವಾರ ಬೆಳಗ್ಗೆ ಚಂಡಮಾರುತದ ವೇಗ ಗಂಟೆಗೆ 180 ಕಿಮೀ ಇರಲಿದ್ದು ಭಾರೀ ಗಾಳಿಯೊಂದಿಗೆ ಮಳೆ ಬೀಳಲಿದೆ ಎಂದು ತಿಳಿಸಿತ್ತು. ಇದೇ ವೇಳೆ, ಮೇ 17ರಂದು ಸಂಜೆಯ ವೇಳೆಗೆ ಮಹಾರಾಷ್ಟ್ರ ಕಳೆದು ಗುಜರಾತ್ ಕರಾವಳಿಗೆ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಅದರಂತೆ, ಇಂದು ರಾತ್ರಿ ವೇಳೆಗೆ ಗುಜರಾತಿನ ಪೋರಬಂದರ್ ಮತ್ತು ಭಾವನಗರ್ ಜಿಲ್ಲೆಯಲ್ಲಿ ಭಾರೀ ಗಾಳಿ, ಮಳೆಯೊಂದಿಗೆ ಚಂಡಮಾರುತ ಅಪ್ಪಳಿಸಲಿದೆ. ಗುಜರಾತಿನಲ್ಲಿ ಅಹ್ಮದಾಬಾದ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತೀವ್ರ ಪ್ರಭಾವ ಬೀರಲಿದೆ ಎನ್ನುವ ಮುನ್ಸೂಚನೆ ನೀಡಲಾಗಿದೆ.  

ಚಂಡಮಾರುತ ಎದುರಿಸುವ ಸಲುವಾಗಿ ಗುಜರಾತ್ ಕರಾವಳಿಯಲ್ಲಿ ಅಪಾಯ ಸಾಧ್ಯತೆಯುಳ್ಳ ಪ್ರದೇಶಗಳಿಂದ ಈಗಾಗ್ಲೇ 1.5 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎನ್ ಡಿಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ಪಡೆಯ 54 ತಂಡಗಳನ್ನು ಗುಜರಾತ್ ಕರಾವಳಿಯಲ್ಲಿ ಸನ್ನದ್ಧ ಇರಿಸಲಾಗಿದೆ ಎಂದು ಅಲ್ಲಿನ ಸರಕಾರ ಹೇಳಿಕೊಂಡಿದೆ.

ಮಹಾರಾಷ್ಟ್ರದ ರತ್ನಗಿರಿ, ಸಿಂಧುದುರ್ಗ ಮತ್ತು ರಾಯಗಢ ಜಿಲ್ಲೆಯ ಕರಾವಳಿ ಭಾಗದಲ್ಲಿರುವ 12 ಸಾವಿರ ಜನರನ್ನು ಭಾನುವಾರವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಈ ನಡುವೆ, ದೇವದುರ್ಗ ಜಿಲ್ಲೆಯಲ್ಲಿ ನಾಲ್ವರು ಮೀನುಗಾರರು ಕಾಣೆಯಾಗಿದ್ದಾರೆಂದು ವರದಿಯಾಗಿದೆ. 

Operations at Mumbai's Chhatrapati Shivaji Maharaj International Airport will be closed for three hours on Monday due to Cyclone Tauktae, an airport spokesperson has said.