ಬ್ರೇಕಿಂಗ್ ನ್ಯೂಸ್
18-05-21 04:22 pm Headline Karnataka News Network ದೇಶ - ವಿದೇಶ
ತಿರುವನಂತಪುರಂ, ಮೇ 18: ಕೇರಳದಲ್ಲಿ ಕೋವಿಡ್ ಸಂದರ್ಭವನ್ನು ಯಶಸ್ವಿಯಾಗಿ ನಿರ್ವಹಿಸಿ ದೇಶಾದ್ಯಂತ ಮೆಚ್ಚುಗೆ ಗಳಿಸಿದ್ದ ಆರೋಗ್ಯ ಸಚಿವೆ ಶೈಲಜಾ ಟೀಚರ್, ಪಿಣರಾಯಿ ವಿಜಯನ್ ಸರಕಾರದ ಹೊಸ ಸಂಪುಟದಲ್ಲಿ ಸ್ಥಾನ ಪಡೆದಿಲ್ಲ. ಶೈಲಜಾ ಟೀಚರ್ ಸೇರಿದಂತೆ ಹಲವು ಹಳಬರನ್ನು ಕೈಬಿಡಲಾಗಿದ್ದು ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಎಡರಂಗ ಸರಕಾರ ನಿರ್ಧರಿಸಿದೆ.
21 ಮಂದಿಯ ಮಂತ್ರಿಮಂಡಲದ ಜೊತೆಗೆ ಪಿಣರಾಯಿ ವಿಜಯನ್ ಮೇ 20ರಂದು ಹೊಸ ಸರಕಾರದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಎಲ್ ಡಿಎಫ್ ಒಕ್ಕೂಟದ ಅಂಗಪಕ್ಷಗಳಲ್ಲಿ ಅತಿ ದೊಡ್ಡ ಪಾರ್ಟಿಯಾಗಿ ಮೂಡಿಬಂದಿರುವ ಸಿಪಿಐಎಂ ಪಕ್ಷದಿಂದ 12, ಎರಡನೇ ಅತಿದೊಡ್ಡ ಪಕ್ಷವಾಗಿರುವ ಸಿಪಿಐನಿಂದ 4 ಮಂದಿ ಹಾಗೂ ಕೇರಳ ಕಾಂಗ್ರೆಸ್ (ಎಂ), ಜನತಾದಳ(ಎಸ್) ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ) ಗೆ ಸೇರಿದವರು ತಲಾ ಒಬ್ಬರಂತೆ ಮಂತ್ರಿ ಮಂಡಲ ಸೇರಲಿದ್ದಾರೆ. ಎಲ್ಲರೂ ಹೊಸಬರಾಗಿದ್ದು, ಇದು ಪಕ್ಷದ ನಿರ್ಧಾರ. ಪಿಣರಾಯಿ ವಿಜಯನ್ ಮಾತ್ರ ಹಳೆಮುಖ ಎಂದು ಸಿಪಿಐಎಂ ಪಕ್ಷ ಹೇಳಿಕೊಂಡಿದೆ.
ಕಳೆದ ಬಾರಿ ಆರೋಗ್ಯ ಸಚಿವೆಯಾಗಿದ್ದ ಶೈಲಜಾ ಟೀಚರ್ ಈ ಹಿಂದೆ ಸರಕಾರಿ ಶಿಕ್ಷಕಿಯಾಗಿ ನಿವೃತ್ತಿಯಾದವರು. ಸಾಮಾನ್ಯ ಶಿಕ್ಷಕಿಯೊಬ್ಬರು ಆರೋಗ್ಯ ಸಚಿವರಾಗಿ ಅಧಿಕಾರಕ್ಕೇರಿದ ಬಳಿಕ ತನ್ನ ಕಾರ್ಯವೈಖರಿಯಿಂದಲೇ ಜಗತ್ತಿನ ಗಮನ ಸೆಳೆದಿದ್ದರು. ಕೊರೊನಾ ಸೋಂಕು ಮೊದಲು ಕೇರಳದಲ್ಲಿ ಕಾಣಿಸಿಕೊಂಡಾಗ ಆರಂಭದಲ್ಲೇ ಎಚ್ಚತ್ತುಕೊಂಡು ಸೂಕ್ತವಾಗಿ ನಿಭಾಯಿಸಿದ್ದರು. ಅಲ್ಲದೆ, 2018 ಮತ್ತು 2019ರಲ್ಲಿ ಎರಡು ಬಾರಿ ನಿಫಾ ವೈರಸ್ ಎನ್ನುವ ವಿಚಿತ್ರ ಸೋಂಕಿನ ಲಕ್ಷಣ ಕಾಣಿಸಿಕೊಂಡಾಗಲೂ ಅದು ಹೊರ ಜಗತ್ತಿಗೆ ಹರಡದಂತೆ ಎಲರ್ಟ್ ಆಗಿದ್ದು, ಆರೋಗ್ಯ ಕಾರ್ಯಕರ್ತರನ್ನು ಸಜ್ಜು ಮಾಡಿದ್ದು ಜಗತ್ತಿನ ಗಮನ ಸೆಳೆದಿತ್ತು. ಅದಕ್ಕಾಗಿ ಶೈಲಜಾ ಟೀಚರ್ ಕಾರ್ಯ ವೈಖರಿಯನ್ನು ಪ್ರಧಾನಿ ಮೋದಿ ಸೇರಿದಂತೆ ಹಲವರು ಶ್ಲಾಘನೆ ಮಾಡಿದ್ದರು.
ಟ್ರಾಕಿಂಗ್, ಐಸೋಲೇಶನ್ ಮತ್ತು ಕಂಟೈನ್ ಮೆಂಟ್ ಎಂಬ ಮೂರು ಅಂಶಗಳನ್ನು ಮುಂದಿಟ್ಟು ಕೊರೊನಾ ಪರಿಸ್ಥಿತಿಯನ್ನು ಆರಂಭದಲ್ಲಿ ನಿಭಾಯಿಸಿದ್ದು ಪ್ರಶಂಸೆಗೆ ಕಾರಣವಾಗಿತ್ತು. ಆದರೆ, ಕೊರೊನಾ ಎರಡನೇ ಅಲೆ ಉತ್ತುಂಗದಲ್ಲಿರುವಾಗಲೇ ಆರೋಗ್ಯ ಸಚಿವರನ್ನು ಬದಲಾಯಿಸುವ ನಿರ್ಧಾರಕ್ಕೆ ಬಂದಿರುವುದು ಅಚ್ಚರಿ ಮೂಡಿಸಿದೆ. ಸಿಪಿಐಎಂ ಪಕ್ಷದ ಈ ನಿರ್ಧಾರಕ್ಕೆ ಜಾಲತಾಣದಲ್ಲಿ ಭಾರೀ ಟೀಕೆ ಕೇಳಿಬಂದಿದೆ. ಕೇರಳದಲ್ಲಿ ಈ ಬಾರಿ ಎಡರಂಗ ಕ್ಲೀನ್ ಸ್ವೀಪ್ ಆಗಿ ಗೆಲ್ಲುವುದಕ್ಕೆ ಶೈಲಜಾ ಟೀಚರ್ ಕೆಲಸಗಳೂ ಕಾರಣ. ಮಹಿಳೆಯಾಗಿ ಮಾಡಿರುವ ಕೆಲಸಗಳಿಗಾಗಿ ಜನರು ಮತ ಹಾಕಿದ್ದರು ಎಂದು ಹಲವರು ಟೀಕಿಸಿದ್ದಾರೆ.
Former Health minister KK Shailaja, who earned praise for her handling of the Covid-19 crisis, is not a part of the new state cabinet, which is set to have freshers from CPM and CPI, with CM Pinarayi Vijayan being the only old face.
24-04-25 10:13 pm
HK News Desk
Terror Attack, Bharat Bhushan wife: "ಸಣ್ಣ ಮಗು...
24-04-25 06:39 pm
Kalaburagi Accident: ಕಲಬುರಗಿ; ನಾಯಿಯ ಪ್ರಾಣ ಕಾಪ...
24-04-25 04:56 pm
CM Siddaramaiah, DK Shivakumar, Threat Mail:...
23-04-25 10:49 pm
Cm Siddaramaiah, Pahalgam Attack: ಉಗ್ರರ ದಾಳಿಯ...
23-04-25 08:04 pm
24-04-25 09:00 pm
HK News Desk
ಭಯೋತ್ಪಾದನೆ ಕ್ಯಾನ್ಸರ್ ಇದ್ದಂತೆ, ಇಸ್ಲಾಮಿಗೆ ವಿರುದ...
24-04-25 04:59 pm
Pahalgam terror attack: ಉಗ್ರರು ಕನಸಿನಲ್ಲೂ ಊಹಿಸ...
24-04-25 04:21 pm
Robert Vadra, Pahalgam terror attack: ಸರ್ಕಾರ...
24-04-25 01:58 pm
India Pak News: ಭಾರತ- ಪಾಕ್ ಸಂಬಂಧಕ್ಕೆ ಬ್ರೇಕ್ ;...
24-04-25 12:46 pm
24-04-25 11:08 pm
Mangalore Correspondent
Pahalgam terror attack, udupi Vishwaprasanna...
23-04-25 10:23 pm
ಜಾತ್ಯತೀತರು ಉಗ್ರರಿಗೆ ಧರ್ಮ ಇಲ್ಲ ಎನ್ನುತ್ತಿದ್ದರು,...
23-04-25 09:45 pm
Terror Attack, Mangalore Mp, Brijesh Chowta:...
23-04-25 09:36 pm
Bearys Group, Bearys Turning Point mall, Dera...
23-04-25 09:23 pm
24-04-25 12:58 pm
Mangaluru Correspondent
Ullal Gang Rape, Mangalore, Police: ಗ್ಯಾಂಗ್ ರ...
23-04-25 01:03 pm
Shivamogga man killed in Pahalgam attack: ಕಾಶ...
22-04-25 07:37 pm
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm