ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಸಚಿವ ಕೊರೊನಾಗೆ ಬಲಿ !

19-05-21 12:09 pm       Headline Karnataka News Network   ದೇಶ - ವಿದೇಶ

ಉತ್ತರ ಪ್ರದೇಶ ಕಂದಾಯ ಖಾತೆ ಸಚಿವರಾಗಿದ್ದ ವಿಜಯ್ ಕಶ್ಯಪ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 

Photo credits : Facebook

ಲಕ್ನೋ, ಮೇ 19 : ಉತ್ತರ ಪ್ರದೇಶ ಕಂದಾಯ ಖಾತೆ ಸಚಿವರಾಗಿದ್ದ ವಿಜಯ್ ಕಶ್ಯಪ್ (56) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 

ಮುಜಾಫರ್ ನಗರ ಜಿಲ್ಲೆಯ ಚಾರ್ತವಾಲ್ ಅಸೆಂಬ್ಲಿ ಕ್ಷೇತ್ರದ ಶಾಸಕರಾಗಿದ್ದ ಕಶ್ಯಪ್ ಗುರ್ಗಾಂವ್ ನಲ್ಲಿ ಮೇದಾಂತ ಹಾಸ್ಪಿಟಲ್ ನಲ್ಲಿ ದಾಖಲಾಗಿದ್ದರು. ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕಿಗೆ ಪ್ರಾಣ ಕಳಕೊಂಡ ಮೂರನೇ ಸಚಿವ ಕಶ್ಯಪ್. ಕಳೆದ ಬಾರಿ ಕೊರೊನಾದಿಂದಾಗಿ ಸಚಿವ ಸ್ಥಾನದಲ್ಲಿದ್ದ ಕಮಲ್ ರಾಣಿ ವರುಣ್ ಮತ್ತು ಚೇತನ್ ಚೌಹಾಣ್ ಎಂಬವರು ಸಾವು ಕಂಡಿದ್ದರು. 

ಕಶ್ಯಪ್ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ರಾಷ್ಟ್ರೀಯ ನಾಯಕರು ಕಂಬನಿ ಮಿಡಿದಿದ್ದಾರೆ. ತಮ್ಮ ಇಡೀ ಜೀವನವನ್ನು ಸಾರ್ವಜನಿಕ ಸೇವೆಗೆ ಮುಡಿಪಾಗಿಟ್ಟಿದ್ದ ಕಶ್ಯಪ್ ತಳಮಟ್ಟದಲ್ಲಿ ಉತ್ತಮ ಸಂಪರ್ಕ ಹೊಂದಿದ್ದ ನಾಯಕರಾಗಿದ್ದರು ಎಂದು ಮೋದಿ ಸ್ಮರಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ಬಾರಿ ನಾಲ್ಕು ಶಾಸಕರು ಕೊರೊನಾ ಸೋಂಕಿಗೆ ಪ್ರಾಣ ಕಳಕೊಂಡಿದ್ದಾರೆ. 

ಎರಡು ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಆರೋಗ್ಯ ಸೇವೆಯ ವೈಫಲ್ಯದ ಬಗ್ಗೆ ಅಲಹಾಬಾದ್ ಹೈಕೋರ್ಟ್ ಛಾಟಿ ಬೀಸಿತ್ತು.

Uttar Pradesh Minister of State for Revenue and Flood Control Vijay Kashyap died from coronavirus at a Gurgaon hospital on Tuesday. Kashyap (56), who was an MLA from Muzaffarnagar’s Charthawal Assembly seat, died at Gurgaon’s Medanta Hospital.