50 ದಿನಗಳ ಬಳಿಕ ದೇಶದಲ್ಲಿ ಕಡಿಮೆ ಕೋವಿಡ್​​ ಪತ್ತೆ​ ; ಗುಣಮುಖರ ಪ್ರಮಾಣ ಶೇ.91ಕ್ಕೇರಿಕೆ

31-05-21 10:27 am       Headline Karnataka News Network   ದೇಶ - ವಿದೇಶ

ಮಾರಣಾಂತಿಕ ವೈರಸ್​ನಿಂದ ಈವರೆಗೆ ಒಟ್ಟು 2,56,92,342 ಮಂದಿ ಚೇತರಿಸಿಕೊಂಡಿದ್ದು, ದೇಶದ ಗುಣಮುಖರ ಪ್ರಮಾಣ ಶೇ. 91.60ಕ್ಕೆ ಏರಿಕೆಯಾಗಿದೆ.

ನವದೆಹಲಿ,ಮೇ 31: ದೈನಂದಿನ ಕೋವಿಡ್​​ ಕೇಸ್​ಗಳ ಸಂಖ್ಯೆ 4 ಲಕ್ಷದವರೆಗೂ ಏರಿಕೆಯಾಗಿದ್ದ ದೇಶದಲ್ಲೀಗ ಕೆಲದಿನಗಳಿಂದ ಸೋಂಕಿನ ಪ್ರಮಾಣ ತಗ್ಗುತ್ತಿದ್ದು, 50 ದಿನಗಳ ಬಳಿಕ ಕಡಿಮೆ ಪ್ರಕರಣಗಳು ವರದಿಯಾಗಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 1,52,734 ಸೋಂಕಿತರು ಪತ್ತೆಯಾಗಿದ್ದರೆ, 3,128 ಮಂದಿ ಅಸು ನೀಗಿದ್ದಾರೆ. ಈ ಮೂಲಕ ಭಾರತದ ಸೋಂಕಿತರ ಸಂಖ್ಯೆ 2,80,47,534 ಹಾಗೂ ಮೃತರ ಸಂಖ್ಯೆ 3,29,100ಕ್ಕೆ ಹೆಚ್ಚಳವಾಗಿದೆ.

ಚೇತರಿಕೆ ಪ್ರಮಾಣ ಶೇ.91.60ಕ್ಕೇರಿಕೆ

ಹೊಸ ಕೋವಿಡ್​ ಸೋಂಕಿತರಿಗಿಂತಲೂ ಗುಣಮುಖರ ಸಂಖ್ಯೆಯೇ ಹೆಚ್ಚುತ್ತಿದ್ದು, 2,38,022 ಮಂದಿ ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಹೊರಬಂದಿದ್ದಾರೆ. ಮಾರಣಾಂತಿಕ ವೈರಸ್​ನಿಂದ ಈವರೆಗೆ ಒಟ್ಟು 2,56,92,342 ಮಂದಿ ಚೇತರಿಸಿಕೊಂಡಿದ್ದು, ದೇಶದ ಗುಣಮುಖರ ಪ್ರಮಾಣ ಶೇ. 91.60ಕ್ಕೆ ಏರಿಕೆಯಾಗಿದೆ. ಉಳಿದಂತೆ 20,26,092 ಕೇಸ್​ಗಳು ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

21.31 ಕೋಟಿ ಜನರಿಗೆ ವ್ಯಾಕ್ಸಿನ್​

ಜನವರಿ 16ರಿಂದ ಇಲ್ಲಿಯವರೆಗೆ ದೇಶಾದ್ಯಂತ ಒಟ್ಟು 21,31,54,129 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಅನೇಕ ಪ್ರದೇಶಗಳಲ್ಲಿ ಲಸಿಕೆ​ ಕೊರತೆಯಿಂದ ಸ್ಥಗಿತಗೊಂಡಿದ್ದ ವ್ಯಾಕ್ಸಿನೇಷನ್​ ಈಗ ಮತ್ತೆ ಪುನಾರಂಭವಾಗಿದೆ.

14 states and UTs have reached a Covid recovery rate of 90% and above- that is for every 100 confirmed cases 90 have recovered.