ಬರ್ತಿದೆ ಹೊಸ ಕ್ರಿಪ್ಟೋ ಕರೆನ್ಸಿ ನೋವಿ ಕಾಯಿನ್ ! ಹತ್ತೇ ದಿನದಲ್ಲಿ ಮೂರು ಸಾವಿರ ಪಟ್ಟು ಏರಿಕೆ ದಾಖಲು !!

31-05-21 03:01 pm       Jitesh, Finance News   ದೇಶ - ವಿದೇಶ

ನೋವಿ ಕಾಯಿನ್ ಎನ್ನುವ ಹೆಸರಲ್ಲಿ ಜಾಗತಿಕ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಗೆ ಅಧಿಕೃತವಾಗಿ ಕಾಲಿಟ್ಟಿದೆ. ಭಾರತ ಸೇರಿದಂತೆ ಜಗತ್ತಿನ 80 ರಾಷ್ಟ್ರಗಳಲ್ಲಿ ಕಂಪನಿ ಸದ್ಯಕ್ಕೆ ಪ್ರಮೋಟರ್ ಗಳನ್ನು ಹೊಂದಿದ್ದು, 2021ರ ಡಿಸೆಂಬರ್ ತಿಂಗಳ ವೇಳೆಗೆ ಕಂಪನಿ ವಿಶ್ವಾದ್ಯಂತ ಮಾರುಕಟ್ಟೆ ಸ್ಥಾಪಿಸುವ ಗುರಿಯನ್ನು ಇಟ್ಟುಕೊಂಡಿದೆ.

ಸುಮಾರು 12 ವರ್ಷಗಳ ಹಿಂದೆ ಬಿಟ್ ಕಾಯಿನ್ ಅಂದ್ರೆ ಯಾರಿಗೂ ಗೊತ್ತಿರಲಿಲ್ಲ. ಐದಾರು ವರ್ಷಗಳ ಹಿಂದೆ ಬಿಟ್ ಕಾಯಿನ್ ಭಾರತಕ್ಕೆ ಕಾಲಿಟ್ಟಾಗ, ಅದೇನೋ ದಗಲ್ಬಾಜು ಮಾರ್ಕೆಟ್ ಅಂತ ಜನ ಗೊಣಗುತ್ತಿದ್ದರು. ಆದರೆ, ಈಗ ಬಿಟ್ ಕಾಯಿನ್ ಜಗತ್ತಿನಲ್ಲೇ ಅತಿದೊಡ್ಡ ಪರ್ಯಾಯ ಕರೆನ್ಸಿಯಾಗಿ ಮಾರ್ಪಟ್ಟಿದೆ. ಬಿಟ್ ಕಾಯಿನ್ ನಿರ್ವಹಣೆಯ ಹಿಂದೆ ಯಾರಿದ್ದಾರೆ, ಅದನ್ನು ಯಾವ ದೇಶ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ ಅನ್ನೋ ಕನಿಷ್ಠ ಮಾಹಿತಿ ಇಲ್ಲದಿದ್ದರೂ ಜನರು ಅದನ್ನು ಖರೀದಿಸುತ್ತಿದ್ದಾರೆ. ಭಾರತೀಯರು ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ಜನರು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡುತ್ತಿದ್ದಾರೆ. ಸಾಕಷ್ಟು ಜನ ಲಾಭವನ್ನೂ ಮಾಡಿಕೊಂಡಿದ್ದಾರೆ.

ಇಂಥದ್ದೇ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿ ಇದೇ ರೀತಿಯ ಪರ್ಯಾಯ ಕ್ರಿಪ್ಟೋ ವ್ಯಾಲೆಟ್ ಅಸ್ತಿತ್ವಕ್ಕೆ ಬಂದಿದೆ. ನೋವಿ ಕಾಯಿನ್ ಎನ್ನುವ ಹೆಸರಲ್ಲಿ ಜಾಗತಿಕ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಗೆ ಅಧಿಕೃತವಾಗಿ ಕಾಲಿಟ್ಟಿದೆ. ಆಸ್ಟ್ರೇಲಿಯಾದ ಬ್ರೌನ್ ವಿಲಿಯಮ್ಸ್ ನೋವಿ ಕಾಯಿನ್ ಫೌಂಡರ್ ಆಗಿದ್ದು, ಇದೇ 2021ರ ಮೇ 20ರಂದು ವೇವ್ಸ್ ಎಕ್ಸ್ ಚೇಂಜ್ ನಲ್ಲಿ ಅಧಿಕೃತವಾಗಿ ಲಿಸ್ಟ್ ಮಾಡಿಕೊಂಡಿದ್ದಾರೆ. ಕ್ರಿಪ್ಟೋ ಕರೆನ್ಸಿ ಎನ್ನುವುದು ಸುಧಾರಿತ ತಂತ್ರಜ್ಞಾನವುಳ್ಳ ಡಿಜಿಟಲ್ ವ್ಯಾಲೆಟ್ ಆಗಿದ್ದು, ಸೂಪರ್ ಕಾಪ್ ಇಂಜಿನಿಯರುಗಳು ಸೇರಿ ಇದನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.

ನೋವಿ ಕಾಯಿನ್ ಪ್ಲಸ್ ಪಾಯಿಂಟ್ ಏನು ? 

ಬಿಟ್ ಕಾಯಿನ್ ಗೆ ಹೋಲಿಸಿದರೆ, ಇದು ತುಂಬ ವಿಭಿನ್ನ ಮತ್ತು ಅತ್ಯಂತ ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ. ಅಲ್ಲದೆ, ನಿಶ್ಚಿತ ಡಿಜಿಟಲ್ ವ್ಯಾಲೆಟ್ ಇರಿಸಿಕೊಂಡು ಕ್ರಿಪ್ಟೋ ಜಗತ್ತಿಗೆ ಕಾಲಿಟ್ಟಿರುವುದು ಇದರ ಪ್ಲಸ್ ಪಾಯಿಂಟ್. ಒಟ್ಟು 300 ಕೋಟಿ ಡಿಜಿಟಲ್ ಕಾಯಿನ್ ಇರುವುದಾಗಿ ಘೋಷಿಸಿಕೊಂಡಿದ್ದು, ಇದನ್ನು ಖರೀದಿ ಮಾಡಲು ವಿಶ್ವಾದ್ಯಂತದ ಹೂಡಿಕೆದಾರರಿಗೆ ಕಂಪನಿ ಆಫರ್ ನೀಡಿದೆ. 0.01 ಪೈಸೆಯಿಂದ ಆರಂಭಗೊಂಡ ಡಿಜಿಟಲ್ ಕಾಯಿನ್ ಮೌಲ್ಯವು ಹತ್ತೇ ದಿನದಲ್ಲಿ ಮೂರು ಸಾವಿರ ಪಟ್ಟು ಏರಿಕೆಯಾಗಿದ್ದು, 0.30 ಪೈಸೆಗೆ ತಲುಪಿದೆ. ಆರಂಭಿಕ ಆಫರ್ ಬಗ್ಗೆ ಮಾಹಿತಿ ಪಡೆದ ಜಗತ್ತಿನ 80 ದೇಶಗಳಲ್ಲಿ ಜನರು ಖರೀದಿಯಲ್ಲಿ ತೊಡಗಿದ್ದಾರೆ. 

ನೋವಿ ಕಾಯಿನ್ ಮತ್ತೊಂದು ಪ್ಲಸ್ ಪಾಯಿಂಟ್ ಏನಂದ್ರೆ, ಇದನ್ನು ಜಗತ್ತಿನ ಯಾವುದೇ ದೇಶದ ಸ್ಥಳೀಯ ಕರೆನ್ಸಿಯೊಂದಿಗೆ ನೇರವಾಗಿ ವ್ಯವಹರಿಸಬಹುದು. ಭಾರತದ ರೂಪಾಯಿ, ಗಲ್ಫ್ ರಾಷ್ಟ್ರಗಳ ದಿನಾರ್, ರಿಯಾಲ್, ಅಮೆರಿಕದ ಡಾಲರ್, ಯೂರೋಪ್ ರಾಷ್ಟ್ರಗಳ ಪೌಂಡ್ ಹೀಗೆ ನೇರವಾಗಿ ಖರೀದಿ ವ್ಯವಹಾರ ನಡೆಸಲು ಸಾಧ್ಯವಿದೆ. ಬಿಟ್ ಕಾಯಿನ್ ಆಗಲೀ, ಇನ್ನಾವುದೇ ಡಿಜಿಟಲ್ ಕರೆನ್ಸಿಯನ್ನು ಹೀಗೆ ನೇರವಾಗಿ ಖರೀದಿಸಲು ಸಾಧ್ಯವಿಲ್ಲ. ಅವೆಲ್ಲವನ್ನೂ ಅಮೆರಿಕದ ಡಾಲರನ್ನು ಖರೀದಿಸಿಯೇ ವ್ಯವಹಾರ ಮಾಡಬೇಕಾಗುತ್ತದೆ.

ಬಿಟ್ ಕಾಯಿನಲ್ಲಿ ಭಾರತೀಯರು ಹೂಡಿಕೆ ಮಾಡಬೇಕಿದ್ದರೂ, ನಮ್ಮ ರೂಪಾಯಿಯನ್ನು ಡಾಲರಿಗೆ ಪರಿವರ್ತಿಸಿ ಅದರಲ್ಲೇ ವ್ಯವಹಾರ ಮಾಡಬೇಕಾಗುತ್ತದೆ. ಹಾಗಾಗಿ ಅವನ್ನು ಸ್ವತಃ ಖರೀದಿ ಚಟುವಟಿಕೆ ನಡೆಸಲು ಸಾಮಾನ್ಯನಿಂದ ಸಾಧ್ಯವಾಗಲ್ಲ. ಆದರೆ, ನೋವಿ ಕಾಯಿನ್ ವಿಭಿನ್ನ ರೀತಿಯ ವೈಶಿಷ್ಟ್ಯಗಳನ್ನು ಹೊಂದಿದ್ದು, ಭವಿಷ್ಯದ ಅತಿದೊಡ್ಡ ಡಿಜಿಟಲ್ ಕರೆನ್ಸಿ ಮಾರುಕಟ್ಟೆಯಾಗಿ ಬದಲಾಗುವ ಸಾಧ್ಯತೆಯನ್ನು ತಜ್ಞರು ಹೇಳುತ್ತಿದ್ದಾರೆ. ಯಾಕಂದ್ರೆ, ಇದರಲ್ಲಿರುವುದು ಕೇವಲ 300 ಕೋಟಿ ನೋವಿ ಕಾಯಿನ್ ಮಾತ್ರ. ಒಬ್ಬ ವ್ಯಕ್ತಿ ಎಷ್ಟು ಕಾಯಿನ್ ಗಳನ್ನು ಬೇಕಾದ್ರೂ ಖರೀದಿಸಿ ತನ್ನದೇ ವ್ಯಾಲೆಟ್ ಕ್ರಿಯೇಟ್ ಮಾಡಲು ಅವಕಾಶ ಇರುವುದರಿಂದ ಸೀಮಿತ ಸಂಖ್ಯೆಯ ಕಾಯಿನ್ ಮುಗಿದು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ, ಇದರಲ್ಲಿ ಹೂಡಿಕೆ ಮತ್ತು ಖರೀದಿ ಹೆಚ್ಚಿದಂತೆ ಇವುಗಳ ದರವೂ ಅಷ್ಟೇ ಪ್ರಮಾಣದಲ್ಲಿ ಏರುವುದರಿಂದ ಲಾಭದ ಗಳಿಕೆಯೂ ಗರಿಷ್ಠವಾಗಿರುತ್ತದೆ.

ಭಾರತ ಸೇರಿದಂತೆ ಜಗತ್ತಿನ 80 ರಾಷ್ಟ್ರಗಳಲ್ಲಿ ಕಂಪನಿ ಸದ್ಯಕ್ಕೆ ಪ್ರಮೋಟರ್ ಗಳನ್ನು ಹೊಂದಿದ್ದು, 2021ರ ಡಿಸೆಂಬರ್ ತಿಂಗಳ ವೇಳೆಗೆ ಕಂಪನಿ ವಿಶ್ವಾದ್ಯಂತ ಮಾರುಕಟ್ಟೆ ಸ್ಥಾಪಿಸುವ ಗುರಿಯನ್ನು ಇಟ್ಟುಕೊಂಡಿದೆ. ಕಂಪನಿ ಇದೇ ಮೇ 31ರ ಒಳಗೆ ತನ್ನದೇ ವೆಬ್ ಪೇಜ್ www.novicoinwallet.info ಅನ್ನು ಅಧಿಕೃತವಾಗಿ ಲಾಂಚ್ ಮಾಡಲಿದೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವೆಬ್ ಲಾಂಚಿಂಗ್ ಆಗಲಿದೆ. ಭಾರತೀಯ ಮೂಲದವರು ಕೂಡ ಇದರ ಹಿಂದೆ ಥಿಂಕ್ ಟ್ಯಾಂಕ್ ಆಗಿ ಕೆಲಸ ಮಾಡುತ್ತಿದ್ದಾರೆ.

ಇನ್ನು ನೋವಿ ಕಾಯಿನ್ ಬಿಟ್ ಕಾಯಿನ್ ರೀತಿ ನಿಗೂಢವಾಗಿ ಕಾರ್ಯಾಚರಣೆ ಮಾಡುತ್ತಿಲ್ಲ. ಷೇರು ಮಾರುಕಟ್ಟೆಯ ರೀತಿ ವೇವ್ಸ್ ಎಕ್ಸ್ ಚೇಂಜ್ ನಲ್ಲಿ ಅಧಿಕೃತವಾಗಿ ತನ್ನ ಇರುವಿಕೆ ಹೊಂದಿದ್ದು, ಸಾಮಾನ್ಯ ಜನರು ಕೂಡ www.waves.exchange ಇದರ ಮಾರುಕಟ್ಟೆ ಗತಿಯನ್ನು ಪರಿಶೀಲನೆ ಮಾಡಬಹುದು. 

ದುಬೈನಲ್ಲೂ ಬಂದಿತ್ತು ಕ್ರಿಪ್ಟೋ ಕರೆನ್ಸಿ 

ಇತ್ತೀಚೆಗೆ ದುಬೈನಲ್ಲಿ ಅರಬ್ ಕಂಪನಿಯೊಂದು ದುಬೈ ಕಾಯಿನ್ ಹೆಸರಲ್ಲಿ ಕ್ರಿಪ್ಟೋ ಕರೆನ್ಸಿಯನ್ನು ಲಾಂಚ್ ಮಾಡಿತ್ತು. ಕೇವಲ 24 ಗಂಟೆಯಲ್ಲಿ ಅದರ ಮೌಲ್ಯ ಒಂದು ಸಾವಿರ ಪಟ್ಟು ಏರಿಕೆಯಾಗಿದ್ದು, ಜನರಲ್ಲಿ ಆಕರ್ಷಣೆ ಮೂಡಿಸಿದೆ. ದುಬೈ ಸರಕಾರದ ಅಧಿಕೃತ ಕ್ರಿಪ್ಟೋ ಕರೆನ್ಸಿ ಎಂದು ಕಂಪನಿ ಘೋಷಣೆ ಮಾಡಿಕೊಂಡಿದ್ದರೂ, ಆಬಳಿಕ ಅಲ್ಲಿನ ಸರಕಾರ ಅಧಿಕೃತ ಎಂದು ಹೇಳಿಕೊಂಡಿದ್ದಕ್ಕೆ ಆಕ್ಷೇಪ ತೋರಿಸಿತ್ತು. ಸರಕಾರಕ್ಕೂ ಕ್ರಿಪ್ಟೋ ಕರೆನ್ಸಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳುವ ಮೂಲಕ ಕ್ರಿಪ್ಟೋ ಕರೆನ್ಸಿಯ ಅಧಿಕೃತ ಮುದ್ರೆಗೆ ನಿರಾಕರಣೆ ಸೂಚಿಸಿತ್ತು. ಆದರೂ 0.017 ಡಾಲರ್ ಮೌಲ್ಯ ಹೊಂದಿದ್ದ ದುಬೈ ಕರೆನ್ಸಿ ಮೇ 27ರಂದು ಒಂದೇ ದಿನ 1.13 ಡಾಲರ್ ಮೌಲ್ಯಕ್ಕೆ ನೆಗೆದಿತ್ತು. ಯುಎಇ ಮೂಲದ ಅರೇಬಿಯನ್ ಚೈನ್ ಟೆಕ್ನಾಲಜಿ ಹೆಸರಿನ ಕಂಪನಿ ಇದನ್ನು ಅಸ್ತಿತ್ವಕ್ಕೆ ತಂದಿದ್ದರೂ, ಅದರ ಕಾರ್ಯ ನಿರ್ವಹಣೆ ಪಾರದರ್ಶಕ ಆಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಇವೆಲ್ಲದರ ಮಧ್ಯೆ ನೋವಿ ಕಾಯಿನ್ ಮೌಲ್ಯ ಹತ್ತು ದಿನಗಳಲ್ಲಿ ಮೂರು ಸಾವಿರ ಪಟ್ಟು ಏರಿಕೆಯನ್ನು ದಾಖಲಿಸಿದ್ದು, ಜಗತ್ತಿನ ಮುಂಚೂಣಿ ಕ್ರಿಪ್ಟೋ ಕರೆನ್ಸಿ ಆಗುವತ್ತ ದಾಪುಗಾಲು ಇಟ್ಟಿದೆ. ಮುಂದಿನ ಡಿಸೆಂಬರ್ ತಿಂಗಳ ವರೆಗೂ ಗ್ರಾಹಕರಿಗೆ ಕಂಪನಿ ಆರಂಭಿಕ ಆಫರ್ ನೀಡಿದ್ದು, ಜನರ ಗಮನ ಸೆಳೆಯುತ್ತಿದೆ. ಈಗಾಗ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವು ವಹಿವಾಟು ಕ್ರಿಪ್ಟೋ ಕರೆನ್ಸಿಯ ಮೂಲಕ ನಡೆಯುತ್ತಿದ್ದು, ಭವಿಷ್ಯದ ಡಿಜಿಟಲ್ ಕರೆನ್ಸಿಯಾಗುವ ಸಾಧ್ಯತೆ ಗೋಚರಿಸಿದೆ.

Download the App Now: WAVES EXCHANGE


Novi Coin Wallet to soon release in India. Novi Coin is a Waves Exchange based token which listed in the waves.exchange on 20/05/2021. The basic purpose of this token is to develop an advanced application to alleviate the problems that crypto investors face in investing in the market. NCW ( Novi Coin Wallet ) that helps investors to buy crypto currency using local funds in any country around the world, is to be launched by December 2021. Also, Novi Coin Wallet help it users to develop and trade their own token through using wallet .