ಬ್ರೇಕಿಂಗ್ ನ್ಯೂಸ್
01-06-21 11:25 am Headline Karnataka News Network ದೇಶ - ವಿದೇಶ
ನವದೆಹಲಿ, ಜೂನ್ 1 : ಕೊರೋನಾ ವೈರಸ್ ನಿಯಂತ್ರಣ ವಿಚಾರದಲ್ಲಿ ಅಲೋಪತಿ ವೈದ್ಯ ವಿಜ್ಞಾನದ ವಿರುದ್ಧವೇ ಸಿಡಿದಿರುವ ಯೋಗಗುರು ಬಾಬಾ ರಾಮದೇವ್, ಅಲೋಪತಿ ವೈದ್ಯರ ಆಕ್ರೋಶದ ಮಧ್ಯೆಯೇ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಒಂದು ವರ್ಷದಲ್ಲಿ 1,000 ಅಲೋಪತಿ ವೈದ್ಯರನ್ನು ಆಯುರ್ವೇದಿಕ್ ವೈದ್ಯರನ್ನಾಗಿ ಪರಿವರ್ತಿಸುತ್ತೇನೆ ಎಂದು ಹೇಳಿಕೆ ನೀಡಿ ಅಚ್ಚರಿ ಸೃಷ್ಟಿಸಿದ್ದಾರೆ.
ಎಂಬಿಬಿಎಸ್ ಮತ್ತು ಎಂಡಿ ಪದವಿಗಳನ್ನು ಪಡೆದಿರುವ ಹಲವಾರು ಅಲೋಪತಿ ವೈದ್ಯರು, ಆರೋಗ್ಯ ಸಿಬ್ಬಂದಿಗಳು ಯೋಗ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ಈ ವರ್ಷದೊಳಗೆ ಸಾವಿರಕ್ಕೂ ಹೆಚ್ಚು ಅಲೋಪಥಿ ವೈದ್ಯರನ್ನು ಆಯುರ್ವೇದಕ್ಕೆ ಕರೆತರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಲೋಪತಿ ಔಷಧಿಗಳಿಂದ ಸ್ವತಃ ವೈದ್ಯರೇ ಅಡ್ಡ ಪರಿಣಾಮ ಎದುರಿಸಿದ್ದಾರೆ. ಹೀಗಾಗಿ ಯೋಗ, ಆಯುರ್ವೇದದತ್ತ ಆಕರ್ಷಿತರಾಗಿ ಗುಣಮುಖರಾಗಿದ್ದಾರೆ. ಜೀವನದಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ಈಗಾಗಲೇ ಹಲವು ಅಲೋಪಥಿ ವೈದ್ಯರು ತಮ್ಮ ಯೋಗ, ಆಯುರ್ವೇದತ್ತ ಹೊರಳುತ್ತಿದ್ದಾರೆ ಎಂದು ರಾಮದೇವ್ ಹೇಳಿದ್ದಾರೆ.
ಅಲ್ಲದೆ, ಮುಂದಿನ ಒಂದು ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಅಲೋಪತಿ ವೈದ್ಯರನ್ನು ಪ್ರಕೃತಿ ಚಿಕಿತ್ಸಾ ವೈದ್ಯರನ್ನಾಗಿ ಪರಿವರ್ತಿಸುವ ಗುರಿ ಇಟ್ಟುಕೊಂಡಿದ್ದೇನೆ ಎಂದು ರಾಮ್‌ದೇವ್ ಹೇಳಿದರು.
ಆಲೋಪಥಿ ಮೂರ್ಖರ ವಿಜ್ಞಾನ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಾಬಾ ರಾಮ್‌ದೇವ್ ವಿರುದ್ಧ ವೈದ್ಯರ ಫೆಡರೇಶನ್, ಭಾರತೀಯ ವೈದ್ಯಕೀಯ ಸಂಘ ಸೇರಿದಂತೆ ಅಲೋಪತಿ ವೈದ್ಯರು ಜೂನ್ 1 ರಂದು ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದಿರುವಾಗಲೇ ರಾಮದೇವ್ ಮತ್ತೊಂದು ಸವಾಲು ಹಾಕಿದ್ದಾರೆ.
As the controversy over his comments against allopathic medicines and doctors is drawing severe ire, yoga guru Baba Ramdev said during a yoga session that he has a target of converting 1,000 allopathic doctors to Ayurveda in a year's time.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm