ಬ್ರೇಕಿಂಗ್ ನ್ಯೂಸ್
01-06-21 04:21 pm Headline Karnataka News Network ದೇಶ - ವಿದೇಶ
ನವದೆಹಲಿ, ಜೂನ್ 1: ದೇಶದ ಹಲವು ರಾಜ್ಯಗಳಲ್ಲಿ ಪೂರ್ತಿಯಾಗಿ ಲಾಕ್ಡೌನ್ ಇದ್ದರೂ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಾತ್ರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ ದರ ನೂರರ ಗಡಿದಾಟಿದ್ದು ಇತಿಹಾಸದಲ್ಲೇ ಅತ್ಯಂತ ಗರಿಷ್ಠ ದರಕ್ಕೆ ತಲುಪಿದೆ.
ಪೆಟ್ರೋಲ್ ಮತ್ತು ಡೀಸೆಲ್ ಗೆ ಇಂದು ಕ್ರಮವಾಗಿ 26 ಮತ್ತು 23 ಪೈಸೆ ಏರಿಕೆಯಾಗಿದ್ದು, ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ರೂ. 94.49 ಹಾಗೂ ಡೀಸೆಲ್ ಬೆಲೆ ರೂ. 85.38 ಆಗಿದೆ. ಸ್ವಲ್ಪ ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದ ತೈಲ ಬೆಲೆಯನ್ನು ಎರಡು ದಿನಗಳಲ್ಲಿ ದಿನವೂ ಏರಿಸಲಾಗಿದೆ. ಸೋಮವಾರ 29 ಪೈಸೆ ಏರಿಕೆಯಾಗಿದ್ದರೆ, ಇಂದು ಮತ್ತೆ ದರ ಏರಿದ್ದು ಸಾರ್ವಕಾಲಿಕ ದಾಖಲೆಯನ್ನು ದಾಟಿ ಮುನ್ನುಗ್ಗಿದೆ.


ಮುಂಬೈ ಮಹಾನಗರದಲ್ಲಿ ಇಂದು ಪೆಟ್ರೋಲ್ ದರ 100.72 ರೂ. ಆಗಿದ್ದರೆ, ಡೀಸೆಲ್ ಬೆಲೆ ಲೀಟರಿಗೆ 92.39 ರೂ.ಗೆ ಏರಿಕೆಯಾಗಿದೆ. ಡೀಸೆಲ್ ದರವೂ ದೇಶದಲ್ಲೇ ಅತಿ ಹೆಚ್ಚು ದರ ಮುಂಬೈನಲ್ಲಿ ದಾಖಲಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಅಬಕಾರಿ ಸುಂಕ ವ್ಯತ್ಯಾಸ ಇರುವುದರಿಂದ ತೈಲ ಬೆಲೆಯೂ ಆಯಾ ಭಾಗದ ತೆರಿಗೆಯನ್ನು ಹೊಂದಿಕೊಂಡು ಬೇರೆ ಬೇರೆಯಾಗಿದೆ. ಸ್ಥಳೀಯ ಸುಂಕ ಹೆಚ್ಚಿರುವ ಕಾರಣದಿಂದ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ವಿವಿಧ ನಗರಗಳಲ್ಲಿ ವಾರದ ಹಿಂದೆಯೇ ಪೆಟ್ರೋಲ್ ದರ ನೂರು ರೂ. ದಾಟಿತ್ತು.


ಇದೀಗ ಸೋಮವಾರ ಮತ್ತು ಮಂಗಳವಾರ ಎರಡು ದಿನವೂ ತೈಲ ಬೆಲೆ 50 ಪೈಸೆ ಏರಿಕೆಯಾಗಿರುವುದರಿಂದ ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ತಲುಪಿದೆ. ಮೇ 1ರಿಂದ 15 ದಿನಗಳ ಕಾಲ ತೈಲ ಬೆಲೆಯಲ್ಲಿ ಸ್ಥಿರತೆ ಇದ್ದು, ಯಾವುದೇ ಬದಲಾವಣೆ ಆಗಿರಲಿಲ್ಲ. ಆನಂತರ ಸರದಿಯಂತೆ ಏರಿಸಿಕೊಂಡು ಬರಲಾಗಿದ್ದು, ದೆಹಲಿಯಲ್ಲಿ ಪೆಟ್ರೋಲಿಗೆ 4.09 ರೂ. ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 4.66 ರೂ. ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ಯಾರಲಿಗೆ 70 ಡಾಲರ್ ಗೆ ತಲುಪಿದ್ದು ಇದರಿಂದಾಗಿ ತೈಲ ಕಂಪನಿಗಳು ಹೊರಗಿನ ಪೂರೈಕೆಗೆ ತಕ್ಕಂತೆ ದರವನ್ನೂ ಏರಿಕೆ ಮಾಡುತ್ತಿದ್ದು ಇದರ ನೇರ ಹೊರೆ ಜನರ ಮೇಲೆ ಬೀಳುತ್ತಿದೆ.
Petrol and diesel rates have been hiked for a second consecutive day. The fresh hike comes after consolidation in global crude oil rates, which also indicates that state-run oil companies may continue to hike fuel prices for a longer period.
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm