ಮಾಸಿಕ ಜಿಎಸ್‌ಟಿ ರಿಟರ್ನ್‌ ಫೈಲಿಂಗ್: ಜೂನ್ 26ರವರೆಗೆ ಗಡುವು ವಿಸ್ತರಣೆ

01-06-21 04:51 pm       Sagar Ap: goodreturns   ದೇಶ - ವಿದೇಶ

ಜಿಎಸ್‌ಟಿ ಮಾರಾಟಕ್ಕೆ ಸಂಬಂಧಿಸಿದ ವಿವರಗಳಿರುವ ಜಿಎಸ್‌ಟಿಆರ್‌-1 ಸಲ್ಲಿಸುವ ಗಡುವನ್ನು ಜೂನ್ 26 ರವರೆಗೆ 15 ದಿನಗಳ ಕಾಲ ವಿಸ್ತರಿಸಲಾಗಿದೆ

ಮೇ ತಿಂಗಳ ಮಾಸಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಾರಾಟಕ್ಕೆ ಸಂಬಂಧಿಸಿದ ವಿವರಗಳಿರುವ ಜಿಎಸ್‌ಟಿಆರ್‌-1 ಸಲ್ಲಿಸುವ ಗಡುವನ್ನು ಜೂನ್ 26 ರವರೆಗೆ 15 ದಿನಗಳ ಕಾಲ ವಿಸ್ತರಿಸಲಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (CBIC) ಸೋಮವಾರ ತಿಳಿಸಿದೆ.

ವಹಿವಾಟು ನಡೆಸುವವರು ನಿರ್ದಿಷ್ಟ ತಿಂಗಳಿನಲ್ಲಿ ಪೂರೈಕೆ ಮಾಡಿರುವುದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಮುಂದಿನ ತಿಂಗಳ 11ನೇ ತಾರೀಖಿನ ಒಳಗೆ ಜಿಎಸ್‌ಟಿಆರ್‌-1ರಲ್ಲಿ ತುಂಬಬೇಕು. ಇದಕ್ಕೆ 15 ದಿನಗಳ ಹೆಚ್ಚುವರಿ ಕಾಲಾವಕಾಶ ದೊರೆತಂತಾಗದೆ. ಪಾವತಿಗೆ ಸಂಬಂಧಿಸಿದ ಜಿಎಸ್‌ಟಿಆರ್‌-3ಬಿಯನ್ನು ಮುಂದಿನ ತಿಂಗಳು 20ರಿಂದ 24ನೇ ದಿನದೊಳಗೆ ಸಲ್ಲಿಸಬೇಕು.

ಇತ್ತೀಚೆಗಷ್ಟೇ ನಡೆದ 43ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಸದ್ಯ ಎದುರಾಗಿರುವ ಕೋವಿಡ್-19 ಎರಡನೇ ಅಲೆಯಿಂದಾಗಿರುವ ಸಮಸ್ಯೆಗಳನ್ನು ಪರಿಗಣಿಸಿ, ರಿಟರ್ನ್ಸ್ ಸಲ್ಲಿಕೆ ಗಡುವನ್ನು ವಿಸ್ತರಿಸಲು ನಿರ್ಧರಿಸಲಾಗಿತ್ತು. ಇನ್ನು 2020-21ರ ಹಣಕಾಸು ವರ್ಷಕ್ಕೆ ವಾರ್ಷಿಕ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನು ಜುಲೈ 31 ರವರೆಗೆ ಮೂರು ತಿಂಗಳವರೆಗೆ ವಿಸ್ತರಿಸಲು ಜಿಎಸ್‌ಟಿ ಕೌನ್ಸಿಲ್ ಈಗಾಗಲೇ ಅನುಮೋದನೆ ನೀಡಿದೆ.