ಪಿಎಫ್‌ ಅಕೌಂಟ್ ನಿಯಮದಲ್ಲಿ ಬದಲಾವಣೆ: ಇಂದಿನಿಂದಲೇ ಜಾರಿ

01-06-21 04:56 pm       Sagar Ap: goodreturns   ದೇಶ - ವಿದೇಶ

ನೌಕರರ ಭವಿಷ್ಯ ನಿಧಿ ಸಂಸ್ಥೆ ಪಿಎಫ್ ಖಾತೆ ನಿಯಮಗಳಲ್ಲಿ ಬದಲಾವಣೆ ತಂದಿದ್ದು, ಹೊಸ ನಿಯಮಗಳು 2021ರ ಜೂನ್ 1 ರಿಂದ ಜಾರಿಗೆ ಬಂದಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪಿಎಫ್ ಖಾತೆ ನಿಯಮಗಳಲ್ಲಿ ಬದಲಾವಣೆ ತಂದಿದ್ದು, ಹೊಸ ನಿಯಮಗಳು 2021ರ ಜೂನ್ 1 ರಿಂದ ಜಾರಿಗೆ ಬಂದಿದೆ. ಈ ಮೂಲಕ ಎಲ್ಲಾ ಇಪಿಎಫ್‌ ಖಾತೆಗಳಿಗೆ ಆಧಾರ್‌ ನಂಬರ್ ಲಿಂಕ್‌ ಮಾಡುವುದು ಕಡ್ಡಾಯವಾಗಿದೆ.

ಹೊಸ ನಿಯಮದ ಪ್ರಕಾರ ಪಿಎಫ್ ಖಾತೆಗೆ ಆಧಾರ್ ಲಿಂಕ್ ಮಾಡಲು ವಿಫಲಗೊಂಡರೆ ಉದ್ಯೋಗದಾತ(Employer) ಕೊಡುಗೆ ಸ್ಥಗಿತಗೊಳ್ಳುತ್ತದೆ. ಏಕೆಂದರೆ ಅವರು ಆಧಾರ್‌ನೊಂದಿಗೆ ಸಂಪರ್ಕ ಹೊಂದಿಲ್ಲದ ಇಪಿಎಫ್ ಖಾತೆಗಳ ಇಸಿಆರ್ ಅನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಎಲ್ಲಾ ಇಪಿಎಫ್ ಖಾತೆದಾರರ ಯುಎಎನ್ ಅನ್ನು ಪರಿಶೀಲಿಸಲು ಇಪಿಎಫ್ಒ ಉದ್ಯೋಗದಾತರಿಗೆ(Employer) ನಿರ್ದೇಶನ ನೀಡಿದೆ.



ಈ ಮೂಲಕ ಇಂದಿನಿಂದ ಉದ್ಯೋಗಿಗಳು ಆಧಾರ್‌ ಕಾರ್ಡ್‌ ಅನ್ನು ಇಪಿಎಫ್‌ ಜೊತೆಗೆ ಲಿಂಕ್ ಮಾಡಿದ್ದಾರೆಯೇ ಎಂದು ಪರಿಶೀಲಿಸಬೇಕು. ಇಲ್ಲದಿದ್ದರೆ ಉದ್ಯೋಗದಾತ ಪಿಎಫ್ ಖಾತೆಗೆ ಉದ್ಯೋಗದಾತರ ಕೊಡುಗೆಯನ್ನು ಜಮಾ ಮಾಡುವುದನ್ನು ನಿಲ್ಲಿಸಲಾಗುತ್ತದೆ.

ಆನ್‌ಲೈನ್‌ನಲ್ಲಿ ಇಪಿಎಫ್- ಆಧಾರ್ ಲಿಂಕ್ ಮಾಡುವುದು ಹೇಗೆ ?

  • ನೀವು ಮೊದಲು ಇಪಿಎಫ್‌ಒ ವೆಬ್‌ಸೈಟ್‌ಗೆ ಭೇಟಿ ನೀಡಿ ಲಾಗ್ ಇನ್ ಆಗಬೇಕು.
  • ಯುನಿವರ್ಸಲ್ ಅಕೌಂಟ್ ಸಂಖ್ಯೆ (ಯುಎಎನ್) ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು
  • ಒಟಿಪಿಯನ್ನು ಜನರೇಟ್ ಮಾಡಿ ಮತ್ತು ಸಬ್‌ಮಿಟ್‌ ಮಾಡಿ. ಜೊತೆಗೆ ಲಿಂಗವನ್ನು ಆಯ್ಕೆಮಾಡಿ * ಇದನ್ನು ಮಾಡಿದ ನಂತರ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು 'ಆಧಾರ್ ಪರಿಶೀಲನೆ' ವಿಧಾನವನ್ನು ಆರಿಸಿ.
  • ಮೊಬೈಲ್ ಅಥವಾ ಇ-ಮೇಲ್ ಆಧಾರಿತ ಪರಿಶೀಲನೆ ಬಳಸಿ' ವಿಧಾನವನ್ನು ಆಯ್ಕೆಯನ್ನು ಆರಿಸಿ
  • ನಂತರ ನಿಮ್ಮ ಮೊಬೈಲ್‌ಗೆ ಮತ್ತೊಂದು ಒಟಿಪಿ ಬರಲಿದೆ. ಆ ಒಟಿಪಿಯನ್ನು ನಮೂದಿಸಿ.
  • ಅಂತಿಮವಾಗಿ, ನಿಮ್ಮ ಪಿಎಫ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ.