ಹುಡುಗಿಯರಿಗೆ ಮೊಬೈಲ್ ಫೋನ್ ನೀಡಬಾರದು, ಅದಕ್ಕೇನೆ ಅತ್ಯಾಚಾರ ಆಗೋದು ; ಯುಪಿ ಮಹಿಳಾ ಆಯೋಗದ ಸದಸ್ಯೆ ವಿವಾದಾತ್ಮಕ ಹೇಳಿಕೆ  

10-06-21 08:29 pm       Headline Karnataka News Network   ದೇಶ - ವಿದೇಶ

''ಹುಡುಗಿಯರಿಗೆ ಮೊಬೈಲ್ ಫೋನ್ ನೀಡಬಾರದು, ಅದು ಅತ್ಯಾಚಾರಗಳಿಗೆ ಕಾರಣವಾಗುತ್ತದೆ'' ಎಂಬ ವಿವಾದಾತ್ಮಕ ಹೇಳಿಕೆಯನ್ನು ಉತ್ತರ ಪ್ರದೇಶ ಮಹಿಳಾ ಆಯೋಗದ ಸದಸ್ಯೆ ನೀಡಿದ್ದಾರೆ.

ಲಕ್ನೋ, ಜೂ. 10: ''ಹುಡುಗಿಯರಿಗೆ ಮೊಬೈಲ್ ಫೋನ್ ನೀಡಬಾರದು, ಅದು ಅತ್ಯಾಚಾರಗಳಿಗೆ ಕಾರಣವಾಗುತ್ತದೆ'' ಎಂಬ ವಿವಾದಾತ್ಮಕ ಹೇಳಿಕೆಯನ್ನು ಉತ್ತರ ಪ್ರದೇಶ ಮಹಿಳಾ ಆಯೋಗದ ಸದಸ್ಯೆ ನೀಡಿದ್ದಾರೆ. ಅಲಿಗಢ ಜಿಲ್ಲೆಯ ಮಹಿಳೆಗೆ ಸಂಬಂಧಿಸಿದ ದೂರಿನ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ ಮೀನಾ ಕುಮಾರಿ ಈ ಹೇಳಿಕೆ ನೀಡಿದ್ದಾರೆ.

ಹುಡುಗಿಯರಿಗೆ ಮೊಬೈಲ್ ಫೋನ್ ನೀಡಬಾರದು. ಹುಡುಗಿಯರು ಹುಡುಗರೊಂದಿಗೆ ಗಂಟೆಗಟ್ಟಲೆ ಫೋನ್‌ಗಳಲ್ಲಿ ಮಾತನಾಡುತ್ತಾರೆ. ಬಳಿಕ ಹುಡುಗರೊಂದಿಗೆ ಓಡಿಹೋಗುತ್ತಾರೆ. ಹುಡುಗಿಯರ ಫೋನ್‌ಗಳನ್ನು ಕೂಡಾ ಈ ಪರಿಶೀಲನೆ ಮಾಡಲಾಗುತ್ತಿಲ್ಲ. ಕುಟುಂಬ ಸದಸ್ಯರಿಗೆ ಈ ವಿಚಾರದ ಅರಿವೇ ಇರುವುದಿಲ್ಲ" ಎಂದು ಯುಪಿ ಮಹಿಳಾ ಆಯೋಗದ ಸದದ್ಯೆ ಮೀನಾ ಕುಮಾರಿ ಹೇಳಿದ್ದಾರೆ.

ಮಹಿಳೆಯರ ಮೇಲಿನ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಸಮಾಜವೇ ಗಂಭೀರವಾಗಿರಬೇಕು. ಪೋಷಕರು, ವಿಶೇಷವಾಗಿ ತಾಯಂದಿರು ದೊಡ್ಡ ಜವಾಬ್ದಾರಿಯನ್ನು ಹೊಂದಿದ್ದಾರೆ. ತಾಯಂದಿರು ತಮ್ಮ ಹೆಣ್ಣುಮಕ್ಕಳ ಮೇಲೆ ನಿಗಾವಹಿಸಬೇಕು. ಈ ವಿಚಾರದಲ್ಲಿ ತಾಯಂದಿರಿಗೆ ದೊಡ್ಡ ಜವಾಬ್ದಾರಿ ಇದೆ. ತಾಯಂದಿರು ತಮ್ಮ ಹೆಣ್ಣುಮಕ್ಕಳ ಬಗ್ಗೆ ಅಸಡ್ಡೆ ಹೊಂದಿದ್ದರೆ, ಮುಂದಿನ ಪರಿಣಾಮಕ್ಕೆ ತಾಯಂದಿರೇ ಜವಾಬ್ದಾರರು" ಎಂದಿದ್ದಾರೆ.

ಆದರೆ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಆಯೋಗದ ಉಪಾಧ್ಯಕ್ಷೆ ಅಂಜು ಚೌಧರಿ, ''ಹೆಣ್ಣು ಮಕ್ಕಳಿಗೆ ಮೊಬೈಲ್‌ ಫೋನ್‌ ನೀಡದಿರುವುದು ಲೈಂಗಿಕ ದೌರ್ಜನ್ಯವನ್ನು ಕೊನೆಗೊಳಿಸಲು ಇರುವ ಉಪಾಯವಲ್ಲ, ಇದು ಪರಿಹಾರವೂ ಅಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.

ಜನವರಿಯಲ್ಲಿ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಚಂದ್ರಮುಖಿ ದೇವಿ ಬಾದೌನ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ತಮ್ಮ ಅಭಿಪ್ರಾಯ ನೀಡುವ ಸಂದರ್ಭ ಈ ರೀತಿಯೇ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ''ಮಹಿಳೆಯರು ಸಂಜೆ ಹೊರಗೆ ಹೋಗದಿದ್ದರೆ ಈ ಘಟನೆಯನ್ನು ತಪ್ಪಿಸಬಹುದಿತ್ತು'' ಎಂದು ಕೂಡಾ ಹೇಳಿದ್ದರು. ಈ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಚಂದ್ರಮುಖಿ ದೇವಿ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದರು.

A member of Uttar Pradesh Women's Commission has said that girls should not be given mobile phones as it leads to rape. During a Mahila Jansunwai (public hearing of women-related complaints) in Aligarh on Wednesday, the member said, “Girls talk on phones and later run away with boys….”