ಬ್ರೇಕಿಂಗ್ ನ್ಯೂಸ್
13-06-21 01:44 pm Headline Karnataka News Network ದೇಶ - ವಿದೇಶ
ಪ್ರತಾಪಗಢ, ಜೂನ್ 13: ಕೊರೊನಾ ಮಹಾಮಾರಿ ಇಡೀ ಜಗತ್ತಿಗೆ ಹೆಮ್ಮಾರಿಯಾಗಿ ಪರಿಣಮಿಸಿದ್ದರೆ, ಇಲ್ಲೊಂದು ಗ್ರಾಮದಲ್ಲಿ ಗ್ರಾಮಸ್ಥರೇ ಸೇರಿ ಕೊರೊನಾ ಮಾತೆಯ ಹೆಸರಲ್ಲಿ ಗುಡಿ ಕಟ್ಟಿ ಸುದ್ದಿಯಾಗಿದ್ದಾರೆ.
ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ಜೂಹಿ ಶುಕಲ್ಪುರ್ ಗ್ರಾಮದಲ್ಲಿ ಗ್ರಾಮಸ್ಥರು ಸೇರಿ ಕೊರೊನಾ ಮಾತೆಗೆ ಗುಡಿ ಕಟ್ಟಿದ್ದಾರೆ. ಲೋಕೇಶ್ ಕುಮಾರ್ ಶ್ರೀವಾಸ್ತವ ಎಂಬಾತ ಗ್ರಾಮಸ್ಥರ ಸಹಕಾರದಲ್ಲಿ ಗುಡಿ ಕಟ್ಟಿದ್ದಾನೆ. ಕೊರೊನಾ ಮಾತೆಯ ಹೆಸರಲ್ಲಿ ವಿಗ್ರಹವನ್ನೂ ಸ್ಥಾಪನೆ ಮಾಡಿದ್ದ. ಗ್ರಾಮದ ನಿವಾಸಿ ರಾಧೇಶ್ಯಾಮ್ ವರ್ಮ ಎಂಬ ಅರ್ಚಕನನ್ನು ಕೊರೊನಾ ದೇವಿಯ ಪೂಜೆಗೆ ನೇಮಕ ಮಾಡಲಾಗಿತ್ತು. ಸ್ಥಳೀಯ ಜನರು ಕೊರೊನಾ ದೇವಿಯನ್ನು ಪೂಜಿಸಿ, ಜಗತ್ತಿಗೆ ಕವಿದ ಕತ್ತಲೆಯನ್ನು ನೀಗಿಸು ಎಂದು ಪ್ರಾರ್ಥಿಸಲು ತೊಡಗಿದ್ದರು.

ಆದರೆ, ಗುಡಿ ಕಟ್ಟಿ ನಾಲ್ಕು ದಿನಗಳಾಗುವಷ್ಟರಲ್ಲಿ ಜಾಗದ ವಾರೀಸುದಾರರು ತಕರಾರು ತೆಗೆದಿದ್ದಾರೆ. ಆ ಜಾಗ ನಾಗೇಶ್ ಕುಮಾರ್ ಶ್ರೀವಾಸ್ತವ ಮತ್ತು ಜೈ ಪ್ರಕಾಶ್ ಶ್ರೀವಾಸ್ತವ ಎಂಬವರಿಗೆ ಸೇರಿದ್ದೆಂದು ಅವರು ಪೊಲೀಸ್ ದೂರು ನೀಡಿದ್ದಾರೆ. ಇಷ್ಟಾಗುತ್ತಿದ್ದಂತೆ ಗುಡಿ ಕಟ್ಟಲು ಮುಂಚೂಣಿಯಲ್ಲಿ ನಿಂತಿದ್ದ ಲೋಕೇಶ್ ಕುಮಾರ್ ನಾಪತ್ತೆಯಾಗಿದ್ದಾನೆ. ಲೋಕೇಶ್ ಇದೇ ಊರಿನ ವ್ಯಕ್ತಿಯಾಗಿದ್ದರೂ, ದೆಹಲಿ ಸಮೀಪದ ನೋಯ್ಡಾದಲ್ಲಿ ನೆಲೆಸಿದ್ದ.
ತಮ್ಮ ಜಾಗವನ್ನು ಕಬಳಿಸಲು ಗುಡಿ ಕಟ್ಟಲಾಗಿದೆ ಎಂದು ನಾಗೇಶ್ ಮತ್ತು ಸೋದರ ಪೊಲೀಸರಿಗೆ ದೂರು ನೀಡಿದ್ದರು. ವಿವಾದಿತ ಜಾಗದಲ್ಲಿ ಗುಡಿ ಕಟ್ಟಲಾಗಿತ್ತು. ಗುಡಿ ನಿರ್ಮಾಣದಲ್ಲಿ ಈ ಜಾಗಕ್ಕೆ ಸೇರಿದ ವ್ಯಕ್ತಿಗಳು ಕೂಡ ಶಾಮೀಲಾಗಿದ್ದಾರೆ. ಗುಡಿಯ ಅಕ್ರಮ ನಿರ್ಮಾಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಸಂಗೀಪುರ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಆದರೆ, ಅತ್ತ ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಮತ್ತೊಂದು ಗುಂಪು ಕೊರೊನಾ ದೇವಿಯ ಗುಡಿಯನ್ನು ಒಡೆದು ಹಾಕಿದೆ.
People at Juhi Shukulpur village here built a "corona mata" temple, seeking divine grace to stay clear of the infection. However, the temple built on June 7 was demolished on Friday night.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm