ಬ್ರೇಕಿಂಗ್ ನ್ಯೂಸ್
15-06-21 12:52 pm Headline Karnataka News Network ದೇಶ - ವಿದೇಶ
ಚೆನ್ನೈ, ಜೂನ್ 15 : ತಮಿಳುನಾಡಿನಲ್ಲಿ ಹೇರಲಾಗಿದ್ದ ಲಾಕ್ಡೌನ್ ಆದೇಶವನ್ನು ಜೂನ್ 21ರ ತನಕ ವಿಸ್ತರಣೆ ಮಾಡಲಾಗಿದೆ. ಆದರೆ, ಕೆಲವು ನಿಯಮಗಳನ್ನು ಸಡಿಲಿಸಿದ್ದಲ್ಲದೆ, ಮದ್ಯ ಮಾರಾಟಕ್ಕೂ ಅವಕಾಶ ನೀಡಲಾಗಿದೆ.
ಕೊರೊನಾ ಸೋಂಕು ಕಡಿಮೆಯಿರುವ 27 ಜಿಲ್ಲೆಗಳಲ್ಲಿ ಸರ್ಕಾರದ ಅಧೀನದಲ್ಲಿರುವ ಬಾರ್, ವೈನ್ ಶಾಪ್ಗಳನ್ನು ತೆರೆಯಲು ಮುಖ್ಯಮಂತ್ರಿ ಸ್ಟಾಲಿನ್ ಸಮ್ಮತಿ ಸೂಚಿಸಿದ್ದಾರೆ. ವಿರೋಧ ಪಕ್ಷಗಳ ವಿರೋಧಗಳ ನಡುವೆಯೇ ರಾಜ್ಯ ಸರಕಾರ ಮದ್ಯ ಮಾರಾಟಕ್ಕೆ ವಿನಾಯ್ತಿ ನೀಡಿದೆ. ಇದರಿಂದ ಮದ್ಯಪ್ರಿಯರು ಖುಷ್ ಆಗಿದ್ದು ಅದಕ್ಕೆ ಸಾಕ್ಷಿಯೆಂಬಂತೆ, ವ್ಯಕ್ತಿಯೊಬ್ಬ ಮದ್ಯದ ಬಾಟಲಿಗೆ ಚುಂಬಿಸಿ, ಆರತಿ ಬೆಳಗಿ ಪೂಜೆ ಮಾಡುವ ದೃಶ್ಯದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
#WATCH | A local in Madurai worships bottles of liquor after Tamil Nadu govt permits the reopening of liquor shops in the state pic.twitter.com/sIp9LUR0GM
— ANI (@ANI) June 14, 2021
ತಮಿಳುನಾಡಿನ ಮದುರೈ ಪಟ್ಟಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಮದ್ಯದ ಮಳಿಗೆ ತೆರೆದಿರುವುದನ್ನು ಕಂಡು ಸಂತಸಗೊಂಡ ವ್ಯಕ್ತಿಯೊಬ್ಬ ವಿಭಿನ್ನವಾಗಿ ಖುಷಿ ವ್ಯಕ್ತಪಡಿಸಿದ್ದಾನೆ. ಮೊದಲಿಗೆ ಆರತಿಯನ್ನು ಹಚ್ಚಿ ಅಂಗಡಿ ಮುಂದಿಟ್ಟ ಆತ, ಮದ್ಯ ಖರೀದಿಸಿ ಬಾಟಲಿಗಳಿಗೆ ಮುತ್ತು ಕೊಟ್ಟಿದ್ದಾನೆ. ಆಮೇಲೆ, ಆರತಿ ಮತ್ತು ಬಾಟಲಿಯನ್ನು ಮದ್ಯದಂಗಡಿ ಮುಂದಿಟ್ಟು ನಮಸ್ಕರಿಸಿದ್ದಾನೆ.


ಆತ ಮದ್ಯದ ಬಾಟಲಿಗಳಿಗೆ ಆರತಿ ಬೆಳಗಿ ಪೂಜಿಸುವುದನ್ನು ನೋಡಿದ ಇನ್ನೋರ್ವ ವ್ಯಕ್ತಿಯೂ ತಾನು ಖರೀದಿಸಿದ ಬಾಟಲಿಯನ್ನು ಪಕ್ಕದಲ್ಲಿಟ್ಟು ನಮಸ್ಕರಿಸಿ ತೆರಳಿದ್ದಾನೆ. ಈ ವ್ಯಕ್ತಿ ಮಾತ್ರ ಅದ್ಯಾವುದರ ಪರಿವೇ ಇಲ್ಲವೆಂಬಂತೆ ಎರಡೂ ಕೈಗಳಿಂದ ಬಾಟಲಿಗಳನ್ನು ಎತ್ತಿ ಹಿಡಿದು, ನೆರೆದವರಿಗೆಲ್ಲರಿಗೂ ತೋರಿಸಿ ಬಳಿಕ ಕೆಳಗಿಟ್ಟು, ಶ್ರದ್ಧೆಯಿಂದ ನಾಲ್ಕೈದು ಬಾರಿ ನಮಸ್ಕಾರ ಮಾಡಿದ್ದಾನೆ.
ಇದರ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಬಿಳಿ ಅಂಗಿ, ಬಿಳಿ ಪಂಚೆ ತೊಟ್ಟು ಮದ್ಯದಂಗಡಿ ಮುಂದೆಯೇ ಬಾಟಲಿಗಳಿಗೆ ಪೂಜೆ ಸಲ್ಲಿಸಿರುವ ಈ ವ್ಯಕ್ತಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯನಾಗುತ್ತಿರುವುದರ ಜೊತೆಗೆ ಹಾಸ್ಯಾಸ್ಪದನಾಗಿಯೂ ಕಂಡಿದ್ದಾನೆ.
After the Tamil Nadu government decided to open the liquor shops in 27 districts for a limited period of time, a unique incident from Madurai has gone viral. The Tamil Nadu government extended the statewide lockdown till June 29. However, the administration has announced several relaxations, and the opening of Tamil Nadu State Marketing Corporation (TASMAC) liquor stores is one of them.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
25-07-26 07:34 pm
HK News Staffer
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
ಮತ್ತೆ ಪ್ರತಿಭಟನೆಗೆ ಬಂದ್ರೆ ಜೇಬಿನಲ್ಲಿ 50 ಗ್ರಾಂ ಡ...
23-07-26 06:26 pm
25-07-26 07:32 pm
HK News Staffer
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
ನೀಟ್ ಪರೀಕ್ಷೆ ; ಮಂಗಳೂರಿನಲ್ಲೂ ಮೊಳಗಿದ ವಿದ್ಯಾರ್ಥಿ...
24-07-26 10:37 pm
Surathkal Brdige, Thokottu, Mangalore: ಸುರತ್ಕ...
23-07-26 10:27 pm
25-07-26 07:36 pm
HK News Staffer
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm
Astra Group Fraud, Lanchu Lal, Mangalore: ‘ಅಸ...
24-07-26 05:30 pm