ಮನಗೆದ್ದ ನವಜೋಡಿ ; 37 ಲಕ್ಷ ರೂ. ಮದುವೆಯ ಹಣವನ್ನು ಕೋವಿಡ್- ರಿಲೀಫ್ ಫಂಡ್ ಗೆ ದೇಣಿಗೆ ಕೊಟ್ಟ ಕಪಲ್ಸ್

18-06-21 03:05 pm       Headline Karnataka News Network   ದೇಶ - ವಿದೇಶ

ತಮಿಳುನಾಡಿನ ವಿಶೇಷ ಜೋಡಿಯೊಂದು ತಮ್ಮ ಅದ್ದೂರಿ ವಿವಾಹಕ್ಕೆ ಬ್ರೇಕ್ ಹಾಕಿ ಅದೇ ಹಣವನ್ನು ಕೋವಿಡ್- ರಿಲೀಫ್ ಫಂಡ್ ಗೆ ದೇಣಿಗೆಯಾಗಿ ನೀಡಿದೆ.

ತಿರುಪ್ಪೂರ್, ಜೂನ್ 18 : ತಮಿಳುನಾಡಿನ ವಿಶೇಷ ಜೋಡಿಯೊಂದು ತಮ್ಮ ಅದ್ದೂರಿ ವಿವಾಹಕ್ಕೆ ಬ್ರೇಕ್ ಹಾಕಿ ಅದೇ ಹಣವನ್ನು ಕೋವಿಡ್- ರಿಲೀಫ್ ಫಂಡ್ ಗೆ ದೇಣಿಗೆಯಾಗಿ ನೀಡಿದೆ.

ಹೌದು.. ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಅನು ಮತ್ತು ಅರುಳ್ ಪ್ರಾಣೇಶ್ ಜೋಡಿ ಸರಳವಾಗಿ ವಿವಾಹವಾಗಿ ಬಾಕಿ ಹಣವನ್ನು ಕೋವಿಡ್ ರಿಲೀಫ್ ಫಂಡ್ ಗೆ ದೇಣಿಗೆಯಾಗಿ ನೀಡಿದೆ. ಇದೇ ಜೂನ್ 14ರಂದು ಈ ಜೋಡಿಯ ವಿವಾಹ ನೆರವೇರಿದ್ದು, ಮದುವೆಗಾಗಿ ಈ ಜೋಡಿ 50 ಲಕ್ಷ  ರೂಗಳನ್ನು ಅಂದಾಜಿಸಿತ್ತು. ಆದರೆ ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.

ಇವರ ಮದುವೆಗೆ ಸುಮಾರು 13 ಲಕ್ಷ ರೂ. ಖರ್ಚಾಗಿದ್ದು ಬಾಕಿ 37 ಲಕ್ಷ ರೂಗಳನ್ನು ಕೋವಿಡ್ ರಿಲೀಫ್ ಫಂಡ್ ಗೆ ನೀಡಿದ್ದಾರೆ. ಈ ಪೈಕಿ ಕೆಲ ಸರ್ಕಾರಿ ಸಂಸ್ಥೆಗಳಿಗೆ ಮತ್ತೆ ಒಂದಷ್ಟು ಹಣವನ್ನು ಸರ್ಕಾರೇತರ ಸಂಘ ಸಂಸ್ಥೆಗಳಿಗೆ ನೀಡಿದೆ ಎನ್ನಲಾಗಿದೆ.

Couple In Tamil Nadu Saves On Big Wedding, Donates Rs 37 Lakh To COVID Relief Fund