ಟಿವಿ, ಮೊಬೈಲ್ ಸಾಗಿಸುತ್ತಿದ್ದ ಕಂಟೇನರ್ ಲಾರಿ ಪಲ್ಟಿ ;ಸಿಕ್ಕಿದ್ದೇ ಚಾನ್ಸ್ , ಲೂಟಿ ಮಾಡಿ ಎಸ್ಕೇಪ್ ಆದ ಜನರು !

19-06-21 12:49 pm       Headline Karnataka News Network   ದೇಶ - ವಿದೇಶ

ಕಂಟೇನರ್​ ಟ್ರಕ್​ವೊಂದು ಚಾಲಕನ ನಿಯಂತ್ರಣ ತಪ್ಪಿ​ ಪಲ್ಟಿ ಆದ ಘಟನೆ ಮಹಾರಾಷ್ಟ್ರದ ಉಸ್ಮಾನಾಬಾದ್​​ನಲ್ಲಿ ನಡೆದಿದೆ.

ನವದೆಹಲಿ, ಜೂನ್ 19: ಕಂಟೇನರ್​ ಟ್ರಕ್​ವೊಂದು ಚಾಲಕನ ನಿಯಂತ್ರಣ ತಪ್ಪಿ​ ಪಲ್ಟಿ ಆದ ಘಟನೆ ಮಹಾರಾಷ್ಟ್ರದ ಉಸ್ಮಾನಾಬಾದ್​​ನಲ್ಲಿ ನಡೆದಿದೆ. ಅದರಲ್ಲಿದ್ದ ಸುಮಾರು 70 ಲಕ್ಷ ಮೌಲ್ಯದ ವಸ್ತುಗಳನ್ನು ಗ್ರಾಮಸ್ಥರು ಹಾಗೂ ದಾರಿಹೋಕರು ಲೂಟಿ ಹೊಡೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. 

ಪಲ್ಟಿಯಾದ ಟ್ರಕ್​ ಮೊಬೈಲ್​ ಫೋನ್​ಗಳು, ಕಂಪ್ಯೂಟರ್​ಗಳು, ಎಲ್​ಇಡಿ ಟಿವಿಗಳು, ಬೊಂಬೆಗಳು ಹಾಗೂ ಎಲೆಕ್ಟ್ರಾನಿಕ್​​ ಉತ್ಪನ್ನಗಳನ್ನು ಸಾಗಿಸುತ್ತಿತ್ತು ಎಂದು ತಿಳಿದು ಬಂದಿದೆ. ಟ್ರಕ್​ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕೂಡಲೇ, ಅಲ್ಲಿಗೆ ಧಾವಿಸಿದ ಜನರು ಟ್ರಕ್​ನಲ್ಲಿದ್ದ ಟಿವಿ, ಮೊಬೈಲ್​​, ಕಂಪ್ಯೂಟರ್​​​​​ಗಳನ್ನು ಕದ್ದುಕೊಂಡು ಹೋಗಿದ್ದಾರೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಕೂಂಬಿಂಗ್​​​ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಟ್ರಕ್​ನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿರುವ ಜನರು ವಾಪಸ್​ ತಂದುಕೊಡಿ ಎಂದು ಹೇಳಿದ್ದರು. ಪೊಲೀಸ್ ತಂಡಗಳು ಅಕ್ಕ-ಪಕ್ಕದ ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದು, ಜನರು ತಾವು ತೆಗೆದುಕೊಂಡು ಹೋಗಿರುವ ವಸ್ತುಗಳನ್ನು ಹಿಂಪಡೆಯಲು ಹರಸಾಹಸಪಟ್ಟರು.

ವಾಶಿ ತಹಶಿಲ್​​ನ ತೆರ್ಕೆಡಾದ ಲಕ್ಷ್ಮಿ ಪಾರ್ದಿ ಪೆಡಿ ಬಳಿ ಸೋಲಾಪುರ-ರಂಗಾಬಾದ್​ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ 3 ಗಂಟೆಯಲ್ಲಿ ಈ ಘಟನೆ ನಡೆದಿದೆ. ಟ್ರಕ್​ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕೂಡಲೇ, ಅಲ್ಲಿಗೆ ಧಾವಿಸಿದ ಜನರು ಟ್ರಕ್​ನಲ್ಲಿದ್ದ ಟಿವಿ, ಮೊಬೈಲ್​​, ಕಂಪ್ಯೂಟರ್​​​​​ಗಳನ್ನು ಕದ್ದುಕೊಂಡು ಹೋಗಿದ್ದಾರೆ. ಇನ್ನೂ ಕೆಲವರು ಕಂಟೇನರ್​​ನ ಬಾಗಿಲು ತೆರೆಯಲು ಯತ್ನಿಸಿದರು. ಸ್ಥಳೀಯ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಜನರು ಕದ್ದೊಯ್ದಿರುವ ವಸ್ತುಗಳನ್ನು ಮರಳಿ ಪಡೆಯಲು ಯತ್ನಿಸಿದರು.

ಪೊಲೀಸರು ಕೂಂಬಿಂಗ್​ ಕಾರ್ಯಾಚರಣೆಯನ್ನು ಆರಂಭಿಸಿದರು. ಪೊಲೀಸರ ಮನವಿ ಬಳಿಕ ಕೆಲವು ಜನರು ಮಾತ್ರ ತಾವು ತೆಗೆದುಕೊಂಡು ಹೋಗಿದ್ದ ವಸ್ತುಗಳನ್ನು ವಾಪಸ್ ತಂದುಕೊಟ್ಟರು. ಆದರೆ ಇನ್ನೂ ಕೆಲವರು ತಂದುಕೊಡಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

Goods, including phones, computers, LEDs, worth over ₹ 70 lakh were looted allegedly by villagers and passersby after a container truck overturned Maharashtra's Osmanabad.