ಕೃತಕ ಬುದ್ಧಿಮತ್ತೆ , ನ್ಯೂಟ್ರಿಷನ್ ತರಬೇತಿಗೆ ‘ಫಿಟ್ಜಾ’ ಆ್ಯಪ್ ಅನಾವರಣ ; ಪ್ಲೇಸ್ಟೋರ್ ನಲ್ಲಿ ಲಭ್ಯ

22-06-21 01:39 pm       Headline Karnataka News Network   ದೇಶ - ವಿದೇಶ

ವೊಕ್ಹಾರ್ಡ್ ಫೌಂಡೇಶನ್ ಸಹಯೋಗದಲ್ಲಿ ಜೂನ್ 22 ರಂದು ದೇಶಾದ್ಯಂತ ಈ ‘ಫಿಟ್ಜಾ’ ಆ್ಯಪ್ ಅನ್ನು ಅನಾವರಣ ಮಾಡಲಾಗಿದೆ. ಇದು ಪ್ರಾಚೀನ ಪರಂಪರೆಯ ಧ್ಯೇಯಗಳನ್ನು ಡಿಜಿಟಲ್ ರೂಪದಲ್ಲಿ ನ್ಯೂಟ್ರಿಷನ್ ತರಬೇತಿ ನೀಡುವ ದೇಶದಲ್ಲಿ ಮೊಟ್ಟ ಮೊದಲ ವೇದಿಕೆ.

ಭಾರತದ ಮೊಟ್ಟಮೊದಲ ಕೃತಕ ಬುದ್ಧಿಮತ್ತೆಯನ್ನೊಳಗೊಂಡ (Artificial Intelligence) ವರ್ಚುವಲ್ ನ್ಯೂಟ್ರಿಷನ್ ಕೋಚ್ ‘ಫಿಟ್ಜಾ’ ಅನ್ನು ಅಧಿಕೃತವಾಗಿ ಅನಾವರಣ ಮಾಡಲಾಗಿದೆ. ಈ ಹೊಸ ‘ಫಿಟ್ಜಾ’ ಪಥ್ಯವು (DIET) ಆರೋಗ್ಯ ಅಭಿವೃದ್ಧಿ, ಬುದ್ಧಿವಂತ ಜೀವನಶೈಲಿ, ಭಾವನಾತ್ಮಕ ಸ್ಥಿರತೆ ಮತ್ತು ಉದ್ವೇಗ ನಿಯಂತ್ರಣದ ನಿಯಮಗಳನ್ನೊಳಗೊಂಡಿದೆ. 

ವೊಕ್ಹಾರ್ಡ್ ಫೌಂಡೇಶನ್ ಸಹಯೋಗದಲ್ಲಿ ಜೂನ್ 22 ರಂದು ದೇಶಾದ್ಯಂತ ಈ ‘ಫಿಟ್ಜಾ’ ಆ್ಯಪ್ ಅನ್ನು ಅನಾವರಣ ಮಾಡಲಾಗಿದೆ. ಇದು ಪ್ರಾಚೀನ ಪರಂಪರೆಯ ಧ್ಯೇಯಗಳನ್ನು ಡಿಜಿಟಲ್ ರೂಪದಲ್ಲಿ ನ್ಯೂಟ್ರಿಷನ್ ತರಬೇತಿ ನೀಡುವ ದೇಶದಲ್ಲಿ ಮೊಟ್ಟ ಮೊದಲ ವೇದಿಕೆ. ‘ಫಿಟ್ಜಾ’ ಬುದ್ಧಿವಂತಿಕೆಯ ವಿಧಾನದೊಂದಿಗೆ ಕರುಳು ಮತ್ತು ಪ್ರತಿಕಾಯಗಳ ಆರೋಗ್ಯವನ್ನು ಸಮತೋಲನದಲ್ಲಿಟ್ಟು ದೀರ್ಘಕಾಲದ ಕಾಯಿಲೆಗಳನ್ನು ನಿವಾರಿಸಲು ಗಮನ ಹರಿಸುತ್ತದೆ. 

ನಿಮ್ಮ ಇಂಟೆಲಿಜೆಂಟ್ ವರ್ಚುವಲ್ ನ್ಯೂಟ್ರಿಷನ್ ಕೋಚ್, ಫಿಟ್ಜಾವನ್ನು ಜೂನ್ 22, 2021 ರಂದು ಆರಂಭಿಸಲಾಗಿದೆ. ಇದು ಸಮಗ್ರ ಆರೋಗ್ಯ ಮತ್ತು ಪೌಷ್ಠಿಕಾಂಶ ಪರಿಕಲ್ಪನೆಯನ್ನಿಟ್ಟುಕೊಂಡು ಆಧುನಿಕ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಲಾಗಿರುವ ಮೊಬೈಲ್ ಅಪ್ಲಿಕೇಶನ್ ಆಗಿದೆ. ಆಂಡ್ರಾಯ್ಡ್ (ಪ್ಲೇ ಸ್ಟೋರ್) ಮತ್ತು ಆಪಲ್ (ಆಪ್ ಸ್ಟೋರ್) ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಆ್ಯಪ್ ಲಭ್ಯವಿದ್ದು, ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆರಂಭಿಕ ಕೊಡುಗೆಯಾಗಿ ಎರಡು ವಾರಗಳ ಉಚಿತ ಸೇವೆ ನಿಮಗೆ ಸಿಗಲಿದೆ. ಈ ಆ್ಯಪ್ ಬಳಸಿ ನೀವೇ ಚಿಕಿತ್ಸೆ ಮಾಡಿಕೊಳ್ಳಿ ಮತ್ತು ನಿಮ್ಮ ಆರೋಗ್ಯದ ಬದಲಾವಣೆಯನ್ನು ತಿಳಿದು ಪರಿವರ್ತನೆಯಲ್ಲಿ ತೊಡಗಿಸಬಹುದು.‌ 

ಮಾನವ ಕೇಂದ್ರಿತ, ಕೃತಕ ಬುದ್ಧಿಮತ್ತೆ (Artificial Intelligence) ಚಾಲಿತ ಮೊಬೈಲ್ ಅಪ್ಲಿಕೇಶನ್ ‘ಫಿಟ್ಜಾ’ ಹಳೆಯ ಆಹಾರ ಅಭ್ಯಾಸಗಳು, ಬಳಕೆದಾರರ ಇಷ್ಟಗಳು ಮತ್ತು ಇಷ್ಟವಿಲ್ಲದ್ದು, ಅಜ್ಜಿಯ ಪಾಕ ವಿಧಾನಗಳು ಮತ್ತು ನೈಸರ್ಗಿಕ ರೀತಿ ಮನೆಯಲ್ಲಿ ತಯಾರಿಸಿದ  ಮತ್ತು ಮುಖ್ಯವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸುಸ್ಥಿರ ಪೌಷ್ಟಿಕಾಂಶದ ಪ್ಲಾನ್​ ಗಳನ್ನು ಒಳಗೊಂಡಿದೆ. ಇದು ನಿಮ್ಮ ದೇಹದ ಪ್ರಕಾರಕ್ಕೆ ಹೊಂದಿಕೊಳ್ಳುತ್ತದೆ. ಅಂದರೆ ದೇಹ ಪ್ರಕೃತಿಯ ಆಧಾರದ ಮೇಲೆ ಉತ್ತಮ ಫಲಿತಾಂಶಗಳನ್ನು ನೀಡಲು ನಿಮ್ಮ ಊಟದ ಪ್ಲಾನ್ ಅನ್ನು ಬುದ್ಧಿವಂತಿಕೆಯಿಂದ ಬದಲಾಯಿಸುತ್ತದೆ.

"ಒಟ್ಟಾರೆಯಾಗಿ ಆರೋಗ್ಯ ಮತ್ತು ಫಿಟ್ನೆಸ್ ವಲಯ ಈಗ ಪೌಷ್ಠಿಕಾಂಶಯುತ ಆಹಾರದ ಪ್ಲಾನ್ ನೀಡಲು ಮೌಲ್ಯಯುತ ಸೇವೆಯತ್ತ ಗಮನ ಹರಿಸುತ್ತಿದೆ. ಜನರ ಆರೈಕೆ ಮತ್ತು ಗುಣಪಡಿಸುವಿಕೆ ಒಂದು ನಿರ್ದಿಷ್ಟ ದಿಕ್ಕಿಗೆ ಸೀಮಿತವಾಗಿಲ್ಲ. ಆರೋಗ್ಯ ರಕ್ಷಣೆಗೆ ಒತ್ತು ನೀಡುವುದು ಮತ್ತು ಸಾಮಾಜಿಕವಾಗಿ ಜನರ ಯೋಗಕ್ಷೇಮ ನೋಡಿಕೊಳ್ಳುವುದು ಈ ಮೊಬೈಲ್ ಅಪ್ಲಿಕೇಶನ್ ಉದ್ದೇಶ ಎಂದು ಫಿಟ್ಜಾ ಸಹ ಸಂಸ್ಥಾಪಕ ಮತ್ತು ಸಿಇಓ ನಿಖಿಲ್ ಬೆಹ್ಲ್ ತಿಳಿಸಿದ್ದಾರೆ. 

ಜನರ ಪೌಷ್ಠಿಕಾಂಶದ ಆಹಾರ ಮತ್ತು ಆಹಾರ ಕ್ರಮದಿಂದ ಆರೋಗ್ಯ ವೃದ್ದಿಸಲು ಫಿಟ್ಜಾ ದೃಢ ಹೆಜ್ಜೆ ಇಟ್ಟಿದೆ. ಸದೃಢ ಆರೋಗ್ಯ ಕ್ರಮಕ್ಕಾಗಿ ಯಾವೆಲ್ಲ ಆಹಾರ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಅರಿವು ಮೂಡಿಸುವಲ್ಲಿ ಫಿಟ್ಜಾ ಏಪ್ ಪರಿಪೂರ್ಣ ಆಗಿರುತ್ತದೆ ಎಂದು ವೋಕ್ಹಾರ್ಡ್ ಫೌಂಡೇಶನ್‌ ಸಿಇಒ ಡಾ. ಹುಜೈಫಾ ಖೋರಾಕಿವಾಲಾ ತಿಳಿಸಿದ್ದಾರೆ. 

ಈ ಫಿಟ್ಜಾ ಅಪ್ಲಿಕೇಶನ್ ಶಕ್ತಿಯುತ ಮತ್ತು ನೈಸರ್ಗಿಕವಾದ ಪಥ್ಯದ (DIET) ಯೋಜನೆಗಳು ಮತ್ತು ಸರಳ ಆರೋಗ್ಯಕರ ಜೀವನ ತಂತ್ರಗಳನ್ನು ಒಳಗೊಂಡಿದೆ. ಇದನ್ನು ಪೌಷ್ಠಿಕಾಂಶದ ಅಂತರವನ್ನು ನಿವಾರಿಸಲು ವಿನ್ಯಾಸಗೊಳಿಸಲಾಗಿದೆ. ಇವು ಪ್ರತಿಯೊಬ್ಬರ ದೇಹ ಸ್ಥಿತಿಗೆ ಅನ್ವಯವಾಗುವಂತೆ ವೈಯಕ್ತಿಕ ಆದ್ಯತೆಗಳಿಗೆ ಹೊಂದಿಕೊಳ್ಳುತ್ತದೆ ಎಂದು ಖ್ಯಾತ ನ್ಯೂಟ್ರಿಷನಿಸ್ಟ್ ಮತ್ತು ಫಿಟ್ಜಾ ಸಹ-ಸಂಸ್ಥಾಪಕ ಶ್ವೇತಾ ಷಾ ತಿಳಿಸಿದ್ದಾರೆ. 

‘ಫಿಟ್ಜಾ’ ತಂಡದಲ್ಲಿ ಪೌಷ್ಠಿಕಾಂಶ ತಜ್ಞರು, ತಂತ್ರಜ್ಞರು, ಉದ್ಯಮಿಗಳು ಭಾಗವಾಗಿದ್ದಾರೆ. ಸಾಮಾನ್ಯ ಉದ್ದೇಶದಿಂದ ಮತ್ತು ಫಿಟ್ಜಾದ ಮೂಲ ಉದ್ದೇಶದ ಸಾಕಾರಕ್ಕಾಗಿ ನಮ್ಮ ಜತೆ ಪಾಲುದಾರರಾಗಿದ್ದಾರೆ. 

ಕೃತಕ ಬುದ್ಧಿಮತ್ತೆಯಿಂದ (Artificial Intelligence) ನಡೆಸಲ್ಪಡುವ ವರ್ಚುವಲ್ ನ್ಯೂಟ್ರಿಷನ್ ಕೋಚ್ ಎನ್ನುವುದು ನ್ಯೂಟ್ರಿಷನ್ ಕೇರ್ ಜೊತೆಗೆ ದೀರ್ಘಕಾಲದ ಕಾಯಿಲೆಗಳನ್ನು ನಿವಾರಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ವಿಶ್ವದ ಸಾಂಪ್ರದಾಯಿಕ ಆಹಾರ ಮತ್ತು ವರ್ಚುವಲ್ ಎರಡನ್ನೂ ಜೋಡಿಸಿ ತಂತ್ರಜ್ಞಾನ ಬಳಸಿಕೊಂಡು ಆರೋಗ್ಯದ ಅರಿವು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. 

ಮಾಹಿತಿಗೆ ಮೊನಾಲಿಶಾ ಗಂತಾಯತ್- +918105157086

Download the APP NOW: FITZA

Work hard Foundation releases digital app "Fitza" which is an Al-enabled Intelligent Virtual Nutrition Coach. It is the first-ever India's Nutrition coach in digital form that provides a breath of fresh air blending ancient wisdom with modern technology.