ವ್ಯವಸ್ಥಾಪನಾ ಸಮಿತಿ ಸದಸ್ಯರನ್ನು ವಜಾಗೊಳಿಸುವ ಅಧಿಕಾರ ವಕ್ಫ್ ಮಂಡಳಿಗೆ ಮಾತ್ರ ; ಕೃಷ್ಣಾಪುರ ಮಸೀದಿ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪು 

30-12-25 06:34 pm       Bangalore Correspondent   ಕರ್ನಾಟಕ

ವಕ್ಫ್ ವ್ಯವಸ್ಥಾಪನಾ ಸಮಿತಿಯ ಸದಸ್ಯರನ್ನು ವಜಾಗೊಳಿಸುವ ಅಧಿಕಾರ ವಕ್ಫ್ ಮಂಡಳಿಗೆ ಮಾತ್ರ ಇದೆಯೇ ಹೊರತು ಮಸೀದಿ ವ್ಯವಸ್ಥಾಪನಾ ಸಮಿತಿಗೆ ಅಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಬೆಂಗಳೂರು, ಡಿ.30 : ವಕ್ಫ್ ವ್ಯವಸ್ಥಾಪನಾ ಸಮಿತಿಯ ಸದಸ್ಯರನ್ನು ವಜಾಗೊಳಿಸುವ ಅಧಿಕಾರ ವಕ್ಫ್ ಮಂಡಳಿಗೆ ಮಾತ್ರ ಇದೆಯೇ ಹೊರತು ಮಸೀದಿ ವ್ಯವಸ್ಥಾಪನಾ ಸಮಿತಿಗೆ ಅಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಕೃಷ್ಣಾಪುರದ ಮುಸ್ಲಿಮ್ ಜಮಾತ್ ನ ಬದಾರಿಯಾ ಜುಮ್ಮಾ ಮಸೀದಿಯ ನಿರ್ಧಾರ ಪ್ರಶ್ನಿಸಿ ಅಬ್ದುಲ್ ಸತ್ತಾರ್ ಮತ್ತು ಮೊಹಮ್ಮದ್ ಮುಸ್ತಫಾ ಸಲ್ಲಿಸಿದ್ದ ರಿಟ್ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಮೇಲಿನಂತೆ ಆದೇಶ ಮಾಡಿದೆ.

2024ರ ಅಕ್ಟೋಬರ್ 11ರಂದು ತುರ್ತು ಸಭೆ ನಡೆಸಿ ಅರ್ಜಿದಾರರನ್ನು ಸದಸ್ಯತ್ವದಿಂದ ವಜಾಗೊಳಿಸಿದ್ದ ಮಸೀದಿಯ ವ್ಯವಸ್ಥಾಪನಾ ಸಮಿತಿ ಆದೇಶವನ್ನು ರದ್ದುಗೊಳಿಸಿರುವ ನ್ಯಾಯಪೀಠ, ಅರ್ಜಿದಾರರು ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿ ಮುಂದುವರಿಯಬಹುದು ಎಂದು ಹೇಳಿದೆ. 

ವಕ್ಫ್ ಕಾಯ್ದೆ -1995ರ ಕಲಂ 32(2)ಜಿ ಅನುಸಾರ ವ್ಯವಸ್ಥಾಪನಾ ಸಮಿತಿಗೆ ಮುತವಲ್ಲಿಗಳನ್ನು ನೇಮಿಸುವ ಅಥವಾ ತೆಗೆಯುವ ಅಧಿಕಾರ ವಕ್ಫ್ ಮಂಡಳಿಗೆ ಮಾತ್ರವೇ ಇದೆ. ಮುತವಲ್ಲಿಗಳನ್ನು ವಜಾಗೊಳಿಸುವಾಗ ವಕ್ಫ್ ಕಾಯ್ದೆಯ ಕಲಂ 64 ಮತ್ತು ಕರ್ನಾಟಕ ವಕ್ಫ್ ನಿಯಮಗಳು -2017ರ ನಿಯಮ 58ರಡಿ ಇರುವ ಕಾರಣಗಳನ್ನು ಪಾಲಿಸಬೇಕು ಎಂದು ನ್ಯಾಯಪೀಠ ಇದೇ ವೇಳೆ ನಿರ್ದೇಶಿಸಿದೆ.

The Karnataka High Court has ruled that the authority to remove members of a Waqf management committee lies solely with the Waqf Board, not with the mosque committee. Justice Suraj Govindaraj set aside the Krishnapura Badaria Juma Masjid committee’s decision to remove members Abdul Sattar and Mohammed Mustafa.