ಲಸಿಕೆ ಪಡೆಯದಿದ್ದಲ್ಲಿ ಸರಕಾರಿ ನೌಕರರಿಗೆ ವೇತನ ಇಲ್ಲ ! ಜಿಲ್ಲಾಧಿಕಾರಿ ಟಾಸ್ಕ್

23-06-21 05:10 pm       Headline Karnataka News Network   ದೇಶ - ವಿದೇಶ

ಮಧ್ಯಪ್ರದೇಶದ ಉಜ್ಜೈನಿಯ ಜಿಲ್ಲಾಡಳಿತ ತಮ್ಮ ಜಿಲ್ಲೆಯಲ್ಲಿ ಇರುವ ಸರಕಾರಿ ಅಧಿಕಾರಿಗಳು, ನೌಕರರು ಇನ್ನು ಒಂದು ತಿಂಗಳ ಒಳಗೆ ಲಸಿಕೆ ಪಡೆಯದೇ ಇದ್ದಲ್ಲಿ ಮುಂದಿನ ತಿಂಗಳಿಂದ ವೇತನ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಉಜ್ಜೈನಿ, ಜೂನ್ 23: ಕೊರೊನಾ ಲಸಿಕೆ ಪಡೆಯುವಂತೆ ಸರಕಾರ ಹೇಳುತ್ತಲೇ ಬಂದಿದೆ. ಆದರೆ, ಅದೆಷ್ಟೋ ಮಂದಿ ಲಸಿಕೆಯ ಬಗ್ಗೆ ಇನ್ನೂ ನಿರಾಸಕ್ತಿ ಹೊಂದಿದ್ದಾರೆ. ಆದರೆ, ಮಧ್ಯಪ್ರದೇಶದ ಉಜ್ಜೈನಿಯ ಜಿಲ್ಲಾಡಳಿತ ಈ ಬಗ್ಗೆ ಒಂದು ಹೆಜ್ಜೆ ಮುಂದಿಟ್ಟಿದೆ. ತಮ್ಮ ಜಿಲ್ಲೆಯಲ್ಲಿ ಇರುವ ಸರಕಾರಿ ಅಧಿಕಾರಿಗಳು, ನೌಕರರು ಇನ್ನು ಒಂದು ತಿಂಗಳ ಒಳಗೆ ಲಸಿಕೆ ಪಡೆಯದೇ ಇದ್ದಲ್ಲಿ ಮುಂದಿನ ತಿಂಗಳಿಂದ ವೇತನ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಈ ರೀತಿಯ ವಿಚಿತ್ರ ಆದೇಶ ನೀಡುವ ಮೂಲಕ ಉಜ್ಜೈನಿ ಜಿಲ್ಲಾಧಿಕಾರಿ ಆಶಿಷ್ ಸಿಂಗ್ ಸುದ್ದಿಯಾಗಿದ್ದಾರೆ. ಸರಕಾರಿ ನೌಕರರು ಜುಲೈ 31ರ ಒಳಗೆ ಲಸಿಕೆ ಪಡೆದುಕೊಳ್ಳದಿದ್ದಲ್ಲಿ ಜುಲೈ ತಿಂಗಳ ವೇತನವನ್ನು ತಡೆಹಿಡಿಯಲಾಗುವುದು. ಲಸಿಕೆ ಪ್ರಮಾಣ ಪತ್ರವನ್ನು ಪಡೆದ ಬಳಿಕವೇ ಈ ವೇತನ ನೀಡಲಾಗುವುದು ಎಂದು ಆದೇಶ ಹೊರಡಿಸಿದ್ದಾರೆ.

ಉಜ್ಜೈನಿ ಜಿಲ್ಲೆಯಲ್ಲಿ ಶೇಕಡಾವಾರು ಲಸಿಕೆ ಪ್ರಮಾಣವನ್ನು ಹೆಚ್ಚಿಸಲು ಜಿಲ್ಲಾಧಿಕಾರಿ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಲಸಿಕೆಯನ್ನು ಪಡೆಯುವಂತೆ ಜನರಿಗೆ ಪ್ರೇರಣೆ ನೀಡಬಹುದೇ ವಿನಾ ಕಡ್ಡಾಯ ಮಾಡುವಂತಿಲ್ಲ. ಹೀಗಾಗಿ ಲಸಿಕಾ ಪ್ರಮಾಣ ಹೆಚ್ಚಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಮೊದಲಿಗೆ ಸರಕಾರಿ ಅಧಿಕಾರಿಗಳು ಲಸಿಕೆ ಪಡೆದು ಮಾದರಿಯಾಗಿ ಅನ್ನುವ ಕಾರಣಕ್ಕಾಗಿ ಟಾಸ್ಕ್ ಕೊಟ್ಟಿದ್ದಾರೆ.

ಈ ಬಗ್ಗೆ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ, ಜಿಲ್ಲಾ ಖಜಾನೆ ಅಧಿಕಾರಿ ಸರಕಾರಿ ನೌಕರರು ಲಸಿಕೆ ಪಡೆದಿರುವುದನ್ನು ದೃಢಪಡಿಸಿದ ಬಳಿಕವೇ ವೇತನ ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ. 

The order said salaries of government employees will not be disbursed if they fail to get vaccinated till July 31. The salaries of employees for July will be credited only after producing the vaccination certificate, a district official said.