ಬ್ರೇಕಿಂಗ್ ನ್ಯೂಸ್
23-06-21 09:15 pm Headline Karnataka News Network ದೇಶ - ವಿದೇಶ
ಕೊಲ್ಕತ್ತಾ, ಜೂನ್ 23: ಭಾರತಕ್ಕೆ ಹೋಲಿಸಿದರೆ ಬಾಂಗ್ಲಾ ದೇಶ ತೀರ ಸಣ್ಣ ದೇಶ. ಆದರೆ, ಬಾಂಗ್ಲಾ ಹಿಲ್ಸಾ ಮೀನಿನ ವಿಚಾರದಲ್ಲಿ ಸಮೃದ್ಧ. ಪಶ್ಚಿಮ ಬಂಗಾಳ, ಬಿಹಾರದಲ್ಲಿ ಭಾರೀ ಬೇಡಿಕೆ ಇರುವ ಹಿಲ್ಸಾ ಮೀನುಗಳನ್ನು ಅತಿ ಹೆಚ್ಚು ಪೂರೈಕೆ ಮಾಡುತ್ತಿರುವುದು ಬಾಂಗ್ಲಾ ದೇಶ. ಆದರೆ, ಇದೇ ಹಿಲ್ಸಾ ಮೀನನ್ನು ಬಾಂಗ್ಲಾ ಭಾರತಕ್ಕೆ ಪೂರೈಕೆ ಮಾಡುವುದಿಲ್ಲ ಎಂದು ಮುನಿಸು ಮಾಡಿಕೊಂಡಿದ್ಯಂತೆ.. ಇದಕ್ಕೆ ಕಾರಣ, ಭಾರತ ಬಾಂಗ್ಲಾ ದೇಶೀಯರಿಗೆ ಕೊರೊನಾ ಲಸಿಕೆ ನೀಡದೇ ಇರುವುದು.
ಭಾರತ ಮೊದಲಿಗೆ, ಇಲ್ಲಿನ ಜನ ಲಸಿಕೆ ಪಡೆದಿಲ್ಲ ಎಂದು ಅಕ್ಕಪಕ್ಕದ ರಾಷ್ಚ್ರಗಳಿಗೆ ಲಸಿಕೆ ಪೂರೈಕೆ ಮಾಡಿತ್ತು. ಬಾಂಗ್ಲಾ ದೇಶಕ್ಕೂ 14 ಲಕ್ಷದಷ್ಟು ಲಸಿಕೆಯನ್ನು ಪೂರೈಕೆ ಮಾಡಿತ್ತು. ಆದರೆ, ಈಗ ದೇಶದಲ್ಲಿ ಲಸಿಕೆಗೆ ಭಾರೀ ಬೇಡಿಕೆ ಬಂದಿರುವುದರಿಂದ ಬೇರೆ ದೇಶಗಳಿಗೆ ಲಸಿಕೆ ಕೊಡುವುದಕ್ಕೆ ಭಾರತ ಸರಕಾರ ನಿರ್ಬಂಧ ಹೇರಿದೆ. ಇದರಿಂದಾಗಿ ಬಾಂಗ್ಲಾದೇಶ ಕೇಳುತ್ತಿದ್ದರೂ, ಲಸಿಕೆ ಕೊಡುತ್ತಿಲ್ಲ ಎನ್ನಲಾಗಿದೆ.
ಈ ಬಗ್ಗೆ ಪಶ್ಚಿಮ ಬಂಗಾಳದಲ್ಲಿ ಭಾರೀ ಪ್ರಸಿದ್ಧಿ ಗಳಿಸಿರುವ ಆನಂದ್ ಬಾಝಾರ್ ಪತ್ರಿಕೆ ಒಂದು ವಿಭಿನ್ನ ಸುದ್ದಿ ಪ್ರಕಟಿಸಿದೆ. ಭಾರತೀಯರು ಲಸಿಕೆ ಕೊಡದೇ ಇದ್ದರೆ, ಬಾಂಗ್ಲಾನ್ನರು ಹಿಲ್ಸಾ ಮೀನನ್ನು ಕೊಡದೆ ಮುಯ್ಯಿ ತೀರಿಸುತ್ತಾರಂತೆ ಎಂದು. ಹಿಲ್ಸಾ ಮೀನುಗಳ ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ರೀತಿಯ ಸುದ್ದಿ ಪಶ್ಚಿಮ ಬಂಗಾಳದಲ್ಲಿ ಹರಿದಾಡುತ್ತಿದ್ದು, ಅದನ್ನು ಆಧರಿಸಿ ಸುದ್ದಿ ಮಾಡಿತ್ತು. ಕಳೆದ ಬಾರಿಯೂ ಹಿಲ್ಸಾ ಮೀನುಗಳ ರಫ್ತಿಗೆ ಬಾಂಗ್ಲಾದ ಶೇಖ್ ಹಸೀನಾ ಸರಕಾರ ನಿಷೇಧ ಹೇರಿತ್ತು. ಬಳಿಕ ಪಶ್ಚಿಮ ಬಂಗಾಳ ಸರಕಾರದ ಕೋರಿಕೆ ಮೇರೆಗೆ, ಕಳೆದ ಬಾರಿ ಪಶ್ಚಿಮ ಬಂಗಾಳದ ಪ್ರಸಿದ್ಧ ಹಬ್ಬ ಜಮಾಯಿ ಷಷ್ಟಿ ಸಂದರ್ಭದಲ್ಲಿ ಎರಡು ಟನ್ ಹಿಲ್ಸಾ ಮೀನುಗಳನ್ನು ಪೂರೈಕೆ ಮಾಡಿತ್ತು. ಈ ಬಾರಿ ಲಾಕ್ಡೌನ್ ಇದ್ದುದರಿಂದ ಜಮಾಯಿ ಷಷ್ಠಿ ಹಬ್ಬ ನಡೆದೇ ಇಲ್ವಂತೆ.
ಬಾಂಗ್ಲಾದೇಶ ಸರಕಾರ ಹಿಲ್ಸಾ ಮೀನುಗಳಿಗೆ ಯಾವ ಕಾರಣಕ್ಕೆ ನಿರ್ಬಂಧ ಹೇರಿದ್ದೋ ಗೊತ್ತಿಲ್ಲ. ಲಸಿಕೆ ಕಾರಣಕ್ಕೆ ನಿರ್ಬಂಧಿಸಿರುವ ಸುದ್ದಿಗಳನ್ನು ಪಶ್ಚಿಮ ಬಂಗಾಳದ ರಾಜಕೀಯ ತಜ್ಞರು ನಿರಾಕರಿಸಿದ್ದಾರೆ. ಕೇವಲ ಹಿಲ್ಸಾ ಮೀನುಗಳ ಕಾರಣಕ್ಕೆ ಎರಡು ದೇಶಗಳ ಬಾಂಧವ್ಯ ಹಳಸಿ ಹೋಗಲ್ಲ. ಅದೆಲ್ಲ ಬೊಗಳೆ ಸುದ್ದಿ ಎಂದು ಹೇಳಿದ್ದಾರೆ.
ಕಳೆದ ಬಾರಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಗಡಿ ವಿಚಾರದಲ್ಲಿ ಒಪ್ಪಂದಕ್ಕೆ ಸಹಿ ಹಾಕುವುದಕ್ಕಾಗಿ ಢಾಕಾಕ್ಕೆ ತೆರಳಿದ್ದರು. ಆಗ ಡಿನ್ನರ್ ನೀಡಿದ್ದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ತಮಗೆ ನೀಡಿದ್ದ ಖಾದ್ಯ ವೈವಿಧ್ಯಗಳ ಬಗ್ಗೆ ತಮಾಷೆಯಾಗಿ ಒಂದು ಪ್ರಶ್ನೆ ಮುಂದಿಟ್ಟಿದ್ದರು. ಇದೇನು ಮೆನುವಿನಲ್ಲಿ ಹಿಲ್ಸಾ ಮೀನುಗಳ ವೆರೈಟಿಯನ್ನೇ ಇಟ್ಟಿದ್ದೀರಿ ಎಂದು ಹಸೀನಾ ಶೇಖ್ ಅವರನ್ನು ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ಹಸೀನಾ ಶೇಖ್, ತೀಸ್ತಾ ನದಿಯಲ್ಲಿ ಶೀಘ್ರದಲ್ಲೇ ನೀರಿನ ಮಟ್ಟ ಏರಲಿದೆ. ಆಗ ಹಿಲ್ಸಾ ಮೀನುಗಳು ಹೇಗೂ ಬಾಂಗ್ಲಾ ಗಡಿಯನ್ನು ದಾಟಿ ಬಂಗಾಳ ಸೇರಲಿವೆ ಎಂದು ಹೇಳಿ ನಕ್ಕಿದ್ದರು.
ನೋಡುವುದಕ್ಕೆ ಕರಾವಳಿಯಲ್ಲಿ ತುಳುವರು ಸ್ವಾಡಿ, ಕಾರವಾರದಲ್ಲಿ ಪೇಡಿ ಎಂಬ ಹೆಸರಲ್ಲಿ ಕರೆಯುವ ಮೀನುಗಳ ರೀತಿಯದ್ದೇ ಮಾದರಿಯ ಹಿಲ್ಸಾ ಮೀನುಗಳು ಪಶ್ಚಿಮ ಬಂಗಾಳದಲ್ಲಿ ಭಾರೀ ಜನಪ್ರಿಯ.
India has a huge fan base for the delectable Hilsa fish, a major import from Bangladesh. However, if sources are to be believed, Bangladesh has decided to take on the short supply of Covid vaccines from India by hitting where it hurts the most for a food-loving country like ours: Bangladesh is restricting the export of Hilsa to India, according to Ananda Bazar Patrika (ABP).
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm