ಮತ್ತೆ ಉದ್ಧಟತನ ; ಭಾರತದ ಮುಕುಟಮಣಿ ಕಾಶ್ಮೀರವನ್ನೇ ಪ್ರತ್ಯೇಕಿಸಿ ಟ್ವಿಟರ್ ಮ್ಯಾಪ್ !

28-06-21 04:33 pm       Headline Karnataka News Network   ದೇಶ - ವಿದೇಶ

ಎರಡು ದಿನಗಳ ಹಿಂದೆ ಕೇಂದ್ರ ಐಟಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ಟ್ವಿಟರ್ ಖಾತೆಯನ್ನೇ ಬ್ಲಾಕ್ ಮಾಡಿ ಎಡವಟ್ಟು ಮಾಡಿಕೊಂಡಿದ್ದ ಟ್ವಿಟರ್ ಕಂಪನಿ, ಈಗ ತನ್ನ ವೆಬ್ ಸೈಟಿನಲ್ಲಿ ಭಾರತದ ಮುಕುಟ ಮಣಿ ಜಮ್ಮು ಕಾಶ್ಮೀರವನ್ನೇ ತೆಗೆದುಹಾಕಿ ಉದ್ಧಟತನ ಮೆರೆದಿದೆ.

ನವದೆಹಲಿ, ಜೂನ್ 28: ಎರಡು ದಿನಗಳ ಹಿಂದೆ ಕೇಂದ್ರ ಐಟಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ಟ್ವಿಟರ್ ಖಾತೆಯನ್ನೇ ಬ್ಲಾಕ್ ಮಾಡಿ ಎಡವಟ್ಟು ಮಾಡಿಕೊಂಡಿದ್ದ ಟ್ವಿಟರ್ ಕಂಪನಿ, ಈಗ ತನ್ನ ವೆಬ್ ಸೈಟಿನಲ್ಲಿ ಭಾರತದ ಮುಕುಟ ಮಣಿ ಜಮ್ಮು ಕಾಶ್ಮೀರವನ್ನೇ ತೆಗೆದುಹಾಕಿ ಉದ್ಧಟತನ ಮೆರೆದಿದೆ. ಭಾರತದ ಭೂಪಟದಲ್ಲಿ ಜಮ್ಮು ಕಾಶ್ಮೀರ ಮತ್ತು ಲಡಾಖನ್ನು ಪ್ರತ್ಯೇಕಿಸಿ, ತೋರಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಭಾರತದ ಭೂಪಟವನ್ನು ಟ್ವಿಟರ್ ವಿರೂಪವಾಗಿಸಿದ್ದು ಇದು ಮೊದಲೇನಲ್ಲ. ಒಂದು ವರ್ಷದ ಹಿಂದೆ, ಭಾರತದ ಭೂಭಾಗ ಲೇಹ್ ಪ್ರಾಂತ್ಯವನ್ನು ಚೀನಾಕ್ಕೆ ಸೇರಿಸಿ ಎಡವಟ್ಟು ಮಾಡಿಕೊಂಡಿತ್ತು. ಈ ಬಗ್ಗೆ ಟ್ವಿಟರ್ ಸಿಇಓಗೆ ಗಂಭೀರ ಎಚ್ಚರಿಕೆ ನೀಡಿದ್ದ ಕೇಂದ್ರ ಸರಕಾರ, ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಅಗೌರವ ಸೂಚಿಸುವುದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲಾಗದು ಎಂದಿತ್ತು. ಆದರೆ, ಟ್ವಿಟರ್ ಈಗ ಕೇಂದ್ರ ಸರಕಾರದ ಜೊತೆ ಐಟಿ ರೂಲ್ಸ್ ನೆಪದಲ್ಲಿ ಜಟಾಪಟಿ ನಡೆಸುತ್ತಿರುವ ಮಧ್ಯೆಯೇ ಭಾರತದ ಮ್ಯಾಪನ್ನು ವಿರೂಪಗೊಳಿಸಿ ಹಳೆ ಬುದ್ಧಿಯನ್ನು ತೋರಿಸಿದೆ.

ಟ್ವಿಟರ್ ನಡೆಯ ಬಗ್ಗೆ ಹಲವಾರು ಮಂದಿ ಆಕ್ರೋಶಿತರಾಗಿ ಟ್ವೀಟ್ ಮಾಡಿದ್ದಾರೆ. ಕೇಂದ್ರ ಸರಕಾರದ ಪ್ರತಿನಿಧಿಗಳನ್ನು ಗುರಿಯಾಗಿಸಿ, ಟ್ವಿಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇತ್ತೀಚೆಗಷ್ಟೇ ಹೊಸ ಐಟಿ ನಿಯಮ ಜಾರಿಗೊಳಿಸಿದ್ದ ಕೇಂದ್ರ ಸರಕಾರ ಅದನ್ನು ಪಾಲಿಸುವಂತೆ ಎಲ್ಲ ಸೋಶಿಯಲ್ ಮೀಡಿಯಾಗಳಿಗೂ ಕಟ್ಟಪ್ಪಣೆ ಹೊರಡಿಸಿದೆ. ಆದರೆ, ಟ್ವಿಟರ್ ಸೇರಿದಂತೆ ಅಮೆರಿಕ ಮೂಲದ ಜಾಲತಾಣದ ಕಂಪನಿಗಳು ಅದನ್ನು ಪಾಲಿಸಲು ಮೀನ ಮೇಷ ಎಣಿಸುತ್ತಿದೆ. ವಾಟ್ಸಪ್ ಮತ್ತು ಟ್ವಿಟರ್ ಕಂಪನಿ ದೆಹಲಿಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದರೆ, ಇನ್ನು ಕೆಲವು ಸೋಶಿಯಲ್ ಮೀಡಿಯಾಗಳು ಕಾನೂನು ಒಪ್ಪಿಕೊಂಡು ಪಾಲನೆಗೆ ಮುಂದಾಗಿವೆ. 

The map on the "Tweep Life" section of Twitter shows Jammu and Kashmir, and Ladakh, outside India. This is the second time Twitter has misrepresented India's map. Earlier it had shown Leh as part of China.