ಕಮರಿಗೆ ಬಿದ್ದ ಪಿಕಪ್​ ವಾಹನ ; 9 ಮಂದಿ ಸಾವು

29-06-21 01:17 pm       Headline Karnataka News Network   ದೇಶ - ವಿದೇಶ

ಪಿಕಪ್​ ವಾಹನವೊಂದು ಆಳವಾದ ಕಂದಕಕ್ಕೆ ಬಿದ್ದು 9 ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಸಿರ್ಮೌರ್​​ ಜಿಲ್ಲೆಯಲ್ಲಿ ನಡೆದಿದೆ.

Photo credits : ANI @ ANI

ಹಿಮಾಚಲ ಪ್ರದೇಶ, ಜೂನ್ 29: ಪಿಕಪ್​ ವಾಹನವೊಂದು ಆಳವಾದ ಕಂದಕಕ್ಕೆ ಬಿದ್ದು 9 ಮಂದಿ ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಸಿರ್ಮೌರ್​​ ಜಿಲ್ಲೆಯಲ್ಲಿ ನಡೆದಿದೆ. ಮದುವೆ ಸಮಾರಂಭಕ್ಕೆ ಹೋಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. 

ಶಿಲ್ಲೈ ಉಪವಿಭಾಗದ, ಪಾವೊಂಟಾ ಸಾಹಿಬ್ ಗಡಿ ಬಳಿ ಇರುವ ಪಾಶೋಗ್ ಬಳಿ ನಿಯಂತ್ರಣ ಕಳೆದುಕೊಂಡ ಪಿಕಪ್ ಕಮರಿಗೆ ಬಿದ್ದಿದೆ ಎಂದು ಪಾವೊಂಟಾ ಪೊಲೀಸ್​ ಅಧಿಕಾರಿ ಬೀರ್​ ಬಹದ್ದೂರ್​ ಹೇಳಿದ್ದಾರೆ. ಹಾಗೇ, ಸ್ಥಳೀಯ ಪೊಲೀಸ್​ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೂವರಿಗೆ  ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ 

ಇನ್ನು ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿ ಪ್ರಧಾನಿ ಮಂತ್ರಿ ಕಚೇರಿ ಟ್ವೀಟ್ ಮಾಡಿದೆ. ಸಿರ್ಮೌರ್​ ಅಪಘಾತದ ವಿಷಯ ಕೇಳಿ ತುಂಬ ನೋವಾಯಿತು. ಮೃತರ ಕುಟುಂಬಗಳಿಗೆ ಸಾಂತ್ವನಗಳು. ಹಾಗೇ, ಗಾಯಗೊಂಡವರು ಬೇಗನೇ ಗುಣಮುಖರಾಗಲೆಂದು ಹಾರೈಸುತ್ತೇವೆ. ಈ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ನೀಡಲಾಗುವುದು. ಹಾಗೇ, ಗಾಯಗೊಂಡವರಿಗೆ ತಲಾ 50 ಸಾವಿರ ರೂ.ಕೊಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಿಳಿಸಿದ್ದಾಗಿ ಟ್ವೀಟ್​​ನಲ್ಲಿ ಹೇಳಲಾಗಿದೆ.

Nine people died and three others were injured as a vehicle fell into a deep gorge in Himachal Pradesh’s Sirmaur district on Monday, an official said.