ಬ್ರೇಕಿಂಗ್ ನ್ಯೂಸ್
30-06-21 11:15 am Headline Karnataka News Network ದೇಶ - ವಿದೇಶ
ಥೈಲ್ಯಾಂಡ್, ಜೂನ್ 30: ಪ್ರೇಮಿಗಳ ನಡುವೆ ಬ್ರೇಕ್ ಅಪ್ ಆದಾಗ ಮನಸ್ಸಿಗೆ ಆಘಾತವಾಗುವುದು ಸಹಜ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಗಾಗಿ ಬ್ರೇಕ್ ಅಪ್ ಆಗುತ್ತದೆ. ಕೆಲವರು ಎಲ್ಲವನ್ನೂ ಮರೆತು ಹೊಸ ಜೀವನ ಆರಂಭಿಸುತ್ತಾರೆ.
ಇನ್ನು ಕೆಲವರು ತಮ್ಮ ಮಾಜಿ ಪ್ರೇಮಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾರೆ. ಹೀಗೆ ಸೇಡು ತೀರಿಸಿಕೊಳ್ಳಲು ಮುಂದಾಗುವವರು ತಾವು ಸಂಕಷ್ಟಕ್ಕೆ ಸಿಲುಕುವುದರ ಜೊತೆಗೆ ಇತರರಿಗೂ ಸಂಕಷ್ಟವನ್ನು ತಂದಿಡುತ್ತಾರೆ. ಇತ್ತೀಚಿಗೆ ಇದೇ ರೀತಿಯ ಘಟನೆಯೊಂದು ಥೈಲ್ಯಾಂಡ್‌ನಲ್ಲಿ ನಡೆದಿದೆ.
ಥೈಲ್ಯಾಂಡ್‌ನ 36 ವರ್ಷದ ಮಹಿಳೆ ಹಾಗೂ ಪುರುಷನೊಬ್ಬ ಪರಸ್ಪರ ಪ್ರೀತಿಸುತ್ತಿದ್ದರು. ಈ ಇಬ್ಬರ ನಡುವೆ ಆಗಾಗ ಸಣ್ಣ ಪುಟ್ಟ ಕಾರಣಗಳಿಗಾಗಿ ಜಗಳವಾಗುತ್ತಿತ್ತು. ಇತ್ತೀಚಿಗೆ ಆತ ಆಕೆಯಿಂದ ದೂರವಾಗುವ ಮಾತನಾಡಿದ್ದಾನೆ.
ತಮ್ಮಿಬ್ಬರ ನಡುವೆ ಹೊಂದಾಣಿಕೆಯಾಗುತ್ತಿಲ್ಲವಾದ್ದರಿಂದ ದೂರಾಗುವುದು ಒಳಿತು ಎಂದು ಆತ ಹೇಳಿದ್ದಾನೆ. ಮಹಿಳೆ ಆತನ ಮನವೊಲಿಸಲು ಸಾಕಷ್ಟು ಪ್ರಯತ್ನ ಪಟ್ಟರೂ ಆತನ ಮನ ಕರಗಿಲ್ಲ.

ಇದರಿಂದ ಆಕ್ರೋಶಗೊಂಡ ಆಕೆ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ಆತ ಕೆಲಸ ಮಾಡುವ ಶಾಲೆಯ ಬಳಿ ತೆರಳಿದ್ದಾಳೆ. ಅಲ್ಲಿಂದ ಪಾರ್ಕಿಂಗ್ ಪ್ರದೇಶಕ್ಕೆ ಹೋಗಿದ್ದಾಳೆ.
ಅಲ್ಲಿ ನಿಲ್ಲಿಸಿದ್ದ ಆತನ ಬೈಕಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಒಂದು ಮಿಲಿಯನ್ ಬಹ್ತ್ ಅಂದರೆ ರೂ.28 ಲಕ್ಷ ರೂಪಾಯಿ ಮೌಲ್ಯದ ಈ ಟ್ರಯಂಫ್ ಬೈಕ್ ಅನ್ನು ಆಕೆ ಆತನಿಗೆ ಉಡುಗೊರೆಯಾಗಿ ನೀಡಿದ್ದಳು ಎಂಬುದು ವಿಶೇಷ.
ಬೈಕಿಗೆ ಬೆಂಕಿ ಹಚ್ಚಿದ ನಂತರ ಆಕೆ ಸ್ಥಳದಿಂದ ಹೊರಟು ಹೊರಗೆ ನಿಲ್ಲಿಸಿದ್ದ ಕಾರಿನಲ್ಲಿ ಪರಾರಿಯಾಗಿದ್ದಾಳೆ. ಈ ದೃಶ್ಯಗಳೆಲ್ಲವೂ ಪಾರ್ಕಿಂಗ್ ಪ್ರದೇಶದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲವಾದರೂ ಆ ಬೈಕಿನ ಸಮೀಪದಲ್ಲಿ ನಿಲ್ಲಿಸಿದ್ದ ಇತರ ಆರು ವಾಹನಗಳು ಬೆಂಕಿಯಿಂದ ಹಾನಿಗೀಡಾಗಿವೆ. ಪಾರ್ಕಿಂಗ್ ಪ್ರದೇಶದಲ್ಲಿ ಉಳಿದ ವಾಹನಗಳನ್ನು ಪರಸ್ಪರ ಹತ್ತಿರ ನಿಲ್ಲಿಸಲಾಗಿದ್ದ ಕಾರಣಕ್ಕೆ ಅವುಗಳಿಗೂ ಬೆಂಕಿ ತಗುಲಿದೆ.
ಬೈಕಿನ ಮೇಲೆ ಹೆಚ್ಚು ಪೆಟ್ರೋಲ್ ಸುರಿದು ಬೈಕಿನ ಹತ್ತಿರ ಹೋಗಿದ್ದ ಕಾರಣ ಆಕೆಗೂ ಬೆಂಕಿ ತಗುಲುವ ಸಾಧ್ಯತೆಗಳಿದ್ದವು. ಆದರೆ ಅಷ್ಟರಲ್ಲಿ ಆಕೆ ಪಾರಾಗಿದ್ದಾಳೆ. ಸಿಸಿಟಿವಿಯಲ್ಲಿದ್ದ ಮುಂದಿನ ದೃಶ್ಯದಲ್ಲಿ ಆ ಮಹಿಳೆ ಕೆಂಪು ಬಣ್ಣದ ಕಾರಿನಲ್ಲಿ ಪರಾರಿಯಾಗುವುದನ್ನು ಕಾಣಬಹುದು.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ದೊಡ್ಡ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ. ಈ ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
A woman in Thailand set his ex-boyfriend's bike on fire to take revenge on him. CCTV footage of the incident has gone viral on social media.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm