ಬ್ರೇಕಿಂಗ್ ನ್ಯೂಸ್
02-07-21 05:46 pm Headline Karnataka News Network ದೇಶ - ವಿದೇಶ
ಪುಣೆ, ಜುಲೈ 2: ರಾಷ್ಟ್ರೀಯ ವೈದ್ಯರ ದಿನವೇ ಪುಣೆಯಲ್ಲಿ ಕುಟುಂಬ ಕಲಹದಿಂದ ಬೇಸತ್ತ ಯುವ ವೈದ್ಯ ದಂಪತಿ ಸಾವಿಗೆ ಶರಣಾಗಿದ್ದು ಆಘಾತ ಮೂಡಿಸಿದ್ದಾರೆ. ಜೀವನದ ಬಗ್ಗೆ ಜನಸಾಮಾನ್ಯರಿಗೆ ಪಾಠ ಹೇಳುವ ವೈದ್ಯರೇ ಈ ರೀತಿ ಸಾವಿಗೆ ಶರಣಾಗಿದ್ದು ಸುದ್ದಿಗೆ ಗ್ರಾಸವಾಗಿದೆ. ಅವರಿಬ್ಬರೂ ಬಿಎಎಂಎಸ್ ಪೂರೈಸಿದ ಆಯುರ್ವೇದಿಕ್ ವೈದ್ಯರು. 2019ರಲ್ಲಿ ಮದುವೆಯಾಗಿದ್ದ ದಂಪತಿ ಜೊತೆಯಾಗೇ ಕ್ಲಿನಿಕ್ ನಡೆಸುತ್ತಿದ್ದರು. ಆದರೆ, ಎರಡೇ ವರ್ಷದಲ್ಲಿ ಜೊತೆಯಾಗೇ ಸಾವಿನ ಹಾದಿಯನ್ನೂ ಹಿಡಿದಿದ್ದಾರೆ.
ನಿಖಿಲ್ ಶೇಂಡ್ಕರ್ (28) ಮತ್ತು ಅಂಕಿತಾ(25) ತಮ್ಮ ಮನೆಯಲ್ಲೇ ಮೃತಪಟ್ಟ ವೈದ್ಯ ದಂಪತಿ. 2019ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿ ವನ್ವಾಡಿಯಲ್ಲಿ ಜೊತೆಯಾಗೇ ಕ್ಲಿನಿಕ್ ತೆರೆದಿದ್ದರು. ಎರಡು ವರ್ಷಗಳಿಂದ ಯಾವುದೇ ಕಲಹವೂ ಇಲ್ಲದೆ ಕ್ಲಿನಿಕ್ ಮುಂದುವರಿದಿತ್ತು. ಇತ್ತೀಚೆಗೆ ಮೂರು ತಿಂಗಳ ಹಿಂದೆ ದಂಪತಿ ನಡುವೆ ಕಲಹ ಏರ್ಪಟ್ಟು ನಿಖಿಲ್ ಶೇಂಡ್ಕರ್ ಬೇರೆಯದ್ದೇ ಕ್ಲಿನಿಕ್ ಆರಂಭಿಸಿದ್ದ.
ದಂಪತಿ ಒಂದೇ ಮನೆಯಲ್ಲಿ ವಾಸ ಇದ್ದರೂ, ನಿಖಿಲ್ ಕಸೂರ್ದಿ ಯವತ್ ಎನ್ನುವ ಪ್ರದೇಶದಲ್ಲಿ ಪ್ರತ್ಯೇಕವಾಗಿ ಕ್ಲಿನಿಕ್ ನಡೆಸುತ್ತಿದ್ದ. ವನ್ವಾಡಿಯಲ್ಲಿದ್ದ ಹಳೆಯ ಕ್ಲಿನಿಕ್ ನಲ್ಲಿ ಪತ್ನಿ ಅಂಕಿತಾ ಮಾತ್ರ ಇದ್ದಳು. ಮೊನ್ನೆ ಬುಧವಾರ ಮಧ್ಯಾಹ್ನ ಹಳೆಯ ಪೇಶಂಟ್ ಪಾರ್ಟಿಯೊಬ್ಬರು ನಿಖಿಲ್ ಗೆ ಫೋನ್ ಮಾಡಿದ್ದರು. ತಲೆನೋವು ಇದ್ದುದರಿಂದ ಅರ್ಜೆಂಟ್ ಅಪಾಯಿಂಟ್ ಮೆಂಟ್ ಕೇಳಿದ್ದರು. ಆದರೆ, ನಾನು ಈಗ ವನ್ವಾಡಿಯಲ್ಲಿ ಇಲ್ಲ. ಅಲ್ಲಿ ನನ್ನ ಪತ್ನಿ ಇದ್ದಾಳೆ. ಅಲ್ಲಿ ಹೋಗಿ ಎಂದು ಫೋನ್ ಇಟ್ಟಿದ್ದ. ಆಬಳಿಕ ಪತ್ನಿಗೆ ಫೋನ್ ಮಾಡಿ, ಹಳೆಯ ಪೇಶಂಟ್ ಒಬ್ಬರು ಬರುತ್ತಿದ್ದಾರೆ ಎಂದಿದ್ದ. ಆದರೆ, ಅಂಕಿತಾ ಪೇಶಂಟ್ ನೋಡಲು ನಿರಾಕರಿಸಿದ್ದಳು. ಅಲ್ಲದೆ, ಇದೇ ವಿಚಾರದಲ್ಲಿ ಇಬ್ಬರ ನಡುವೆಯೂ ಫೋನಲ್ಲಿ ಭಾರೀ ವಾಗ್ಯುದ್ಧ ನಡೆದು ಹೋಗಿತ್ತು. ಸಂಜೆ ನಾಲ್ಕು ಗಂಟೆ ಸುಮಾರಿಗೆ ಇಬ್ಬರ ಮಧ್ಯೆ ಫೋನ್ ಜಗಳ ನಡೆದಿತ್ತು.
ಆನಂತರ 5.15 ಗಂಟೆ ಸುಮಾರಿಗೆ ನಿಖಿಲ್ ನೇರವಾಗಿ ತನ್ನ ಅಪಾರ್ಟ್ಮೆಂಟಿಗೆ ಬಂದಿದ್ದಾನೆ. ಆದರೆ, ಮನೆಯ ಹೊರಭಾಗದಲ್ಲಿ ಬಾಗಿಲಿಗೆ ಒಳಗಿಂದ ಲಾಕ್ ಹಾಕಲಾಗಿತ್ತು. ಫೋನ್ ಮಾಡಿದರೆ ನೋ ರೆಸ್ಪಾನ್ಸ್ ಇತ್ತು. ಕರೆದರೂ ಬಾಗಿಲು ತೆರೆಯದೇ ಇದ್ದುದರಿಂದ ಗಾಬರಿಗೊಂಡು ಪೊಲೀಸರಿಗೂ ವಿಷಯ ತಿಳಿಸಿದ. ಆನಂತರ ಬಾಗಿಲು ಒಡೆದು ಮನೆಯ ಒಳಹೊಕ್ಕಾಗ ಪತ್ನಿ ಡ್ಯುಪ್ಲೆಕ್ಸ್ ಮನೆಯ ಮೂರನೇ ಮಹಡಿಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ. ಕೂಡಲೇ ಆಕೆಯನ್ನು ಇಳಿಸಿದ ನಿಖಿಲ್, ಪಕ್ಕದ ಆಸ್ಪತ್ರೆಗೆ ಪೊಲೀಸರ ಜೊತೆ ಸೇರಿ ಕೊಂಡೊಯ್ದಿದ್ದಾನೆ. ಅಲ್ಲಿನ ತಪಾಸಣೆ ನಡೆಸಿದ ವೈದ್ಯರು, ಅಂಕಿತಾ ಸಾವು ಆಗಿರುವ ಬಗ್ಗೆ ತಿಳಿಸಿದ್ದಾರೆ.
ಪೊಲೀಸರು ಅಸಹಜ ಸಾವಿನ ಬಗ್ಗೆ ಕೇಸ್ ರಿಜಿಸ್ಟರ್ ಮಾಡಿಕೊಂಡು ಅಲ್ಲಿಂದ ತೆರಳಿದ್ದರೆ, ಇತ್ತ ನಿಖಿಲ್ ನೇರವಾಗಿ ತನ್ನ ಮನೆಗೆ ಬಂದು ಸಂಜೆ 7.30ರ ಸುಮಾರಿಗೆ ನೇಣು ಬಿಗಿದುಕೊಂಡಿದ್ದಾನೆ. ಪತ್ನಿ ಸಾವಿಗೆ ಶರಣಾದ ಆಘಾತವೋ, ತನ್ನ ಬಗೆಗೇ ಆದ ಪರಿತಾಪವೋ ನಿಖಿಲ್ ಶೇಂಡ್ಕರ್ ಕೂಡ ತನ್ನದೇ ಮನೆಯ ಬಾತ್ ರೂಮಿನಲ್ಲಿ ಸಾವು ಕಂಡಿದ್ದ. ಅಲ್ಲದೆ, ಡೆತ್ ನೋಟ್ ಬರೆದಿಟ್ಟಿದ್ದು ನನ್ನ ಸಾವಿಗೆ ಯಾರೂ ಕಾರಣರಿಲ್ಲ. ಯಾರನ್ನೂ ದೂಷಿಸುವುದಿಲ್ಲ ಎಂದು ಹೇಳಿ ಸಾವಿಗೆ ಕೊರಳೊಡ್ಡಿದ್ದ. ಇಬ್ಬರು ಯುವ ವೈದ್ಯರ ಸಾವಿಗೆ ಏನು ಕಾರಣ ಅನ್ನೋದರ ಬಗ್ಗೆ ವನ್ವಾಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾವು, ನೋವು, ಜೀವನದ ಬಗ್ಗೆ ಬೇರೆಯವರಿಗೆ ಪಾಠ ಹೇಳುವ ವೈದ್ಯರೇ ಈ ರೀತಿ ಇಗೋ ಇಟ್ಟುಕೊಂಡು ಜೀವನದ ಬಂಡಿಗೇ ಇತಿಶ್ರೀ ಹಾಕಿದ್ದು ಪುಣೆಯಲ್ಲಿ ದೊಡ್ಡ ಸುದ್ದಿಯಾಗಿದೆ.
A couple, both doctors with BAMS degrees, died by suicide within hours of each other, said police on Thursday. Nikhil Shendkar (28) and his wife Ankita (25) were both found dead at their residence in Azad Nagar in Wanavdi.
16-07-25 07:05 pm
Bangalore Correspondent
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
16-07-25 01:01 pm
Mangalore Correspondent
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
16-07-25 04:37 pm
HK News Desk
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm
Lawrence Bishnoi, Bangalore, Crime: ಡಾನ್ ಲಾರೆ...
15-07-25 06:52 pm
Mangalore, Moodbidri college, Rape, Blackmail...
15-07-25 06:07 pm