23,123 ಕೋಟಿ ರೂ ತುರ್ತು ಕೊರೊನಾ ಪ್ಯಾಕೇಜ್ ಘೋಷಣೆ ; ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಆರೋಗ್ಯ ಸಚಿವರ ಆರ್ಡರ್

09-07-21 12:03 pm       Headline Karnataka News Network   ದೇಶ - ವಿದೇಶ

ಮನ್ಸುಖ್ ಮಾಂಡವಿಯಾ ಅಧಿಕಾರ ಸ್ವೀಕಾರದ ಮೊದಲ ದಿನವೇ ಕೊರೊನಾ ಸೋಂಕಿನ ನಿರ್ವಹಣೆ ಸಂಬಂಧ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.

ನವದೆಹಲಿ, ಜುಲೈ 09: ನೂತನ ಆರೋಗ್ಯ ಸಚಿವರಾಗಿ ಮನ್ಸುಖ್ ಮಾಂಡವಿಯಾ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕಾರದ ಮೊದಲ ದಿನವೇ ಕೊರೊನಾ ಸೋಂಕಿನ ನಿರ್ವಹಣೆ ಸಂಬಂಧ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.

ಮೊಟ್ಟ ಮೊದಲನೆಯದಾಗಿ ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ 23,123 ಕೋಟಿ ರೂಪಾಯಿ ತುರ್ತು ಪ್ಯಾಕೇಜನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

ಗುರುವಾರ ಆರೋಗ್ಯ ಸಚಿವರಾಗಿ ಮೊದಲ ಸಭೆ ನಡೆಸಿದ ಅವರು, ಆದ್ಯತೆಯಲ್ಲಿ, ದೇಶದಲ್ಲಿ ಕೊರೊನಾ ನಿರ್ವಹಣೆ ಸಂಬಂಧ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದರು. ಕೊರೊನಾ ಎರಡನೇ ಅಲೆಯಲ್ಲಿ ಸೃಷ್ಟಿಯಾದ ಸಮಸ್ಯೆಗಳನ್ನು ಎದುರಿಸಲು 23 ಸಾವಿರ ಕೋಟಿ ರೂಗಳ ಪ್ಯಾಕೇಜ್ ಬಿಡುಗಡೆ ಮಾಡಲಾಗುವುದು. ಈ ಪರಿಹಾರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಬಳಸಲಿವೆ ಎಂದು ಹೇಳಿದರು.

"ಕೊರೊನಾ ವಿರುದ್ಧ ನಾವು ಸಾಮೂಹಿಕವಾಗಿ ಹೋರಾಡಬೇಕಿದೆ. ನಮ್ಮ ಮಿತಿಯ ಅವಧಿ ಗರಿಷ್ಠ ಒಂಬತ್ತು ತಿಂಗಳಾಗಿವೆ. ಕೊರೊನಾ ನಿರ್ವಹಣೆಯಲ್ಲಿ ಸಾಧ್ಯವಾದ ರೀತಿಯಲ್ಲಿ ರಾಜ್ಯಗಳಿಗೆ ನೆರವಾಗುವುದು ನಮ್ಮ ಕರ್ತವ್ಯವಾಗಿದೆ" ಎಂದು ತಿಳಿಸಿದರು.

"ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ 736 ಜಿಲ್ಲೆಗಳಲ್ಲಿ ಮಕ್ಕಳ ಕೊರೊನಾ ಕೇಂದ್ರಗಳನ್ನು ತೆರೆಯಲಾಗುವುದು. 20 ಸಾವಿರ ಐಸಿಯು ಬೆಡ್‌ಗಳ ನಿರ್ಮಾಣ ಮಾಡಲಾಗುವುದು" ಎಂದು ಮಾಹಿತಿ ನೀಡಿದರು.

The Centre on Thursday approved a Rs 23,000 crore emergency response package for combating the Covid-19 pandemic.